Dharawad: ಶಿಕ್ಷಣ, ಬಾಲ್ಯ ವಿವಾಹ ಜಾಗೃತಿ ಸಂದೇಶವುಳ್ಳ ‘ಸರು’ ಕಿರುಚಿತ್ರ ಬಿಡುಗಡೆ

Must Read

ಧಾರವಾಡ: ಶಿಕ್ಷಣ ಹಾಗೂ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವುಳ್ಳ ‘ಸರು’ ಕನ್ನಡ ಕಿರುಚಿತ್ರ ಜುಲೈ 22ರಂದು ಬಿಡುಗಡೆ ಆಗಲಿದೆ.

ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಆವರಣದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಎಸ್.ಎಸ್. ಕೆಳದಿಮಠ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ಆರ್.ಆರ್.ಸದಲಗಿ, ಜಾನಪದ ತಜ್ಞ ಡಾ. ರಾಮು ಮೂಲಗಿ, ನಿವೃತ್ತ ಶಿಕ್ಷಕಿ ಲೂಸಿ ಕೆ. ಸಾಲ್ಡಾನ, ಶಿಕ್ಷಕ ಸಂಜೀವ ಕುಂದಗೋಳ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪಶ್ಚಾತಾಪ, ಬೆತ್ತಲೆ, ರೈತ ಇನ್ನಿಲ್ಲ, ಶಾಂತಗಂಗಾ ಕಿರುಚಿತ್ರಗಳನ್ನು ನಿರ್ಮಿಸಿದ್ದ ಮಿಡಿಯಾ ಮೈಂಡ್ ಕ್ರಿಯೆಷನ್ಸ್, ಈ ಬಾರಿ ‘ಸರು’ ಕಿರುಚಿತ್ರವನ್ನು ತೆರೆಗೆ ತರುತ್ತಿದೆ.

ಧಾರವಾಡ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಿರುವ ಕಿರುಚಿತ್ರದಲ್ಲಿ ಸ್ಥಳೀಯ ಕಲಾವಿದರು ನಟಿಸಿದ್ದಾರೆ.  ಸಂತೋಷ್ ಎಫ್.ಜೆ. ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರಕ್ಕೆ ಬಸವರಾಜ ಗೋಕಾವಿ ಛಾಯಾಗ್ರಹಣವಿದೆ.

ಜಾನಪದ‌ ತಜ್ಞ ರಾಮು ಮೂಲಗಿ, ಟಿಕ್‌ಟಾಕ್ ಕಾಕಾ ಸಿದ್ದಣ್ಣ ಕುಂಬಾರ,  ಶಿಕ್ಷಕರಾದ ಎಲ್.ಐ. ಲಕ್ಕಮ್ಮನವರ, ಗಿರಿಜಾ ಪಲ್ಲೇದ್, ವೈ.ಬಿ. ಕಡಕೋಳ ವೀಣಾ ಹೊಸಮನಿ, ರೇಖಾ ಮೊರಬ ವಿಶೇಷ ಪಾತ್ರದಲ್ಲಿದ್ದಾರೆ.

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group