ನವದೆಹಲಿ – ಹಿಂದಿ ಚಿತ್ರರಂಗದ ಹಿರಿಯ ನಟ, ಮಿಥುನ್ ದಾ ಎಂದು ಕರೆಯಲ್ಪಡುವ ಬಂಗಾಳದ ನಟ ಮಿಥುನ್ ಚಕ್ರವರ್ತಿ ಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ.
೧೯೮೦ ರ ದಶಕದಲ್ಲಿ ಡಿಸ್ಕೋ ಡಾನ್ಸರ್ ರೂಪದಲ್ಲಿ ಅಂದಿನ ಯುವ ಸಮೂಹದ ಮುಖ್ಯ ಆಕರ್ಷಣೆಯಾಗಿದ್ದ ಮಿಥುನ್ ಚಕ್ರವರ್ತಿ ೩೫೦ ಕ್ಕೂ ಹೆಚ್ಚು ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ, ಬಂಗಾಳಿ, ಭೋಜಪುರಿ, ತೆಲುಗು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಪಶ್ಚಿಮ ಬಂಗಾಳದ ಈ ಹಿರಿಯ ನಟನಿಗೆ ಕಳೆದ ವರ್ಷವಷ್ಟೆ ಪದ್ಮ ಭೂಷಣ ಪ್ರಶಸ್ತಿ ದೊರಕಿತ್ತು. ೧೯೭೭ ರಲ್ಲಿ ರಾಷ್ಟ್ರ ಪ್ರಶಸ್ತಿ ಮಿಥುನ್ ಅವರಿಗೆ ದೊರಕಿತ್ತು.
ತಮ್ಮ ನೂತನ ವಿಧಾನದ ಡಿಸ್ಕೋ ನೃತ್ಯದೊಂದಿಗೆ ಯುವ ಸಮೂಹವನ್ನು ಡಾನ್ಸ್ ಸನ್ನಿಗೆ ಒಳಪಡಿಸಿದ್ದ ಮಿಥುನ್ ಚಕ್ರವರ್ತಿ ಅಂದಿನ ದಿನಗಳಲ್ಲಿ ಅಮಿತಾಭ ಬಚ್ಚನ್ ಅವರಿಗಿಂತಲೂ ಜನಪ್ರಿಯ ನಟರಾಗಿದ್ದರು. ಐ ಆ್ಯಮ್ ಅ ಡಿಸ್ಕೋ ಡಾನ್ಸರ್ ಎಂಬ ಅವರ ನೃತ್ಯದ ಹಾಡು ಇನ್ನೂ ಜನಪ್ರಿಯ ಗೀತೆಯಾಗಿದೆ.
ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ಅತ್ಯುನ್ನತ ಸಮ್ಮಾನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ಚಿತ್ರರಂಗದ ಅನೇಕ ಹಿರಿಯ ನಟರಿಂದ ಸಂತೋಷ ಹಾಗು ಹೆಮ್ಮೆ ವ್ಯಕ್ತಗೊಂಡಿದೆ.