ಘಟಪ್ರಭಾ- ಅಪಘಾತವೊಂದಕ್ಕೆ ಸಂಬಂಧಿಸಿದಂತೆ ಬೋವಿ ಸಮಾಜದ ಯುವಕನನ್ನು ಅನವಶ್ಯಕವಾಗಿ ಅರೆಸ್ಟ್ ಮಾಡಿದ್ದಲ್ಲದೆ ಉಪ್ಪಾರ ಸಮಾಜದ ಹಿರಿಯರು ಹಾಗೂ ಗೋಕಾಕ ತಾಲೂಕಾ ಪಂಚಾಯತ ಸದಸ್ಯ ನಿಂಗಣ್ಣ ಮಾಳ್ಯಾಗೋಳ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟಪ್ರಭಾ ಪೊಲೀಸ್ ಠಾಣೆಯ ಎಎಸ್ಐ ಬಿ.ಎಸ್. ಚಿನ್ನಿಕುಪ್ಪಿ ಅವರನ್ನು ಅಮಾನತ್ತು ಮಾಡಿ ವರ್ಗಾವಣೆ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ, ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ನೇತೃತ್ವದಲ್ಲಿ ಠಾಣಾ ಇನ್ಸ್ ಪೆಕ್ಟರ್ ಬಸವರಾಜ ಕಾಮನಬೈಲ್ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ವಿಠ್ಠಲ ಮೆಳವಂಕಿ, ಭೀಮಪ್ಪ ಹಂದಿಗುಂದ, ಬೋವಿ ಸಮಾಜದ ಜಿಲ್ಲಾಧ್ಯಕ್ಷ ವಿಲಾಸ ಗಾಡಿವಡ್ಡರ, ಅಶೋಕ ಗಾಡಿವಡ್ಡರ, ಬರಮಣ್ಣ ಗಾಡಿವಡ್ಡರ, ಗುರು ಗಂಗಣ್ಣವರ, ಮಲ್ಲಿಕಾರ್ಜುನ ಅರಭಾವಿ, ಪಾಂಡು ಭೋಜಿ, ಕಾಶಪ್ಪ ನಿಂಗಣ್ಣವರ, ನಾಗಪ್ಪ ಮಳಾಜಗೋಳ, ಎಲ್ ಜಿ ಗಾಡಿವಡ್ಡರ, ರವಿ ಗಾಡಿವಡ್ಡರ, ರವಿ ಮಹಾಲಿಂಗಪೂರ, ಮೋಹನ ಗಾಡಿವಡ್ಡರ, ವಸಂತ ಗಾಡಿವಡ್ಡರ ಸೇರಿದಂತೆ ಉಪ್ಪಾರ ಹಾಗೂ ವಡ್ಡರ ಸಮಾಜ ಬಾಂಧವರು ಹಾಜರಿದ್ದರು.