ಮೂಡಲಗಿ:- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಹಗುರವಾಗಿ, ಮಾತನಾಡಿದ್ದು ಖಂಡನೀಯವಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳು ಇಲ್ಲಿನ ಕಲ್ಮೇಶ್ವರ ವೃತ್ತದಲ್ಲಿ ಕೆಲ ಕಾಲ ಪ್ರತಿಭಟಿಸಿ ತಹಸೀಲ್ದಾರ ಎಸ್ ಎ ಬಬಲಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಗಡಿಪಾರು ಆದ ವ್ಯಕ್ತಿಯಾದ ಅಮಿತ್ ಶಾ ಹೇಳಿಕೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಅವರ ಅಂಬೇಡ್ಕರ್ ವಿರೋಧಿ ಹೇಳಿಕೆ ದೇಶಕ್ಕೆ ಮಾಡಿದ ಅವಮಾನವಾಗಿದೆ ಈ ದೇಶಕ್ಕೆ ಮತ್ತು ಇಡೀ ಜಗತ್ತು ಮೆಚ್ಚುವ ಸಂವಿಧಾನವನ್ನು ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ಖಂಡನೀಯ ಮತ್ತು ಇವರು ಅಂಬೇಡ್ಕರ್ ವಿರೋಧಿಗಳು ಎಂದು ಸಾಬೀತಾಗಿದೆ ಕೂಡಲೇ ಅಮಿತ್ ಶಾ ಅವರು ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ನೀಡಬೇಕು ಮತ್ತು ದೇಶದ ಜನತೆ ಮುಂದೆ ಕ್ಷಮೆ ಕೇಳಬೇಕು ರಾಜಿನಾಮೆ ಹಾಗೂ ಕ್ಷಮೆ ಕೇಳದಿದ್ದರೆ ಕೂಡಲೇ ರಾಷ್ಟ್ರಪತಿಗಳು ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪಕ್ಷ ಕೂಡ ಅಮಿತ್ ಶಾರನ್ನು ರಕ್ಷಿಸಬಾರದು ಎಂಬ ಎಚ್ಚರಿಕೆಯೊಂದಿಗೆ ಶ್ರೀಘ್ರ ಕ್ರಮ ಜರುಗಿಸದೇ ಹೋದರೆ ಇಡೀ ದೇಶಾದ್ಯಂತ ಅಂಬೇಡ್ಕರ್ ಅಭಿಮಾನಿಗಳು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ್ ಸಣ್ಣಕ್ಕಿ, ಶಾಬಪ್ಪ ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ಅಶೋಕ ಶಿದ್ಲಿಂಗಪ್ಪಗೋಳ, ಯಶವಂತ ಮಂಟೂರ, ರಮೇಶ ಈರಗಾರ, ಪ್ರಭಾಕರ ಮಂಟೂರ, ತುಕಾರಾಮ.ಬ. ಮಾದರ, ಯಶವಂತ ಮರೆನ್ನವರ, ಈರಪ್ಪ ಢವಳೇಶ್ವರ, ವಿಲ್ಸನ್ ಢವಳೇಶ್ವರ, ಸುಂದರ ಬಾಲಪ್ಪನವರ, ಯಲ್ಲಪ್ಪ ಮಾನಕಪ್ಪಗೋಳ, ರವಿ ಮೂಡಲಗಿ, ಭೀಮಶಿ ತಳವಾರ, ತಮ್ಮಣ್ಣ ಗಸ್ತಿ ಸೇರಿದಂತೆ ಇನ್ನು ಅನೇಕರು ದಲಿತ ಮುಖಂಡರು ಭಾಗಿಯಾಗಿದ್ದರು.