spot_img
spot_img

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

Must Read

spot_img
- Advertisement -

ಸಿಂದಗಿ – ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು.

ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ತಾಯಿ ನೀಲಗಂಗಾ ದೇವಿಯ ಪಲ್ಲಕ್ಕಿ ದೇವರ ಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ದಿಂಡರಕಿ ಗೈದರು. ಪಲ್ಲಕ್ಕಿ ಮೆರವಣಿಗೆಯು ಹಳೆ ಬಜಾರ್ ರಸ್ತೆ ಮಾರ್ಗವಾಗಿ ಶ್ರೀ ಬಸವಣ್ದೇವರ ಗುಡಿಗೆ ಸಾಗಿ ಬಂತು. ಮಾರ್ಗ ಮಧ್ಯದಲ್ಲಿ ಅನೇಕ ಮುತ್ತೈದರು, ಭಕ್ತರು ಆರತಿ ಬೆಳಗಿ ಆಶೀರ್ವಾದ ಪಡೆದುಕೊಂಡರು.

ಗೌರಿ ಹುಣ್ಣಿಮೆಯಿಂದ ಪ್ರಾರಂಭವಾದ ಈ ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ನಿರಾಹಾರ ಸೇವೆ ಮಾಡಿದ್ದರು. ಪಲ್ಲಕ್ಕಿ ದೇವಸ್ಥಾನಕ್ಕೆ ಬಂದ ನಂತರ ನಿರಾಹಾರ ಸೇವೆ ಮುಕ್ತಾಯ ಪಡಿಸಿದರು. ಪಲ್ಲಕ್ಕಿಗೆ ಮಾಡಿದ ವಿವಿಧ ಹೂವಿನ ಅಲಂಕಾರ ಸಾವಿರಾರು ಭಕ್ತರ ಗಮನ ಸೆಳೆಯಿತು. ಪುರುವಂತರ ಸೇವೆ, ನಂದಿಕೋಲು ಸೇವೆ, ಡೊಳ್ಳು ಕುಣಿತ, ಸನಾದಿ, ಮ್ಯೂಸಿಕಲ್ ಬ್ರಾಂಡ್ ಸೇರಿದಂತೆ ವಿವಿಧ ವಾದ್ಯ ಮೇಳಗಳು ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದವು.
ದೇವಸ್ಥಾನದ ಧರ್ಮದರ್ಶಿ ಸುನೀಲಗೌಡ ಶಿರೂಗೌಡ ದೇವರಮನಿ ಅವರ ನೇತೃತ್ವದಲ್ಲಿ ಜಾತ್ರೆಯ ವಿವಿಧ ಕಾರ್ಯಕ್ರಮಗಳು ಜರುಗಿದವು. ಜಾತ್ರಾ ಮಹೋತ್ಸವದ ಪಲ್ಲಕ್ಕಿ ಮೆರವಣಿಗೆಯಲ್ಲಿ ಅಶೋಕಗೌಡ ದೇವರಮನಿ, ಅಶೋಕ ವಾರದ, ಡಾ. ಎಮ್. ಎಮ್. ಪಡಶೆಟ್ಟಿ, ನೀಲಪ್ಪಗೌಡ ಬಿರಾದಾರ, ದುಂಡಪ್ಪ ಸೊನ್ನದ, ವಿಶ್ವನಾಥ ರೇಬಿನಾಳ, ದಯಾನಂದ ಪತ್ತಾರ, ಚನ್ನು ವಾರದ, ಮಹಾದೇವಪ್ಪ ಮುಂಡೇವಾಡಗಿ, ದಯಾನಂದ ಇವಣಿ, ಚನ್ನಪ್ಪ ಗೋಣಿ, ರವಿ ಗವಸಾನಿ, ಅನಿಲ್ ಪಟ್ಟಣಶೆಟ್ಟಿ, ವಿಶ್ವನಾಥ್ ಬೈರಿ, ಚಂದ್ರಶೇಖರ್ ಕಿಣಗಿ ಡಾ.ಶರಣಬಸವ ಜೋಗುರು, ಶಂಕ್ರಪ್ಪ ಗೋಣಿ, ಬಾಬು ಕಮತಗಿ, ಅಣ್ಣು ಕಿಣಗಿ, ಅಶೋಕ್ ಅಲ್ಲಾಪುರ, ಮುತ್ತು ಪಟ್ಟಣಶೆಟ್ಟಿ, ಶ್ರೀಶೈಲ್ ನಂದಿಕೋಲ, ಪ್ರಕಾಶ್ ಗುಣಾರಿ, ಕಿರಣ್ ಕೋರಿ, ಸಂತೋಷ್ ಪಟ್ಟಣಶೆಟ್ಟಿ,ಪ್ರವೀಣ ಪತ್ತಾರ್, ಶ್ರೀಧರ್ ಬೊಮ್ಮಣ್ಣಿ, ರುದ್ರು ಪಟ್ಟಣಶೆಟ್ಟಿ, ಗಂಗಾಧರ್ ಕಿಣಗಿ ಸೇರಿದಂತೆ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group