ವಿಮಾ ಕಂಪನಿಯ ಅಧಿಕಾರಿಗಳಿಂದ ಬೆಳೆ ಪರಿಹಾರ ಕುರಿತು ಚರ್ಚೆ

Must Read

ಸವದತ್ತಿ: ಸವದತ್ತಿ ತಾಲೂಕಿನ ರೈತರಿಗೆ ಬೆಳೆ ಪರಿಹಾರ ಸಿಗುವಲ್ಲಿ ಕಳೆದ ಹತ್ತು ವರ್ಷಗಳಿಂದಲೂ ತಾರತಮ್ಯವಾಗುತ್ತಿದೆ ತಾಲೂಕಿನ ಇನಾಮಹೊಂಗಲ ಹತ್ತಿರದ ನಮ್ಮ ತಾಲೂಕಿನ ರೈತರಿಗೆ ಅತೀ ಕಡಿಮೆ ಪರಿಹಾರ, ಪಕ್ಕದಲ್ಲಿಯೇ ಇರುವ ದಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಜಾವೂರು ಆಯಟ್ಟಿ ಶಿರೂರು ಗುಮಗೋಳ ಮೊರಬ ಗ್ರಾಮಗಳ ರೈತರಿಗೆ ಹೆಚ್ಚು ಪರಿಹಾರಧನ ಬರುತ್ತದೆ ಏಕೆ ? ಈ ರೀತಿ ಯಾವ ಆಧಾರದ ಮೇಲೆ ನೀವು ಬೆಳೆ ಪರಿಹಾರ ಕೊಡುತ್ತೀರಿ? ಬೆಳೆ ಒಂದೇ ಆದರೂ ಪರಿಹಾರ ಕೊಡುವಲ್ಲಿ ಏಕೆ ತಾರತಮ್ಯ ಮಾಡುತ್ತಿದ್ದೀರಿ?ಎಂದು ಕೃಷಿ ಅಧಿಕಾರಿಗಳನ್ನು ಮತ್ತು ವಿಮಾ ಕಂಪನಿಯ ಅಧಿಕಾರಿಗಳನ್ನು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ತರಾಟೆಗೆ ತೆಗೆದುಕೊಂಡರು

ಸವದತ್ತಿ ತಹಶೀಲ್ದಾರ ಕಾರ್ಯಾಲಯದಲ್ಲಿ ವಿಮಾ ಕಂಪನಿಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸವದತ್ತಿ ತಾಲೂಕಿನಲ್ಲಿ ಬೆಳೆ ಪರಿಹಾರ ಸಿಗುವಲ್ಲಿ ತಾಲೂಕಿನ ತಾರತಮ್ಯವಾಗುತ್ತಿದೆ. ಹಣ ತುಂಬಿಸಿಕೊಳ್ಳುವಲ್ಲಿಯೂ ಸಹ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಜಾವೂರು ಆಯಟ್ಟಿ ಶಿರೂರು ಗುಮಗೋಳ ಮೊರಬ ಗ್ರಾಮಗಳ ರೈತರು ನಮ್ಮ ತಾಲೂಕಿನ ಇನಾಮಹೊಂಗಲ ಗ್ರಾಮಕ್ಕೆ ಬಂದು ಬೆಳೆ ವಿಮೆ ತುಂಬುತ್ತಿದ್ದಾರೆ ನಮ್ಮ ತಾಲೂಕಿನ ರೈತರಿಗೆ 15.7.2021.ಕೊನೆಯ ದಿನ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಜಾವೂರು ಆಯಟ್ಟಿ ಶಿರೂರು ಗುಮಗೋಳ ಗ್ರಾಮಗಳ ರೈತರಿಗೆ 31.7.2021 ವಿಮಾ ಹಣ ತುಂಬಿಸಿಕೊಳ್ಳುವಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ ಅಧಿಕಾರಿಗಳು. ಇದೇ ರೀತಿ ಮುಂದುವರೆದರೆ ತಾಲೂಕಿನ ರೈತರು ಪ್ರಕರಣ ದಾಖಲಿಸುವ ವಿಚಾರದಲ್ಲಿದ್ದಾರೆ ಆದ್ದರಿಂದ ಅಧಿಕಾರಿಗಳು ವಿಮಾ ಪರಿಹಾರ ನಿಡುವಲ್ಲಿ ಎಚ್ಚರದಿಂದ ಸರಿ ಸಮಾನವಾಗಿ ಪರಿಹಾರಧನ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ.ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ. ತಾ ಪಂ ಕಾ ನಿ ಅಧಿಕಾರಿ ಯಶ್ವಂತಕುಮಾರ. ಜಂಟಿ ಕೃಷೀ ನಿರ್ದೆಶಕರಾದ ಎಸ ಎಸ ಪಾಟೀಲ.ದಾರವಾಡ ಜಿಲ್ಲಾ ಜಂಟಿ ಕೃಷೀ ನಿರ್ದೆಶಕರಾದ ರಾಜಶೇಖರ ಬಿಜಾಪುರ. ಬೇಳಗಾವಿಜಿಲ್ಲಾ ಸಂಗ್ರಹಣಾಧಿಕಾರಿ ರೇಖಾ ಶೆಟ್ಟರ.ವಿಮಾ ಕಂಪನಿಯ ಅಧಿಕಾರಿ ಗೋಳಪ್ಪ. ಮತ್ತು ಕೃಷೀ ಇಲಾಖೆ ಸಹಾಯಕ ನಿರ್ದೇಶಕ ಕೆ ಎನ್ ಮಹಾರೆಡ್ಡಿ. ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group