ಗುರುವಿಗೆ ತಕ್ಕ ಶಿಷ್ಯ ದಿ. ದಿಲೀಪ ಜಂಬಗಿಯವರು – ಪಂಚನಗೌಡ ದ್ಯಾಮನಗೌಡರ

Must Read

ಮುನವಳ್ಳಿ; ಪಟ್ಟಣದ ಶ್ರೀ ವ್ಹಿ. ಪಿ.ಜೇವೂರ ಸ್ಮಾರಕ ಕಿವುಡ ಮತ್ತು ಮೂಕ ಮಕ್ಕಳ ವಸತಿಶಾಲೆಯಲ್ಲಿ ದಿ. ದಿಲೀಪ ವಾಯ್ ಜಂಬಗಿ ರವರ 72 ನೇ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿ. ಡಿ. ಸಿ. ಸಿ.ಬ್ಯಾಂಕ ನಿರ್ದೇಶಕರು ಹಾಗೂ ಕಾಂಗ್ರೆಸ್‌ ಮುಖಂಡರಾದ ಪಂಚನಗೌಡ ಬ.ದ್ಯಾಮನಗೌಡ್ರ ಮಾತನಾಡುತ್ತಾ, ” ಜೇವೂರ ಗುರುಗಳು ಶೈಕ್ಷಣಿಕ ಕ್ರಾಂತಿ ಮಾಡಿದರು.ಅವರ ಶಿಷ್ಯರಾದ ದಿ. ದಿಲೀಪ ವಾಯ್. ಜಂಬಗಿ ಯವರು ಗುರುಗಳ ಮಾರ್ಗದರ್ಶನದಲ್ಲಿ ಬಡ ದೀನ ದಲಿತ ಸಮಾಜ ಸೇವೆಯೊಂದಿಗೆ ವಿಕಲಚೇತನ ಮಕ್ಕಳ ಕ್ಷೇತ್ರದಲ್ಲಿ ಕಿವುಡ ಮತ್ತು ಮೂಕ ಮಕ್ಕಳ ಶಿಕ್ಷಣ ಕ್ಕೆ ಶಾಲೆ ತೆರೆದು ಆ ಶಾಲೆಗೆ ಗುರುಗಳ ಹೆಸರಿಟ್ಟು ಶ್ರವಣ ದೋಷ ಮಕ್ಕಳ ಶಿಕ್ಷಣ ದಲ್ಲಿ ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದಂತಹ ಧೀಮಂತ ವ್ಯಕ್ತಿ. ಗುರುಗಳಿಗೆ ತಕ್ಕ ಆದರ್ಶ ಶಿಷ್ಯನಾಗಿರುವರು”ಎಂದು ತಿಳಿಸಿದರು.

ನಾನು ಕೂಡ ಯಾವುದೇ ಸಂದರ್ಭದಲ್ಲಿಯೂ ತಮ್ಮ ಕಾರ್ಯ ಕ್ರಮ ಗಳಿಗೆ ಸಹಾಯಹಸ್ತ ನೀಡುತ್ತೆನೆಂದು ಹೇಳಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ರಾಧಾ ಕುಲಕರ್ಣಿ, ಸುಜಾತಾ ರೆ ಜಂಬಗಿ,ಸಂಸ್ಥೆಯ ಅಧ್ಯಕ್ಷರಾದ ಪಂಚಪ್ಪ ವಾಯ್ ಜಂಬಗಿ, ಉಪಾಧ್ಯಕ್ಷರಾದ ಪಂಚಪ್ಪ ಗೋ ಜಂಬಗಿ, ಕಾರ್ಯದರ್ಶಿ ಬಸವರಾಜ ಪಿ ಮಾದರ ಮೊದಲಾದವರು ಜಂಬಗಿಯರವರ ಮೂರ್ತಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ ವೀರಣ್ಣ ಕೊಳಕಿ,ಶಶಾಂಕ ಪೂಜೇರ, ಮುಖ್ಯೋಪಾಧ್ಯಾಯರಾದ ಎಲ್ ಎಚ್ ವಟ್ನಾಳ ಶಿಕ್ಷಕರಾದ ಶಿವು ಕಾಟಿ, ಅಜಯ ಕಂಬನ್ನವರ,ವೀರು ಕಳಸನ್ನವರ, ಮಂಜುನಾಥ ಮಾವಿನಕಟ್ಟಿ, ಅತ್ತಾರ , ಸುಜಾತಾ ಬಡ್ಲಿ ಮತ್ತು ಜೈಂಟ್ಸ್ ಗ್ರುಪ್. ಸಹೇಲಿ ಗ್ರುಪ್ ಮುನವಳ್ಳಿ ಹಾಗೂ ಜೇವೂರ ಪ್ರತಿಷ್ಠಾನದ ಸದಸ್ಯರು ಪಾಲ್ಗೊಂಡಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group