Disadvantages Of Drinking Fridge Water
ಬೇಸಿಗೆ ಶುರುವಾಯಿತೆಂದರೆ ಸಾಕು ತಣ್ಣಗಿರುವ ನೀರನ್ನು ಕುಡಿಯುವುದು ಸರ್ವೇ ಸಾಮನ್ಯ. ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿ ತಂಪು ಪಾನೀಯ ತಣ್ಣನೆಯ ನೀರಿಗೆ ಜನ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ತಾವು ಕುಡಿಯುವ ಪಾನೀಯಗಳಿಗೆ ಐಸ್ ಗಡ್ಡೆಗಳನ್ನು ಹಾಕಿ ಅದನ್ನು ಸೇವಿಸುತ್ತಾರೆ.
ಬೇಸಿಗೆಯಲ್ಲಿ ತಣ್ಣಗಿನ ನೀರು ಸಿಕ್ಕರೆ ಅದೇ ಸ್ವರ್ಗ. ಬಿಸಿಲಿನಿಂದ ಬಳಲಿ ಬಂದ ಕೂಡಲೆ ಫ್ರಿಡ್ಜ್ ಬಾಗಿಲನ್ನು ತೆರೆದು ಅದರಲ್ಲಿರುವ ನೀರನ್ನು ಹುಡುಕಿ ಕುಡಿಯದಿದ್ದರೆ ಕೆಲವರಿಗೆ ಸಮಾಧಾನವೆನಿಸುವುದಿಲ್ಲ. ಈ ಅಭ್ಯಾಸವನ್ನು ಅದೆಷ್ಟೋ ಜನ ರೂಢಿಸಿಕೊಂಡಿರುತ್ತಾರೆ. ಆದರೆ ಈ ಅಭ್ಯಾಸ ನಿಮಗೆ ಇದ್ದರೆ ಎಚ್ಚರ ಇದು ಹೃದಯಾಘಾತವನ್ನು ತಂದೊಡ್ಡಬಹುದು ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಅಷ್ಟಕ್ಕೂ ಫ್ರಿಡ್ಜ್ ನೀರನ್ನು ಸೇವಿಸುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೇನು ತಿಳಿಯೋಣ ಬನ್ನಿ.
ಮೊದಲನೆಯದಾಗಿ ಬಿಸಿಲಿನಲ್ಲಿ ಹೊರಗೆ ಓಡಾಡಿ ಕೆಲಸ ಮಾಡಿ ಅಥವಾ ಬಿಸಿಲಿನಲ್ಲಿ ಕ್ರೀಡ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನೆಗೆ ಬಂದ ತಕ್ಷಣ ತಣ್ಣನೆಯ ಫ್ರಿಡ್ಜ್ ನೀರನ್ನು ಸೇವಿಸುವುದರಿಂದ ಸನ್ ಸ್ಟ್ರೋಕ್ ಆಗುವ ಸಂಭವ ಹೆಚ್ಚಾಗಿರುತ್ತದೆ.
ಫ್ರಿಡ್ಜ್ ನಲ್ಲಿನ ತಣ್ಣನೆಯ ನೀರನ್ನು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು ಇದರಿಂದ ಗಂಟಲಿನ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ. ಇದಲ್ಲದೆ ಹೃದಯದ ಬಹು ಮುಖ್ಯವಾದ ವೇಗಸ್ ನರದ ಮೇಲೆ ಫ್ರಿಡ್ಜ್ ನೀರನ್ನು ಸೇವಿಸುವುದು ಕೆಟ್ಟ ಪರಿಣಾಮ ಬೀರುವುದರಿಂದ ಹೃದಯದ ಬಡಿತ ಕಡಿಮೆಯಾಗಿ ಹೃದಯಾಘಾತ ಸಂಭವ ಜಾಸ್ತಿಯಾಗಿರುತ್ತದೆ. ಇಷ್ಟೇ ಅಲ್ಲದೆ ಬಹುಮುಖ್ಯವಾದ ಜೀರ್ಣಕ್ರಿಯೆಗೆ ಅಡ್ಡಿಯಾಗಿ ಪಚನ ಕ್ರಿಯೆಗೆ ತೊಂದರೆಯಾಗಿ ಹೊಟ್ಟೆಗ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳು ತಲೆದೂರುತ್ತವೆ.
ಫ್ರಿಡ್ಜ್ ನ ತಣ್ಣನೆಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಇದರಿಂದ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತದೆ. ಜೀರ್ಣಕ್ರಿಯೆಗೆ ತೊಂದರೆಯಾಗಿ ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗುತ್ತವೆ. ದಿನನಿತ್ಯ ನಾವು ರೂಢಿಸಿಕೊಂಡಿರುವ ಅದೆಷ್ಟೋ ಕೆಟ್ಟ ಅಭ್ಯಾಸಗಳಿಂದ ನಮ್ಮ ಆರೋಗ್ಯ ಹಾಳಾಗುತ್ತದೆ ಅದರಲ್ಲಿ ಫ್ರಿಡ್ಜ್ ನೀರನ್ನು ಸೇವಿಸುವುದೂ ಕೂಡ ಒಂದು.
ಬೇಸಿಗೆಯಲ್ಲಿ ದೇಹ ತಣ್ಣಗಿರುವುದನ್ನು ಬಹಸುವುದು ಸಹಜ ಆದರೆ ಫ್ರಿಡ್ಜ್ ನೀರಿಗೆ ಬದಲಾಗಿ ಮಡಿಕೆ ನೀರನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇಲ್ಲವೇ ಪಾತ್ರೆಯಲ್ಲಿ ಅಥವಾ ಬಿಂದಿಗೆಯಲ್ಲಿ ನೀರನ್ನು ಹಾಕಿ ಆ ಪಾತ್ರೆಯ ಅಥವಾ ಬಿಂದಿಗೆಯ ಸುತ್ತ ಒದ್ದೆ ಬಟ್ಟೆಯನ್ನು ಹಾಕಿ ಕೆಲ ಸಮಯ ಬಿಡುವುದರಿಂಸ ಆರೋಗ್ಯಕರ ತಣ್ಣನೆಯ ನೀರನ್ನು ನೀವು ಸೇವಿಸಬಹುದು.
ಆದಷ್ಟು ಗಾಳಿಯಾಡುವ ಜಾಗಕ್ಕೆ ದೇಹವನ್ನು ಒಡ್ಡುವುದು ಉತ್ತಮ. ಅತಿಯಾದರೆ ಅಮೃತವೂ ಸಹ ವಿಷ ಎನ್ನುವಂತೆ ಫ್ರಿಡ್ಜ್ ನ ನೀರು ಆಗಿನ ಕ್ಷಣಕ್ಕೆ ಸಮಾಧಾನ ಎನಿಸಿದರೂ ಸಹ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವು ಆರೋಗ್ಯಕರ ಅಭ್ಯಾಸಗಳನ್ನು ನಾವು ರೂಢಿಸಿಕೊಳ್ಳಬೇಕು…