ಭಕ್ತಿ ಗೀತೆ

Must Read

ವಿದ್ಯಾ ವಾರಿಧಿ

ವೀಣಾಪಾಣಿಯೆ ಬ್ರಹ್ಮನ ವಲ್ಲಭೆ
ವರವನು ಕರುಣಿಸು ವಾಗ್ದೇವಿ|
ಮಾಣಿಕ್ಯದ ಸರ ಧರಿಸಿಹ ದೇವಿಯೆ
ಪಾದಕೆ ನಮಿಪೆವು ಮಹದೇವಿ||

ಶಾರದೆ ಮಾತೆಯೆ ಜ್ಞಾನವ ವರ್ಧಿಸು
ಕಳಕಳಿಯಿಂದಲಿ ಬೇಡುವೆನು|
ಭಾರತಿದೇವಿಯೆ ಕರುಣಾಶಾಲಿನಿ
ನಿನ್ನಲಿ ದಯೆಯನು ಕೋರುವೆನು||

ನಾರದ ಜನನಿಯೆ ಕಮಲಾಸನಸತಿ
ವಿದ್ಯಾಮಾತೆಯು ನೀನಮ್ಮ|
ತೋರುತ ಮಮತೆಯ ಶರಣರ ರಕ್ಷಿಸು
ಪೊರೆಯುತ ಭಕ್ತರ ಸಲಹಮ್ಮ||

ಸರಸತಿ ಮಂಗಳೆ ವಿದ್ಯಾವಾರಿಧಿ
ಮನಸಿನ ಕತ್ತಲೆ ಅಳಿಸಮ್ಮ|
ಕರವನು ಜೋಡಿಸಿ ನಾಮವ ಭಜಿಪೆವು
ನಿನ್ನಯ ದೃಷ್ಟಿಯ ಬೀರಮ್ಮ||

ಶುಭಕರಿ ಮಾತಾ ಮಂಗಳದಾಯಿನಿ                  ಅಂತಃಸತ್ವವ ಬೆಳಗಮ್ಮ|
ಅಭಯವ ನೀಡುತ ಮನಸಲಿ ನೆಲೆಸಿರು
ಸತ್ಯದ ಮಾರ್ಗದಿ ನಡೆಸಮ್ಮ||

ಅಶ್ವತ್ಥನಾರಾಯಣ
ಮೈಸೂರು

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group