spot_img
spot_img

ನೈಜ ಇತಿಹಾಸ ಹೊರತರಲು ಆಳ ಅಧ್ಯಯನ, ಸಂಶೋಧನೆ ಅವಶ್ಯಕ

Must Read

spot_img
- Advertisement -

ಹಿರೇ ಬಾಗೇವಾಡಿ: ನೈಜವಾದ ಇತಿಹಾಸವನ್ನು ಹೊರ ತರಬೇಕಾದರೆ ಪೂರ್ವ ತಯಾರಿ ಹಾಗೂ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳ ಅವಶ್ಯಕತೆ ಇದೆ ಅಂದಾಗ ಮಾತ್ರ ಆ ಇತಿಹಾಸದ ಬೇರುಗಳು ಆಳವಾಗಿ ಬೇರೂರಲು ಸಾಧ್ಯವಿದೆ ಎಂದು ಹಿರಿಯ ಲೇಖಕ ಹಾಗೂ ಸಾಹಿತಿ -ಸ .ರಾ. ಸುಳಕೂಡೆ ಅಭಿಪ್ರಾಯ ಪಟ್ಟರು

ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿವೀರ ರಾಣಿ ಕಿತ್ತೂರು ಚೆನ್ನಮ್ಮಾಜಿಯ ಅಭಿಮಾನಿ ಬಳಗ ಹಾಗೂ ಹಿರಿಯ ನಾಗರಿಕರ ವೇದಿಕೆ ಇವರಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರ 196ನೇ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡಿದರು .

ಇಡೀ ಭರತ ಖಂಡದಲ್ಲಿ ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಯನ್ನು ಊದಿದ ಮೊಟ್ಟಮೊದಲ ವಿರಾಗ್ರಣಿ ಕಿತ್ತೂರು ಚನ್ನಮ್ಮಾಜಿಯ ಕಿತ್ತೂರು ಸಂಸ್ಥಾನದ ಜನರಲ್ಲಿ ಆಂಗ್ಲರ ದಾಸ್ಯತ್ವದ ಸಂಕೋಲೆಯ ಬಗ್ಗೆ ಜನಜಾಗೃತಿ ಮೂಡಿಸಿ ಅವರಲ್ಲಿ ಸ್ವಾಭಿಮಾನದ ಕಿಚ್ಚನ್ನು ಬಡಿದೆಬ್ಬಿಸಿದ ಧೀರ ಮಹಿಳೆಯ ಇತಿಹಾಸವು ಮುಂದಿನ ಪೀಳಿಗೆಗೂ ತಲುಪಬೇಕಾದರೆ ಪ್ರತಿ ಗ್ರಾಮದ ಮನೆ ಮನೆಗಳಲ್ಲೂ ಹಾಗೂ ಮನಮನಗಳಲ್ಲು ಕಿತ್ತೂರಿನ ಜ್ಯೋತಿ ಬೆಳಗಬೇಕು ಎಂದರು

- Advertisement -

ಖಾನಾಪುರದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಡಾ.ಅ.ಬ. ಇಟಗಿ ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ಕಿತ್ತೂರಿನ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಕಿತ್ತೂರಿನ ಇತಿಹಾಸವು ರಾಣಿ ಚೆನ್ನಮ್ಮಾಜಿ ಅವರಿಂದ ಪ್ರಾರಂಭವಾಗಿ ರಾಯಣ್ಣನ ವರೆಗೆ ಮುಗಿದು ಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು

ಕಿತ್ತೂರಿನಲ್ಲಿ ಸ್ವಾತಂತ್ರ್ಯದ ಕಹಳೆಯನ್ನು ಊದಿದ ವೀರಕೇಸರಿ ಅಮಟೂರು ಬಾಳಪ್ಪ ಸಿಡಿಗುಂಡು ಸರದಾರ ಗುರುಸಿದ್ದಪ್ಪ ಬಿಚ್ಚ ಕತ್ತಿಯ ಚೆನ್ನಬಸಪ್ಪ ವಡ್ಡರ ಯಲ್ಲಣ್ಣ ಗಜವೀರ ಸೇರಿದಂತೆ ಇನ್ನೂ ಹಲವಾರು ಸೇನಾನಿಗಳು ಅಮರರಾಗಿದ್ದಾರೆ ಆದರೆ ಅವರ ತ್ಯಾಗ ಬಲಿದಾನಗಳ ಬಗ್ಗೆ ಸರ್ಕಾರ ಹಾಗೂ ಸಾರ್ವಜನಿಕರು ಚಿಂತಕರು ಹೆಚ್ಚು ಒತ್ತು ಕೊಡದಿರುವುದು ವಿಷಾದನೀಯ ಎಂದರು.

ಕಿತ್ತೂರು ಚೆನ್ನಮ್ಮಾಜಿ ಅವರ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿರುವ ಹಿರೇಬಾಗೇವಾಡಿ ಈ ಭಾಗದ ಪ್ರಜ್ಞಾವಂತರು ತಮ್ಮಯ ನಿರಂತರ ಪ್ರಯತ್ನದಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಇಲ್ಲಿಗೆ ತರುವಂಥ ಮಹಾನ್ ಕಾರ್ಯವನ್ನು ಮಾಡಿದ್ದಾರೆ ಅಲ್ಲದೆ ರಾಣಿ ಚನ್ನಮ್ಮಾಜಿ ಅವರ ವಿಜಯೋತ್ಸವ ಕಾರ್ಯಕ್ರಮವನ್ನು ಬೆಳಗಾವಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪದವಿ ಮಹಾವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಮಾಡಲೇಬೇಕೆಂಬ ಸುತ್ತೋಲೆಯನ್ನು ಕುಲ ಸಚಿವರಿಂದ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಶ್ರೇಯಸ್ಸು ಆರ್ ಸಿ ಯು ಹೋರಾಟ ಸಮಿತಿಗೆ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

- Advertisement -

ಉಪನ್ಯಾಸಕ ಬಸವರಾಜ ಮಠಪತಿ, ಶಿವಪಾದಯ್ಯ ಕಲ್ಲೋಳಿಮಠ ಬಾಪು ನಾವಲಗಟ್ಟಿ ಉಪ್ಪಿನ ಸರ್ ಮಾತನಾಡಿದರು ಆರ್ ಸಿ ಯು ಹೋರಾಟ ಸಮಿತಿಯ ಸಂಚಾಲಕ ಹಾಗೂ ಸಂಘಟಕ ಮಂಜುನಾಥ ವಸ್ತ್ರದ ಪ್ರಸ್ತಾವಿಕ ನುಡಿಗಳನ್ನು ಆಡಿದರು ಬಾಬು ಗೌಡ ಪಾಟೀಲ ಶಿಕ್ಷಕರಾದ ಶಂಕರ ದೇಸಾಯಿ ವಿದ್ಯಾರ್ಥಿನಿ ಶಾರದಾ ದೇಸಾಯಿ ತಮ್ಮ ಸ್ವರಚಿತ ರಾಣಿ ಚನ್ನಮ್ಮಾಜಿಯವರ ಕುರಿತು ಕವನ ವಾಚನ ಮಾಡಿದರು ರವಿ ಹಲಸಿಗಿ ಪಾಟೀಲ ಗುರುಗಳು ಜಗದೀಶ ಧಾರ್ವಾಡ್ಕರ ಸಂಜಯ ದೇಸಾಯಿ ಮುಂತಾದ ಹಿರಿಯರು ಉಪಸ್ಥಿತರಿದ್ದರು ಬಸವಣ್ಣಪ್ಪ ಗಾಣಗಿ ಅಧ್ಯಕ್ಷತೆ ವಹಿಸಿದ್ದರು ಶಂಕರ ದೇಸಾಯಿ ಸ್ವಾಗತಿಸಿ ವಂದಿಸಿದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಸ್ ಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಮೂಡಲಗಿ:-ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಶ್ರದ್ದೆಯಿಂದ ಪುಸ್ತಕವನ್ನು ಓದಿದರೆ ಜ್ಞಾನವನ್ನು ಗಳಿಸಬಹುದಾಗಿದೆ ಮತ್ತು ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಂಡರೆ ಸಮಾಜದಲ್ಲಿ ಸುಸಂಸ್ಕೃತರಾಗಿ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಗೋಕಾಕ ಸರ್ಕಾರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group