spot_img
spot_img

ದೇವರಾಜ ಅರಸ್ 108 ನೇ ಜಯಂತ್ಯುತ್ಸವ

Must Read

- Advertisement -

ಸಿಂದಗಿ: ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವನ್ನಾಗಿ ಪರಿವರ್ತನೆ ಮಾಡುವ ಮೂಲಕ ದೀನ ದಲಿತ, ಹಿಂದುಳಿದವರಿಗೆ ಯೋಜನೆಗಳನ್ನು ರೂಪಿಸಿ ದಕ್ಷ, ಪ್ರಾಮಾಣಿಕತೆ, ಪ್ರಬುದ್ಧ ರಾಜಕಾರಣ ಮಾಡಿದಂಥವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರು ಅಂಥವರ ಜಯಂತಿ ಆಚರಿಸುತ್ತಿರುವ ತಾಲೂಕು ಆಡಳಿತದ ಕಾರ್ಯ ಶ್ಲಾಘನೀಯ  ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಜನನಾಯಕ, ಬಡವರ ಧ್ವನಿ, ಹಿಂದುಳಿದ ವರ್ಗಗಳ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ 108ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಅರಸುರವರ ಅಧಿಕಾರಾವಧಿಯಲ್ಲಿ ಬೆಳಗಾವಿಯ ಒಬ್ಬ ಮಂತ್ರಿ ತಪ್ಪು ಮಾಡಿದನ್ನು ಮುದ್ರಣವಾದ ಒಂದು ಪತ್ರಿಕೆಯ ಆಧಾರದ ಮೇಲೆ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿರುವಂತ ಧೀಮಂತ ನಾಯಕ ಡಿ.ದೇವರಾಜ ಅರಸುರವರು ಅವರಂತೆ ಸತತ 5 ವರ್ಷ ಅಧಿಕಾರ ನಡೆಸಿದವರಲ್ಲಿ ಡಿ.ದೇವರಾಜ ಅರಸರನ್ನು ಬಿಟ್ಟರೆ ಸಿ.ಎಂ.ಸಿದ್ದರಾಮಯ್ಯನವರು ಮಾತ್ರ ಇಂಥ ನಾಯಕರ ಜೀವನ ಚರಿತ್ರೆಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸಬೇಕಾದರೆ ಮಹಾನ್ ನಾಯಕರ ಜಯಂತಿಗಳು ಆಚರಣೆಗಳು ಮೇಲಿಂದ ಮೇಲೆ ನಡೆಯಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.    

ಯಡ್ರಾಮಿ ತಾಲೂಕಿನ ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ಶಿವುಕುಮಾರ ಎಚ್. ಉಪನ್ಯಾಸ ನೀಡಿ,  ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡಿ ಸಮಾಜದ ಕನಿಷ್ಠ ಮಟ್ಟದಲ್ಲಿರುವ ಕುಟುಂಬಗಳಿಗೆ ಮತ್ತು ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸೃಜನಾತ್ಮಕ ಆಲೋಚನೆಗಳ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿದ ಧೀಮಂತ ನಾಯಕ ಡಿ. ದೇವರಾಜ ಅರಸರು ಅಂತವರ ಜೀವನದ ಅಡಕುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು. 

- Advertisement -

ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೆಮಠ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ದಿ.ಡಿ.ದೇವರಾಜ ಅರಸುರವರು ಸಾಮಾಜಿಕ ಪರಿವರ್ತನೆಯ ಹರಿಕಾರರು ಹಿಂದುಳಿದ ವರ್ಗಗಳ ಧೀಮಂತ ನಾಯಕರಾಗಿ ತಮ್ಮ ಸೇವಾವಧಿಯಲ್ಲಿ ಜನಮನ ಗೆದ್ದಿದ್ದರಿಂದಲೇ ಅವರನ್ನು ಇಂದು ನಾವೆಲ್ಲರೂ ಸ್ಮರಿಸುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಸಿಪಿಐ ಡಿ.ಹುಲಗಪ್ಪ, ಡಿಎಸ್‍ಎಸ್ ಸಂಚಾಲಕ ವೈ.ಸಿ.ಮಯೂರ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಶಿರಸ್ತೆದಾರರಾದ ಜಿ.ಎಸ್.ರೊಡಗಿ, ಹಿಂದುಳಿದ ವರ್ಗಗಳ ಇಲಾಖೆ ಸಿಬ್ಬಂದಿ ಎಂ.ಜಿ.ಮಠಪತಿ, ದಶರಥ ರಾಠೋಡ, ಸಂಗನಗೌಡ ಪಾಟೀಲ, ಸೈಪನ ಮುಲ್ಲಾ, ಎಂ.ಡಿ.ನಂದಗೇರಿ, ವೀರೇಶ ಬಡಿಗೇರ ಸೇರಿದಂತೆ ಹಲವರು ಭಾಗವಹಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿ ಶಿವಲೀಲಾ ಕೊಣ್ಣೂರ ಸ್ವಾಗತಿಸಿದರು. ನಾನಾಗೌಡ ಸಿದ್ದರಡ್ಡಿ ನಿರೂಪಿಸಿದರು. ನಂದಪ್ಪ ಅನಗೊಂಡ ವಂದಿಸಿದರು.

- Advertisement -
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group