ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಜಿ ಪ್ರದಾನ ಮಂತ್ರಿ ಹೆಚ್.ಡಿ. ದೇವೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸಮಾಜ ಸೇವಕ,ಜನತಾದಳದ ಯುವ ಮುಖಂಡರಾದ ರಕ್ಷಿತ್ ಬಾಲೂರು ಒತ್ತಾಯಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು ದೇವೇಗೌಡ ಅವರು ಕನ್ನಡ ನಾಡು – ನುಡಿಗಾಗಿ, ಕನ್ನಡ ನೆಲ – ಜಲದ ಹಿತರಕ್ಷಣೆ ಗಾಗಿ ತಮ್ಮ ರಾಜಕೀಯ ಬದುಕಿನಲ್ಲಿ ನಡೆಸಿರುವ ಹೋರಾಟ ಅಪಾರ,ಅತ್ಯಮೂಲ್ಯ. ಕಾವೇರಿ ನೀರಿನ ಹಂಚಿಕೆ ವಿವಾದದಲ್ಲಿ ದೇವೇಗೌಡರ ದೂರದೃಷ್ಟಿಯ ಹೋರಾಟಗಳು ,ಆಡಳಿತಾತ್ಮಕ ಕ್ರಮಗಳು ಮುಂದಿನ ಯುವಪೀಳಿಗೆಯ ಆಡಳಿತಗಾರರಿಗೆ ಮಾದರಿ ಆಗುವಂತಹ ದು ಎಂದು ವಿವರಿಸಿದ್ದಾರೆ.
ರಾಷ್ಟ್ರದ ಪ್ರಪ್ರಥಮ ಕನ್ನಡಿಗ ಪ್ರಧಾನ ಮಂತ್ರಿಗಳಾಗಿ ರಾಷ್ಟ್ರದ ರೈತರ ಹಿತರಕ್ಷಣೆಗೆ ಅವರು ಕೈ ಗೊಂಡ ಕ್ರಮಗಳು ಅಪಾರ. ರೈತನಮಗನಾದ ಹೆಚ್.ಡಿ.ದೇವೇಗೌಡರನ್ನು ಮಂಡ್ಯ
ದಲ್ಲಿ ನಡೆಯಲಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು. ಆ ಮೂಲಕ ಕನ್ನಡ ನೆಲ – ಜಲ ಕುರಿತ ಅವರ ಹೋರಾಟಕ್ಕೆ, ಅವರ ರೈತಪರ ನಿಲುವಿಗೆ ಗೌರವ ನೀಡಬೇಕೆಂದು ರಕ್ಷಿತ್ ಬಾಲೂರು ಆಗ್ರಹ ಪಡಿಸಿದ್ದಾರೆ.
ತಾವು ಸದ್ಯದಲ್ಲೇ ದೇವೇಗೌಡರ ಅಭಿಮಾನಿಗಳು ಹಾಗೂ ಕನ್ನಡ ಪರ ಚಿಂತಕರೊಡನೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಅವರನ್ನು ಭೇಟಿಮಾಡಿ , ದೇವೇಗೌಡರನ್ನು ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕೋರುವ ಒಂದು ಸಾವಿರ ಮಂದಿಯ ಸಹಿ ಉಳ್ಳ ಒತ್ತಾಯ ಪತ್ರವನ್ನೂ ಸಲ್ಲಿಸಿರುವುದಾಗಿ ರಕ್ಷಿತ್ ತಿಳಿಸಿದ್ದಾರೆ.