ಬೀದರ – ಕೃಷ್ಣ ಮೃಗಗಳ ಸಾವು ಬ್ಯಾಕ್ಟೀರಿಯಲ್ ವೈರಸ್ ನಿಂದ ಉಂಟಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮುಂದೆ ಇದು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೆಳಗಾವಿಯ ಮೃಗಾಲಯದಲ್ಲಿ ಏಕಕಾಲದಲ್ಲಿ ಹಲವಾರು ಕೃಷ್ಣ ಮೃಗಗಳ ಸಾವು ನಡೆದ ಪ್ರಕರಣ ಕುರಿತಂತೆ ಅವರು ಮಾತನಾಡಿದರು.
ಕೃಷ್ಣಮೃಗಗಳ ಸಾವು ಅತ್ಯಂತ ದುಃಖಕರ ಸಂಗತಿ. ವೈರಸ್ ಹರಡದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ. ಕೃಷ್ಣಮೃಗಗಳ ಸಾವಿನ ಕುರಿತು ಉನ್ನತ ತನಿಖೆಗೆ ಆದೇಶಿಸಿದ್ದೇನೆ.ಬನ್ನೇರು ಘಟ್ಟದ ತಜ್ಞರುಬೆಳಗಾವಿ ಮೃಗಾಲಯದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ವೈರಸ್ ವೇಗವಾಗಿ ಹರಡಲು ಕಾರಣವೇನು ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಏನೇ ನ್ಯೂನತೆಗಳಿದ್ದರೂ ಸರಿಪಡಿಸಿಕೊಳ್ಳುತ್ತೇವೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಖಂಡ್ರೆ ಹೇಳಿದರು.
ಹುಲಿ ದಾಳಿ ತಡೆಗೆ ಅರಣ್ಯ ಇಲಾಖೆಯಿಂದ ಮಾಸ್ಕ್ ವಿತರಣೆ ವಿಚಾರ ಮಾತನಾಡಿದ ಅವರು, ಅರಣ್ಯದಂಚಿನ ಜನರ ಸುರಕ್ಷತೆಗಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ಅರಣ್ಯದಂಚಿನಲ್ಲಿ ಕೋಂಬಿಂಗ್ ಆಪರೇಷನ್ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮಾನವ ಹಾನಿ ತಡೆಯಲು ಇಲಾಖೆಯ ಅಧಿಕಾರಿಗಳು ನಿಗಾವಹಿಸಿದ್ದಾರೆ ಎಂದು ಅವರು ನುಡಿದರು.
ವರದಿ : ನಂದಕುಮಾರ ಕರಂಜೆ, ಬೀದರ

