- Advertisement -
ಸಿಂದಗಿ: ಪಟ್ಟಣದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕೊಕಟನೂರ ಗ್ರಾಮದ ನಿವಾಸಿ ಅಬ್ದುಲ್ ಬುರಾನಸಾಬ್ ಮುಜಾವರ (22) ಚಿಕ್ಕಸಿಂದಗಿ ಗ್ರಾಮದ ನಿವಾಸಿ ಹಣಮಂತ್ರಾಯ ಭಂಟನೂರ (25) ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ ಎಂದು ಪಿಎಸೈ ನಿಂಗಪ್ಪ ಪೂಜಾರಿ ತಿಳಿಸಿದ್ದಾರೆ.
ಬೆಳಗಿನ ಜಾವ ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಂಶಯಾಸ್ಪದವಾಗಿ ನಂಬರ್ ಇಲ್ಲದ ಬೈಕ್‍ನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಪಿಎಸ್‍ಐ ನಿಂಗಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಕಳ್ಳರನ್ನು ಬಂಧಿಸಿ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇದರಿಂದ 8.5 ಲಕ್ಷ ರೂ. ಮೌಲ್ಯದ ಒಟ್ಟು 16 ಬೈಕ್ ವಶ ಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.