Homeಸುದ್ದಿಗಳುಸಿಂದಗಿ : ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ ಪುರಸಭೆ

ಸಿಂದಗಿ : ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ ಪುರಸಭೆ

ಸಿಂದಗಿ: ವಿಶ್ವ ಪರಿಸರ ದಿನದಂದು ಭಾರತ ಸಿಂಗಲ್ ಯೂಸ್ ಪ್ಲಾಸ್ಟಿಕ ವಸ್ತು ನಿಷೇಧಿಸಲು ನಿರ್ಧರಿಸಿತು. ಅದರಂತೆ 2022 ಜುಲೈ 01ರಿಂದ ಪ್ಲಾಲಿಸ್ಟರಿನ್ ಇತ್ಯಾದಿ ಸಿಂಗಲ್ ಯೂಸ್ ಪ್ಲಾಸ್ಟಿಕ ವಸ್ತುವಿನ ಉತ್ಪಾದನೆ, ಆಮದು, ವಿತರಣೆ, ಸಂಗ್ರಹ, ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಪ್ಲಾಸ್ಟಿಕ ಬಳಕೆ ಮಾಡಿದರೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಜುಲೈ 1 ರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳು ನಿಷೇಧಗೊಳ್ಳಲಿವೆ ಯೂಸ್ ಆ್ಯಂಡ್ ಥ್ರೋ ಪ್ಲಾಸ್ಟಿಕ್ ಎಂದರೆ ಒಮ್ಮೆ ಮಾತ್ರ ಬಳಸಿ ಬಿಸಾಡುವಂಥ ಪ್ಲಾಸ್ಟಿಕ ವಸ್ತುಗಳು, ಪ್ಲಾಸ್ಟಿಕ್ ಕವರ್, ಸ್ಟ್ರಾಗಳು, ಸಂಸ್ಕರಿತ ಆಹಾರ ಪಾಕೇಟ್, ಕಾಟನ್ ಬಡ್ ಸ್ಟಿಕ್ ಇತ್ಯಾದಿಗಳು ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳಾಗಿವೆ. ಅದರಲ್ಲೂ ನೊರೆಯುಕ್ತ ಪ್ಲಾಸ್ಟಿಕ್ ವಸ್ತುವಿನಿಂದ ಮಾಡಿದ ವಸ್ತುಗಳಾದ ಪ್ಲಾಸ್ಟಿಕ್ ಪ್ಲೇಟ, ಕಪ್ ಇತ್ಯಾದಿಗಳಿಂದ ಪರಿಸರಕ್ಕೆ ಭಾರಿ ಹಾನಿಯಾಗುತ್ತದೆ.

ಹೀಗಾಗಿ ವಿಶ್ವಸಂಸ್ಥೆಯ ಆಶಯದ ಅನುಸಾರ ಭಾರತ ಇಂತಹ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಕಾರಣ ಪುರಸಭೆ ವ್ಯಾಪ್ತಿಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಪುರಸಭೆ ಆರೋಗ್ಯ ನಿರೀಕ್ಷಕ ಎನ್.ಎಚ್.ಉಸ್ತಾದ್ ವಿನಂತಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group