ಮೂಡಲಗಿ: ಇಲ್ಲಿನ ಅಹಲೆ ಸುನ್ನತ್ ಜಮಾತ್ ಬಿಟಿಟಿ ಕಮಿಟಿ ವತಿಯಿಂದ ಪ್ರವಾದಿ ಮಹ್ಮದ ಪೈಗಂಬರ ಜನ್ಮ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಅತ್ಯಂತ ಸರಳವಾಗಿ ಸಂಭ್ರಮದಿಂದ ಆಚರಿಸಿ ಪರಸ್ಪರರು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನಾ ಕೌಸರ ರಜಾ, ಮಹ್ಮದ ಪೈಗಂಬರ ಕುರಿತು ಪ್ರವಚನ ನೀಡಿ ಮಾತನಾಡಿ, ಪ್ರತಿ ವರ್ಷ ಭವ್ಯ ಮೆರವಣಿಗೆ ಜೊತೆಗೆ ಹಬ್ಬವನ್ನು ಆಚರಿಸಲಾಗುತ್ತಿತ್ತು ಆದರೆ ಈ ಬಾರಿ ಕೊರೋನಾದಿಂದಾಗಿ ಮೆರವಣಿಗೆ ರದ್ದು ಮಾಡಿ ಸರ್ಕಾರದ ಮಾರ್ಗಸೂಚಿಯಂತೆ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಲ್ಲರೂ ಸುಖ ಶಾಂತಿ ನೆಮ್ಮದಿ ಹೊಂದಲಿ, ಸಕಲ ಜೀವರಾಶಿಗಳಿಗೆ ಒಳಿತಾಗಲಿ, ಸಾರ್ವಕಾಲಿಕವಾದ ಮಹ್ಮದ ಪೈಗಂಬರ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಶುಭ ಕೋರಿದರು.
ಮೌಲಾನಾ ನಿಜಾಮುದ್ದೀನ ಮಂತ್ರ ಪಠಣ ಮಾಡಿದರು ನಂತರ ಅನ್ನ ಸಂತರ್ಪಣೆ ಜರುಗಿತು.
ಬಿಟಿಟಿ ಕಮಿಟಿ ಅಧ್ಯಕ್ಷ ಶರೀಫ್ ಪಟೇಲ, ಉಪಾಧ್ಯಕ್ಷ ಮಲೀಕ ಕಳ್ಳಿಮನಿ, ಮೌಲಾನಾ ಅಮೀರ ಹಮ್ಜಾ ಥರಥರಿ, ಹಸನಸಾಬ ಮುಗುಟಖಾನ, ಸಾಹೇಬ ಪೀರಜಾದೆ, ಬಾಷಾ ಲಾಡಖಾನ್, ಡಾ.ಅಲ್ಲಾನೂರ ಬಾಗವಾನ,ಆದಮಸಾಬ ತಾಂಬೋಳಿ, ಇಬ್ರಾಹಿಂ ಅತ್ತಾರ, ಮೀರಾಸಾಬ ಝಾರೆ ಹಾಗೂ ಸುನ್ನಿ ಯಂಗ್ ಕಮೀಟಿ ಸದಸ್ಯರು ಮತ್ತು ಅನೇಕ ಗಣ್ಯರು ಇದ್ದರು.