ಮೂಡಲಗಿ ತಾಲೂಕನ್ನು ಬರಪೀಡಿತ ಘೋಷಿಸಲು ಆಗ್ರಹ

Must Read

ಗುರ್ಲಾಪೂರ: ಪ್ರತಿ ವರ್ಷ ರೈತನಿಗೆ ಜೂನ್ ತಿಂಗಳು ಆಗಮಿಸುತ್ತಿದ್ದಂತೆ ಸಂತೋಷದಿಂದ ಕೃಷಿ ಕಾಯಕ ಮಾಡಲು, ಭೂತಾಯಿ ಮಡಿಲನ್ನು ತುಂಬುವ ತವಕದಿಂದ ಸಾಲ ಸೋಲ ಮಾಡಿಯಾದರು ಬೀಜ ಗೂಬ್ಬರ ಖರೀದಿಸಿ ರೈತರು ಒಕ್ಕಲುತನ ಮಾಡುತ್ತಿದ್ದರು.

ಆದರೆ ಈ ವರ್ಷ  ಮುಂಗಾರು ಬೆಳೆ ಬಿತ್ತನೆ ಮಾಡಿದ್ದರೂ ಮುಂಗಾರು ಮಳೆ ರಾಯ ಕೈಕೊಟ್ಟಿದ್ದರಿಂದ ರೈತನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಪ ಸ್ವಲ್ಪ ಮಳೆಯಲ್ಲಿ ಬೀಜ ಬಿತ್ತನೆ ಮಾಡಿದ್ದು  ಬೀಜಗಳು ಮೊಳಕೆಯೊಡೆಯದೆ ರೈತನಿಗೆ ಆಘಾತವಾಗಿದೆ ಮತ್ತೆ ಬಿಸಿಲಿನ ತಾಪದಿಂದ ಬಂದ ಬೆಳೆ ಕೂಡ ಒಣಗಿ ಹೋಗುವಂತಾಗಿದೆ ಆದ್ದರಿಂದ ಕೃಷಿ ಅಧಿಕಾರಿಗಳು, ಜನ ಪ್ರತಿನಿಧಿಗಳು ಮೂಡಲಗಿ ತಾಲೂಕಿನ ಪ್ರತಿ ಹಳ್ಳಿಗಳ ಸರ್ವೆ ಕಾರ್ಯ ಮಾಡಿ ರೈತನು ಬದುಕುವ ಸಲುವಾಗಿ ಸರಕಾರ ಸಹಾಯ ಸವಲತ್ತುಗಳನ್ನು ಒದಗಿಕೂಡುವದರ ಜೊತೆಗೆ ಮೂಡಲಗಿ ತಾಲೂಕನ್ನು ಸಂಪೂರ್ಣ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು  ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಮೂಡಲಗಿ ತಾಲೂಕ ಘಟಕದ ಅಧ್ಯಕ್ಷರಾದ ಹನಮಂತ ಮುಗಳಖೋಡ ಹಾಗೂ ಉಪಾಧ್ಯಕ್ಷರಾದ ಶಿವಬಸು ನೇಮಗೌಡರ ಸರಕಾರವನ್ನು ಆಗ್ರಹಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group