ಬೀದರ : ಗಡಿ ಜಿಲ್ಲೆ ಬೀದರ್ ನಲ್ಲಿ ದತ್ತ ಜಯಂತಿ ಯಲ್ಲಿ ಜನರು ಓಮಿಕ್ರಾನ್ ವೈರಸ್ ಭಯವನ್ನೇ ಮರೆತು, ಸಾಮಾಜಿಕ ಅಂತರ ಕಾಯದೆ ಹೋಳಿಗೆ ತುಪ್ಪ ಊಟ ದಲ್ಲಿ ತೊಡಗಿಕೊಂಡರು.
ಇತ್ತ ಜಿಲ್ಲಾ ಆಡಳಿತವು ಬೀದರ್ ನಗರದ ಹಲವು ರಸ್ತೆ ಮೇಲೆ ನಿಂತು ವ್ಯಾಕ್ಸಿನ್ ಕೊಡಿಸುತ್ರಿದ್ದು ಅದು ಬೀದರ್ ನಗರಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ನಿನ್ನೆ ಹುಮನಬಾದ ಪಟ್ಟಣದಲ್ಲಿ ದತ್ತ ಜಯಂತಿ ಹಿನ್ನೆಲೆಯಲ್ಲಿ ಭಕ್ತರು ಹೋಳಿಗೆ ತುಪ್ಪದ ವಿಶೇಷ ದಾಸೋಹ ದಲ್ಲಿ ಕರೋನ ನಿಯಮಗಳನ್ನು ಉಲಂಘನೆ ಮಾಡಿದರು. ರಾಜ್ಯ ಸರ್ಕಾರ ಗಡಿ ಜಿಲ್ಲೆಗಳಿಗೆ ಕರೋನ ನಿಯಂತ್ರಣದಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿ ಬೇಕು ಎಂದು ಆದೇಶ ನೀಡಿದರೂ ಜಿಲ್ಲೆಯ ಹುಮನಬಾದ ತಾಲೂಕಿನಲ್ಲಿ ನಿನ್ನೆ ಹೊರ ರಾಜ್ಯದಿಂದ ಜನರು ಆಗಮಿಸುತ್ತಲಿದ್ದಾರೆ.
ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದ ಜನರು ಭಾಗಿಯಾಗಿದ್ದು ಈಗಾಗಲೆ ಓಮಿಕ್ರಾನ್ ವೈರಸ್ ಆಂದ್ರಪ್ರದೇಶದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣ ಇವೆ.ಜಿಲ್ಲಾ ಆಡಳಿತ ಬೀದರ್ ನಗರ ಪ್ರದೇಶ ಬಿಟ್ಟು ತಾಲೂಕುಗಳ ಕಡೆ ಗಮನ ಹರಿಸಿ ಬೇಕಾಗುತ್ತದೆ ಇಲ್ಲ ಅಂದರೆ ಓಮಿಕ್ರಾನ್ ವೈರಸ್ ಬೀದರ್ ಜಿಲ್ಲೆಗೆ ಪ್ರವೇಶ ಮಾಡಿದ ಮೇಲೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂಬುದು ಬೀದರ್ ಸಾರ್ವಜನಿಕರ ಅಭಿಪ್ರಾಯ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ