- Advertisement -
ಮೂಡಲಗಿ: ಪಟ್ಟಣದ ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಸಂಘಕ್ಕೆ ನಿವೇಶನ ನೀಡಲು ಆಗ್ರಹಿಸಿ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ ಲಕ್ಷ್ಮಿ ನಗರದಲ್ಲಿ ಬಣಜಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ಟಿಎಮಸಿ ನಂ. ೧೮೩೭ ಖಾಲಿ ಪ್ಲಾಟನ್ನು ಬಣಜಿಗ ಸಮಾಜದ ವಿವಿಧ ಕಾರ್ಯಕ್ರಮ ನಡೆಸಲು ಮತ್ತು ಸಾಂಸ್ಕೃತಿಕ ಭವನ ನಿರ್ಮಿಸಿಕೊಳ್ಳಲು ನಿವೇಶನ ನೀಡಲು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಶಿವಪ್ಪ ಬುಜನ್ನವರ, ಸಂಗಪ್ಪ ಅಂಗಡಿ, ವಿ.ಸಿ. ಗಾಡವಿ, ಗಂಗಪ್ಪ ಪುಠಾಣಿ, ವಿ.ಎಸ್.ಸಬರದ, ಅನ್ವರ ನದಾಫ, ರಮೇಶ ಸಣ್ಣಕ್ಕಿ, ಎಲ್.ಸಿ.ಗಾಡವಿ ಇದ್ದರು.