ದಾಸ ಶ್ರೇಷ್ಠರು ಭಕ್ತ ಕನಕದಾಸರು – ಅಲ್ಲಾಪುರ

Must Read

ಸಿಂದಗಿ: ಭಕ್ತಿ ಹಾಗೂ ದಾಸ ಪರಂಪರೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವವರು ದಾಸ ಶ್ರೇಷ್ಠ ಕನಕದಾಸರು ಎಂದು  ಲಿಂಬೆ ಅಭಿವೃದ್ದಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ  ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ದೇವನೊಲಿದಾತನೇ ನಿಜವಾದ ಕುಲಜ ಎಂಬ ಸರ್ವ ಕಾಲಿಕ ಸತ್ಯವನ್ನು ಲೋಕಕ್ಕೆ ಸಾರಿದವರು ಭಕ್ತ ಕನಕದಾಸರು ಎಂದರು.

ಅಬು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ.ಖತೀಬ, ಶಿಲ್ಪಾ ಕುದರಗೊಂಡ, ಪತ್ರಕರ್ತ ಆನಂದ ಶಾಬಾದಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಮಾತನಾಡಿದರು.

ಈ ವೇಳೆ ಶರಣಮ್ಮ ನಾಯಕ, ಶಾಂತೂ ರಾಣಾಗೋಳ, ಗೊಲ್ಲಾಳಪ್ಪ ಬಿರಾದಾರ, ಎಸ್.ಎಮ್ ಚಿಗರಿ, ವರ್ಷಾ ಪಾಟೀಲ, ಅಶ್ವಿನಿ ಪಾತ್ರೋಟ, ಬೀರು ಚೌಧರಿ ಸೇರಿದಂತೆ ಅನೇಕರಿದ್ದರು.

ಇದೇ ಸಂದರ್ಭದಲ್ಲಿ ಕಸಾಪ ನೂತನ ಅಧ್ಯಕ್ಷ ಶಿವಾನಂದ ಬಡಾನೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲನಗೌಡ ಪಾಟೀಲ ನಿರೂಪಿಸಿದರು. ಅಂಬಿಕಾ ಪಾಟೀಲ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group