ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತಿ ಕುಲಪತಿ ಪ್ರೊ.ವೈ.ಎಸ್ ಸಿದ್ದೇಗೌಡ ಗ್ರಂಥ ಲೋಕಾರ್ಪಣೆ ಮತ್ತು ಅಭಿನಂದನೆಯನ್ನು ನಡೆಸಿಕೊಡುವರು. ಹಿರಿಯ ವಿದ್ವಾಂಸ ಮತ್ತು ಸಂಸ್ಕೃತಿ ಚಿಂತಕ ಪ್ರೊ. ಕೆ. ಈ.ರಾಧಾಕೃಷ್ಣ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟನಾ ವಿಭಾಗದ ಸಂಚಾಲಕ ಡಾ.ಎನ್.ಎಸ್ ಶ್ರೀಧರಮೂರ್ತಿ ಗ್ರಂಥ ಕುರಿತು ಮಾತನಾಡುವರು.
ಅಮೆರಿಕೆಯ ಗೋಲ್ಡನ್ ಗೇಟ್ ಸ್ಯಾನ್ ಫ್ಯಾನ್ಸಿಸ್ಕೊ ವಿಶ್ವವಿದ್ಯಾಲಯದವರು ಹಿರಿಯ ಸಾಹಿತಿ ಮತ್ತು ಸಂಶೋಧಕ ಡಾ.ಕೆ ಜಿ ಲಕ್ಷ್ಮಿನಾರಾಯಣಪ್ಪ ರವರು ಹಿಸ್ಟರಿ ಅಂಡ್ ಕಲ್ಚರ್ ಆಫ್ ಟ್ರಡಿಷನಲ್ ವೀವರ್ಸ್ ಆಫ್ ಸೌತ್ ಇಂಡಿಯಾ ವಿಷಯದ ಕುರಿತು ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪದ್ಮಶಾಲಿ ಜನಾಂಗದ ಇತಿಹಾಸ ಸಂಸ್ಕೃತಿ ದರ್ಶನದ ಕುರಿತು ಆಳವಾದ ಅಧ್ಯಯನ ನಡೆಸಿರುವ ಶ್ರೀಯುತರು ವೃತ್ತಿ ಯಿಂದ ಕೇಂದ್ರ ಸುಂಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಪ್ರವೃತ್ತಿಯಲ್ಲಿ ಸಂಶೋಧಕರಾಗಿ ಅನೇಕ ಕೃತಿಗಳನ್ನು ರಚಿಸಿರುವ ಸಾಹಿತ್ಯಾಸಕ್ತರು, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲರು .
ನಾಡಿನ ಸಾಮಾಜಿಕ, ಶೈಕ್ಷಣಿಕ,ಸಾಂಸ್ಕೃತಿಕ ಲೋಕದ ಅನೇಕ ಗಣ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ಕಾರ್ಯಕ್ರಮದ ಆಯೋಜಕರಾದ ಸ್ವಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮತ್ತು ಉದಯ ಪ್ರಕಾಶನದ ಪ್ರಕಾಶಕಿ ಎಂ.ಡಿ ಶೈಲಜಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.