Homeಸುದ್ದಿಗಳುವಡೇರಹಟ್ಟಿ ಶ್ರೀ ಅಂಬದರ್ಶನ ಪೀಠದಲ್ಲಿ ದಸರಾ ಉತ್ಸವ

ವಡೇರಹಟ್ಟಿ ಶ್ರೀ ಅಂಬದರ್ಶನ ಪೀಠದಲ್ಲಿ ದಸರಾ ಉತ್ಸವ

ಜೀವನ ಪರ್ಯಂತ ಬಂಗಾರದಂತೆ ಬದುಕುವುದನ್ನು ಕಲಿಯಬೇಕು

ಮೂಡಲಗಿ: ಮನುಷ್ಯ ತನ್ನೊಳಗಿನ ಅವಗುಣಗಳನ್ನು ಬಿಟ್ಟು ಜೀವನ ಪರ್ಯಂತ ಬಂಗಾರದಂತೆ ಬದುಕುವುದನ್ನು ಕಲಿಯಬೇಕು ಎಂದು ಬೆಳಗಾವಿ ವಿಭಾಗದ ಈಶ್ವರೀಯ ವಿಶ್ವವಿದ್ಯಾಲಯದ ವಲಯ ಸಂಚಾಲಕರಾದ ಅಂಬಿಕಾಜೀ ಅಕ್ಕನವರು ಹೇಳಿದರು.

ತಾಲ್ಲೂಕಿನ ವಡೇರಹಟ್ಟಿಯ ಶ್ರೀ ಅಂಬಾದರ್ಶನ ಪೀಠದಲ್ಲಿ ಶುಕ್ರವಾರ ಆಚರಿಸಿದ ದಸರಾ ಉತ್ಸವ ಹಾಗೂ ನೂತನ ಮಂದಿರ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಜ್ಞಾನದ ಮೂಲಕ ಪರಮಾತ್ಮನ ಸಾಕ್ಷಾತ್ಕಾರಗೊಳ್ಳಿಸಿಕೊಳ್ಳಲು ಸಾಧ್ಯ ಎಂದರು.

ಗದಗ ಶರಂಜು ಜ್ಞಾನ ಯೋಗಾಶ್ರಮದ ಬಸವ ಸಮರ್ಥ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಶಾಂತಿ, ನೆಮ್ಮದಿಯ ಅವಶ್ಯಕತೆ ಇದೆ. ಸ್ವರ್ಗ ಮತ್ತು ನರಕ ಎರಡೂ ನಮ್ಮಲ್ಲಿ ಇದ್ದು ಆಧ್ಯಾತ್ಮಿಕದಿಂದ ಶಾಂತಿ, ನೆಮ್ಮದಿಯನ್ನು ಪಡೆದುಕೊಳ್ಳಬೇಕು ಎಂದರು.

ತೊಂಡಿಕಟ್ಟಿಯ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಸ್ವಾಮೀಜಿ ಮಾತನಾಡಿ, ಅಂಬಾದರ್ಶನ ಪೀಠದಲ್ಲಿ ಉತ್ತಮವಾದ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ನಾರಾಯಣ ಶ್ರೀಗಳಂಥ ಆಧ್ಯಾತ್ಮಿಕ ಚಿಂತಕರನ್ನು ಹೊಂದಿರುವ ಗ್ರಾಮದ ಜನರು ಪುಣ್ಯವಂತರು ಎಂದರು.

ಸಾನ್ನಿಧ್ಯ ವಹಿಸಿದ್ದ ಅಂಬಾದರ್ಶನ ಪೀಠದ ಪೀಠಾಧ್ಯಕ್ಷ ನಾರಾಯಣ ಶರಣರು ಮಾತನಾಡಿ, ಭಕ್ತರು ತಾವು ತೋರುವ ಭಕ್ತಿಯು ಖಂಡಿತ ಫಲ ನೀಡುತ್ತಿದ್ದು, ಭಕ್ತರ ಸಂಕಲ್ಪದಿಂದ ಅಂಬಾದರ್ಶನ ಪೀಠದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಲಿವೆ ಎಂದರು.

ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ, ಚಂದ್ರು ಮೋಟೆಪ್ಪಗೋಳ, ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿದರು.

ಮಹಾಲಿಂಗಪುರದ ಕೆಎಲ್‍ಇ ಸಂಸ್ಥೆಯ ಪದವಿ ಕಾಲೇಜು ಪ್ರಾಚಾರ್ಯ ಡಾ. ಬಿ.ಎಂ. ಪಾಟೀಲ ಅವರಿಗೆ ಆಡಳಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮದಲ್ಲಿ ವಿವಿಧ ರೂಪಕಗಳ ಮೆರವಣಿಗೆ ಜರುಗಿತು. ಗೋಕಾಕದ ಪುಷ್ಪಾ ಶಿವಾನಂದ ಹಿಂಡಿವಳಿ ಹಾಗೂ ತಂಡದವರಿಂದ ರುದ್ರಪಠಣ ಜರುಗಿತು.

ಜಮಖಂಡಿಯ ಬ್ರಹ್ಮಕುಮಾರಿ ಮೀರಾಜೀ, ಬೆಳಗಾವಿಯ ಮಹಾನಗರ ಯೋಜನೆ ಉಪನಿರ್ದೇಶಕ ಬಸವರಾಜ ಹಿರೇಮಠ, ಈಶ್ವರಚಂದ್ರ ಬೆಟಗೇರಿ, ಶ್ರೀಮಂತ ಕಾಂಬಳೆ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಡಿವೆಪ್ಪ ಹಾದಿಮನಿ ವೇದಿಕೆಯಲ್ಲಿದ್ದರು.

ವಿವೇಕಾನಂದ ಯಮಕನಮರಡಿ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group