spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಶರಣ ಮೋಳಿಗೆ ಮಾರಯ್ಯ

12ನೇ ಶತಮಾನ ಬಸವಣ್ಣನವರ ಒಂದು ಕ್ರಾಂತಿ ಯುಗವೆಂದೆ ಹೇಳಬಹುದು. ಶರಣರ ವಚನ ಸಾಹಿತ್ಯ ಬಸವಣ್ಣನವರ ವಿಚಾರಧಾರೆ ಬಸವಣ್ಣನವರು ವೈದಿಕ ಪರಂಪರೆ ವಿರುದ್ಧ ಧ್ವನಿ ಎತ್ತಿದ್ದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕೀರ್ತಿ ವಾರ್ತೆಗಳು ಎಲ್ಲೆಡೆಯಲ್ಲಿಯೂ ಹಬ್ಬಿಕೊಂಡಿತ್ತು ಇದನ್ನು ಕೇಳಿ ನಾಡಿನ ಮೂಲೆ ಮೂಲೆಯಿಂದ ಶರಣರು ಕಲ್ಯಾಣಕ್ಕೆ ಬರಹತ್ತಿದ್ದರು ಅವರಲ್ಲಿ ಒಬ್ಬ ಮಹಾನ್ ಶರಣ ಮೋಳಿಗೆ ಮಾರಯ್ಯ

ಇವರು ಕಾಶ್ಮೀರದ ಮಾಂಡವ್ಯಪುರ ರಾಜಧಾನಿಯ ಅರಸರಾಗಿದ್ದರು. ಇವರು ಭೂಲೋಕದ ಸ್ವರ್ಗವೆನಿಸಿಕೊಂಡಿರುವ ಕಾಶ್ಮೀರವನ್ನು ಬಿಟ್ಟು ಕಲ್ಯಾಣಕ್ಕೆ ಬಂದರು ಕಲ್ಯಾಣದಲ್ಲಿ ಒಂದು ನೇಮವಿತ್ತು. ಕಾಯಕ, ದಾಸೋಹ, ಜಂಗಮಸೇವೆ ಮಾಡುವುದು. ಹೀಗಾಗಿ ಇವರು ಕಟ್ಟಿಗೆ ಒಡೆದು ತಂದು ಮಾರಿ ಅದನ್ನು ಶರಣರಿಗೆ ಒಪ್ಪಿಸಿ ಬಂದ ದುಡ್ಡಿನಿಂದ ದಾಸೋಹವನ್ನು ಮಾಡಹತ್ತಿದರು ಕಾಯಕವೇ ಕೈಲಾಸ ವೆಂಬ ತತ್ವಕ್ಕೆ ಬದ್ಧರಾದರು ಅವರು ಕಲ್ಯಾಣದಲ್ಲಿ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡರು ದೇವರನ್ನು ತೊಳೆದು ಪೂಜಿಸಿ ಉಣಿಸಿ ನೋಡುವ ಹಂಬಲ ತೀವ್ರವಾಯಿತು ಇವೆಲ್ಲ ನಿರಾಕಾರಿಯಾದವನಿಗೆ ಮಾಡಲು ಸಾಧ್ಯವಿಲ್ಲವೆಂದು ವಿಚಾರಕ್ಕೆ ಒಳಗಾದರೂ ತಮ್ಮ ವಚನದ ಮೂಲಕ ಭಕ್ತಿ ಮಾರ್ಗವನ್ನು ಸಾರಿದರು ದೇವರು ಮತ್ತು ಗುರುವಿನ ಬಗೆಗಿನ ಭಕ್ತಿಯನ್ನು ತಿಳಿಸಿದರು.

- Advertisement -

ಅನುಪಮ ಲಿಂಗವೇ ಎನ್ನ ನೆನೆ ಹಿಂಗೆ ಬಾರಯ್ಯ ಎಂದು ಸತತವಾಗಿ ವಿಚಾರಕ್ಕೆ ಒಳಗಾದರು. ಇವರ ಮೂಲ ಹೆಸರು ಮಹದೇವ , ಧರ್ಮಪತ್ನಿಯ ಹೆಸರು ಗಂಗಾದೇವಿ ಇವರು ಕಲ್ಯಾಣದಲ್ಲಿ ಮಾಡುವ ಕಾಯಕದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಂಡರು ಮೋಳಿಗೆ ಮಾರಯ್ಯ ಹಾಗೂ ಹೆಂಡತಿ ಮಹಾದೇವಿ ಎಂದು ಹೆಸರಾದರು ಇವರು ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟರು ಶರಣರಾದ ಬಸವಣ್ಣ, ಚನ್ನಬಸವಣ್ಣ, ಸಿದ್ದರಾಮರನ್ನು ಕಂಡರು ಇವರು ಅಂತರಂಗ ಶುದ್ದಿ, ಬಹಿರಂಗ ಶುದ್ದಿ ಕಡೆ ಹೆಚ್ಚು ಕಾಳಜಿ ವಹಿಸಿದರು ಇವರು ಅಷ್ಟಾವರಣ ಪಂಚಾಚಾರ ಶಟಸ್ಥಲವನ್ನು ತಿಳಿದುಕೊಂಡರು ಅಧ್ಯಾತ್ಮದ ಕಡೆಗೆ ಹೆಚ್ಚು ಒತ್ತುಕೊಟ್ಟರು

ಇವರು ನಿಷ್ಕಳಂಕ ಮಲ್ಲಿಕಾರ್ಜುನವೆಂಬ ಅಂಕಿತನಾಮ ಇಟ್ಟುಕೊಂಡು 818 ವಚನಗಳನ್ನು ರಚನೆ ಮಾಡಿದರು ಹಾಗೂ ಅನೇಕ ಗ್ರಂಥಗಳನ್ನು ಬರೆದ ಮಹಾನ್ ಶರಣ ಮೋಳಿಗೆ ಮಾರಯ್ಯ ಇವರದು ಒಂದು ವಚನ..

ನಾನೇಕೆ ಬಂದೆ ಸುಖವ ಬಿಟ್ಟು? ಬಂದದ್ದಕ್ಕೇನು ಆಗುತ್ತಿಲ್ಲ. ಸಂಸಾರದಲ್ಲಿ ಸುಖವಿಲ್ಲ, ಪಾರಮಾರ್ಥದಲ್ಲಿ ಪರಿಣಾಮಿಯಲ್ಲ ,ಸಿಕ್ಕಿದ ಆರ್ಥಿದಾರಿಕೆ ಎಂಬ ಭಕ್ತಿಯಲ್ಲಿ ದಾಸಿಯ ಕೂಸಿನಂತೆ ಒಡವೆ ಗಾಸಿಯ ಮಾಡಿ ಈ ಭಾಷೆ ಇನ್ನೇಸು ಕಾಲ ನಿಷ್ಕಳಂಕ
ಮಲ್ಲಿಕಾರ್ಜುನ.

- Advertisement -

ಅರ್ಥ—-
ದೇವರೇ ನನ್ನ ಮೊದಲಿನ ಜೀವನ ಸುಖ, ಶಾಂತಿ, ಸಮೃದ್ಧಿಯಿಂದ ತುಂಬಿತ್ತು. ಅಷ್ಟೈಶ್ವರ್ಯ ಭೋಗ ಭಾಗ್ಯ ಹೆಂಡಿರು ಮಕ್ಕಳು ಸಂಸಾರ ಇದು ಯಾವುದು ಸ್ಥಿರವಲ್ಲ ಅದಕ್ಕಾಗಿ ನಾನು ಶಾಶ್ವತವಾದ ಸುಖವನ್ನು ಹುಡುಕಿಕೊಳ್ಳುವದಕ್ಕಾಗಿ ಪಾರಮಾರ್ಥದಲ್ಲಿ ಬಂದೆ ಆದರೆ ಇಲ್ಲಿಯೂ ಯಾವ ಫಲ ಸಿಗಲಿಲ್ಲ. ಮಾಲೀಕರ ಮನೆಯಲ್ಲಿ ಕೆಲಸ ಮಾಡುವವಳಕೂಸು ಆಟಿಗೆ ಸಾಮಾನುಹಾಗೂ ವಡೆಗಳ ಮೇಲೆ ಆಸೆ ಮಾಡಿದ ಹಾಗೆ ಆಯಿತು, ನನ್ನ ಜೀವನ ಪ್ರೀತಿಯೆಂಬ ಭಕ್ತಿಯಲ್ಲಿ ಮತ್ತೆ ಸಿಲುಕಿಕೊಂಡಿದ್ದೇನೆ. ಅತ್ತ ಸಂಸಾರದ ಸುಖವು ಇಲ್ಲ ,ಇತ್ತು ನಿನ್ನ ಅನುಗ್ರವು ಇಲ್ಲ ,ಇದೇ ರೀತಿ ಇನ್ನೂ ಎಷ್ಟು ಕಾಲ ಬದುಕಬೇಕು ದೇವರೇ!! ಎಂದು ನಿಷ್ಕಳಂಕ ಮಲ್ಲಿಕಾರ್ಜುನನ ಹತ್ತಿರ ಬೇಡಿಕೊಳ್ಳುತ್ತಿದ್ದಾರೆ.

ಶಾಂತಾ ಲಂಬಿ

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group