ಜಾನಪದ ಪರಿಷತ್ತಿನ ದಶಮಾನೋತ್ಸವ ಕಾರ್ಯಕ್ರಮ 

Must Read

ಮೂಡಲಗಿ:-ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲಾ ಸಭಾ ಭವನ ಶಿವಾಪೂರ (ಹ) ಗ್ರಾಮದಲ್ಲಿ ಕನ್ನಡ ಜಾನಪದ ಮೂಡಲಗಿ ಘಟಕ ಮತ್ತು ಪಟಗುಂದಿಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಜಾನಪದ ಪರಿಷತ್ತಿನ ದಶಮಾನೋತ್ಸವ ಕಾರ್ಯಕ್ರಮ ಜರುಗಿತು.

ಆಧುನಿಕ ಹಾಗೂ ಯಾಂತ್ರಿಕ ಬದುಕಿನಲ್ಲಿ ಜಾನಪದ ಕಲೆಗಳು ಜನರಿಂದ ದೂರವಾಗುತ್ತಿವೆ ಎಂದು ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ಬೇಸರದಿಂದ ಹೇಳಿದರು.

ಕನ್ನಡ ಜಾನಪದ ಪರಿಷತ್ತು ಸ್ಥಾಪನೆಯಾಗಿ ೧೦ ವರ್ಷಗಳಾಯಿತು. ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಘಟಕಗಳ ಮೂಲಕ ಜಾನಪದ ಸಾಹಿತ್ಯ ಕಲೆ ಪರಂಪರೆಯನ್ನು ಉಳಿಸಿ-ಬೆಳೆಸಲು ಶ್ರಮಿಸುತ್ತಿದ್ದೇವೆ ಮತ್ತು ಹೋಬಳಿ ಮಟ್ಟದಲೂ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಗುಂಡ್ಲೂರ ತಿಳಿಸಿದರು.

ಜಾನಪದ ಸಾಹಿತ್ಯವು ಇಂದಿನ ಯುವಜನಾಂಗದಿಂದ ದೂರವಾಗುತ್ತಿರುವವು. ಜಾನಪದ ಸಾಹಿತ್ಯದ ಮಹತ್ವವನ್ನು ತಿಳಿಸುವ ಸಲುವಾಗಿ ಸಾಹಿತ್ಯ ಪರಿಷತ್ತು ಇರುವುದು ಎಂದು ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಮಹಾದೇವ ಪೋತರಾಜ ತಮ್ಮ ಅನಿಸಿಕೆ ಹಂಚಿಕೊಂಡರು. ಜಯಾನಂದ ಮಾದರ,ಸುರೇಶ ಹನಗಂಡಿ,ರಾಜು ಕಂಬಾರ,ಪತ್ರಕರ್ತ ಬಾಲಶೇಖರ ಬಂದಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಈರಯ್ಯ ಹಿರೇಮಠ ಇರೆಲ್ಲರೂ ಜಾನಪದ ಸಾಹಿತ್ಯದ ಬಗ್ಗೆ ಮಾತನಾಡಿದರು.

ಸಾಹಿತಿಗಳಾದ ಸಿದ್ರಾಮ ದ್ಯಾಗಾನಟ್ಟಿ,ಡಾllಮಹಾದೇವ ಜಿಡ್ಡಿಮನಿ, ಶಿವಾಪೂರ ಶಾಲಾ ಮುಖ್ಯ ಶಿಕ್ಷಕ ಮುತ್ತಪ್ಪ ಲಂಗೋಟಿ, ಚೇತನ ಡಾಗಾ,ಸಂಗಮೇಶ ಗುಟ್ಲಿ,ರವಿ ಗಡದನ್ನವರ,ಶಿವಕುಮಾರ ಕೋಡಿಹಾಳ,ನಿಂಗಪ್ಪ ಸಂಗ್ರೇಜಿಕೊಪ್ಪ,ಪಿ.ಎಸ್.ಮೇತ್ರಿ,ಸಿದ್ದು ಮಹಾರಾಜ ಉಪಸ್ಥಿತರಿದ್ದರು.

ಜಾನಪದ ಶೈಲಿಯ ಡೊಳ್ಳು ಕುಣಿತ ಹಾಗೂ ಸಾಹಿತ್ಯದಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನಿಂದ ಪ್ರಶಸ್ತಿಯೊಂದಿಗೆ ಗೌರವದ ಸನ್ಮಾನ ಮಾಡಲಾಯಿತು
ಶಿವಕುಮಾರ ಕೋಡಿಹಳ ನಿರೂಪಿಸಿದರು ಮತ್ತು ಚಿದಾನಂದ ಹೂಗಾರ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group