ಮುಧೋಳ – ಸವ೯ರು ಸುಖವಾಗಿ ಬಾಳಲಿ ಎಂಬ ಧ್ಯೇಯೋದ್ಧೇಶದಿಂದ ಪ್ರಾರಂಭಿಸಿದ ಧಮ೯ಸ್ಥಳದ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರ ಕನಸು ಇಂದು ಸಾಕಾರಗೊಳ್ಳುತ್ತಿದೆ ಎಂದು ಮುಗಳಖೋಡದ ಪಿ.ಕೆ.ಪಿ.ಎಸ್.ನ ಮಾಜಿ ಅಧ್ಯಕ್ಷ ಹಾಗೂ ಇಲ್ಲಿಯ ಶೌಯ೯ವಿಪತ್ತು ಘಟಕದ ಹಾಲಿ ಅಧ್ಯಕ್ಷ ಪರಮಾನಂದ ಡಿ.ಕುಂಬಾರ ಅವರು ಹೇಳಿದರು.
ಅವರು ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ಜರುಗಿದ ಶೌರ್ಯ ವಿಪತ್ತು ಘಟಕದ 2 ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಧಮ೯ಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗಳು ಬಡವರಿಗೆ ಆಥಿ೯ಕ ಶಕ್ತಿಯನ್ನು ತುಂಬುತ್ತಿದೆ ಅಲ್ಲದೆ ವ್ಯಸನ ಮುಕ್ತ ಸಮಾಜ ರೂಪಿಸುವಲ್ಲಿ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಹಿರಿದಾದದ್ದು ಎಂದರು.
ಲೋಕ ನಾಯಕಿ ಸಂಸ್ಥೆಯ ಅಧ್ಯಕ್ಷೆ ಹಾಗೂ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳಾದ ಎಲ್.ಶ್ಯಾಮಲಾ ಅವರು ಮಾತನಾಡಿ ಕಷ್ಟಕಾಲದಲ್ಲಿ ಬದುಕಿನ ಗೂಡು ಕಟ್ಟಿಕೊಳ್ಳಲು ಬಡವರಿಗೆ ಆಸರೆಯಾಗಿರುವ ಧಮ೯ಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಸಕಲರು ಸದುಪಯೋಗಪಡಿಸಿಕೊಳ್ಳಲು ಹೇಳಿದರು.
ಪೂಜ್ಯರಾದ ಮುತ್ತಣ್ಣ ಪೂಜಾರಿ ಒಡೆಯರ್ ಅವರು ಸಭೆಯ ಸಾನ್ನಿಧ್ಯ ವಹಿಸಿದ್ದರು. ಹಣಮಂತ ನಾವ್ಹಿ, ಪ್ರಕಾಶ ಕುಂಬಾರ, ವಿಠಲ ಮೇತ್ರಿ, ಈರಪ್ಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು.