ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅಧ್ಯಯನ ಮುಖ್ಯ – ಶ್ರೀ ವಿಜಯ ಮಹಾಂತೇಶ

Must Read

 

ಸಿಂದಗಿ; ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೋಬೈಲ ಹಾಗೂ ಇನ್ನಿತರ ಎಲೆಕ್ಟ್ರಾನಿಕ ವಸ್ತುಗಳಿಂದ ಆಕರ್ಷಿತರಾಗಿ ಅಧ್ಯಯನದಲ್ಲಿ ನಿರಾಸಕ್ತಿ ತೋರುತಿದ್ದು, ವಿದಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಅಧ್ಯಯನ ಮುಖ್ಯ ಎಂದು ಇಲಕಲ್ಲದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಢಳಿತಾದಿಕಾರಿಗಳು ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎಂ.ಪಾಟೀಲ ಹೇಳಿದರು. 

ಪಟ್ಟಣದ ಪಿಇಎಸ್ ಗಂಗಾಧರ ಎನ್ ಬಿರಾದಾರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಪ್ರಾಧ್ಯಾಪಕರು ಹೇಳಿದ ಪಾಠ ಪ್ರವಚನ ಚೆನ್ನಾಗಿ ತಿಳಿದುಕೊಂಡು ಅಧ್ಯಯನಶೀಲರಾಗಬೇಕು ಹಾಗೂ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಾಸವಾಗಬೇಕಾದರೆ ಶಿಸ್ತು ಬಹಳ ಮುಖ್ಯ ಎಂದರು. 

ಸಮಾರಂಭವನ್ನು ಉದ್ಘಾಟಿಸಿದ ಇಂಡಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡೇದ ಮಾತನಾಡಿ, ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಇದ್ದು ಯಶಸ್ವಿಯಾಗಲು ಸತತ ಪ್ರಯತ್ನ ಅಗತ್ಯ ವಿದ್ಯಾರ್ಥಿಗಳು ಆ ದಿಸೆಯಲ್ಲಿ ಚೆನ್ನಾಗಿ ಅಧ್ಯಯನ ಮಾಡಿ ದೇಶ ಸೇವೆಗೆ ಮುಂದಾಗಬೇಕೆಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ ಪಿಇಎಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ಬಿ.ಎಲ್.ಡಿ.ಇ ವೈದ್ಯಕೀಯ ಮಹಾವಿದ್ಯಾಲಯದ ಅರವಳಿಕೆ ತಜ್ಞ ಡಾ. ಸಂತೋಷಕುಮಾರ.ಭೀ.ಕರ್ಜಗಿ ಮಾತನಾಡಿ, ಪಿಇಎಸ್ ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಭೌತಿಕ ಹಾಗೂ ಉತ್ತಮ ಪ್ರಾಧ್ಯಾಪಕರ ಸಂಪನ್ಮೂಲ ಒಳಗೊಂಡಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಗುರಿ ಮುಟ್ಟಬೇಕು ಎಂದು ಸಲಹೆ ನೀಡಿದರು.

ಆಲಮೇಲ ವಿರಕ್ತ ಮಠದ ಪೂಜ್ಯಶ್ರೀ ಜಗದೇವ  ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ, ಮಾರ್ಗದರ್ಶಕ ಕೆ.ಎಚ್. ಸೋಮಾಪೂರ, ನಿವೃತ್ತ ಉಪನ್ಯಾಸಕ ಪಿ.ಎಂ. ಮಡಿವಾಳರ, ಮಾತೋಶ್ರೀ ಪ್ರೇಮಾ ಭೀ. ಕರ್ಜಗಿ, ಆರ್.ಬಿ. ಗೋಡಕರ, ವಿದ್ಯಾರ್ಥಿ ಪ್ರತಿನಿಧಿಯಾದ ಕುಮಾರಿ ಶಾರದಾ ಗಾಡದ, ಕುಮಾರಿ ಭಾಗ್ಯಶ್ರೀ ಡಂಬಳ ಉಪಸ್ಥಿತರಿದ್ದರು.

ಉಪನ್ಯಾಸಕಿ ಕು. ರೇಣುಕಾ ವಾಲೀಕಾರ ನಿರೂಪಿಸಿದರು. ಉಪನ್ಯಾಸಕ ರಾಜು ಯಂಕಂಚಿ ಸ್ವಾಗತಿಸಿದರು. ಬಿ.ಎಂ. ಬಿರಾದಾರ ವರದಿ ವಾಚಿಸಿದರು. ಶ್ರೀಮತಿ ಮಂಜುಳಾ ಶ್ರೀಗಿರಿ ವಂದಿಸಿದರು.

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group