spot_img
spot_img

ವಿವಾದಿತ ವಚನ ದರ್ಶನ

Must Read

- Advertisement -

ಬಸವಣ್ಣನವರ ಬೆನ್ನು ಬಿದ್ದ ಬೇತಾಳಗಳು ಮಾಲಿಕೆ ೧

ಹನ್ನೆರಡನೆಯ ಶತಮಾನವು ಸಾರ್ವಕಾಲಿಕ ಸಮಾನತೆ ಸಮತೆ ಶಾಂತಿ ಪ್ರೀತಿ ಹಂಚಿಕೊಂಡ ಶ್ರೇಷ್ಠ ಸ್ವತಂತ್ರ ಧರ್ಮವಾಗಿದೆ. ವೈದಿಕ ವ್ಯವಸ್ಥೆಗೆ ಪ್ರತಿಯಾಗಿ ಹೊಸ ಬದುಕಿನ ಆಲೋಚನಾ ಕ್ರಮವನ್ನು ಕಂಡು ಕೊಂಡರು. ಬಸವಣ್ಣ ದಮನಿತರ ಶೋಷಿತರ ಅಸ್ಪ್ರಶ್ಯರ ಕಾರ್ಮಿಕರ ಬಡವರ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ನಾಡು ಕಂಡ ಸರ್ವ ಶ್ರೇಷ್ಠ ನಾಯಕ.

ಇಂತಹ ದುರ್ಬಲರನ್ನು ಮತ್ತೆ ಶೋಷಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವೈದಿಕ ಮನಸ್ಸುಗಳು ಈಗ ಬಸವಣ್ಣ ಮತ್ತು ಶರಣರ ಬೆನ್ನು ಬಿದ್ದ ಬೇತಾಳಗಳು.
ಗದುಗಿನ ಶಿವಾನಂದ ಮಠದ ವಿವಾದಾಸ್ಪದ ಸ್ವಾಮಿಯೊಬ್ಬರು ಏಕಾ ಏಕಿ ಲಿಂಗಾಯತ ಧರ್ಮದ ಹೊಸ ವ್ಯಾಖ್ಯಾನ ಮಾಡಲು ಹೊರಟಿದ್ದು ಅವರ ಅವಿವೇಕತನದ ಪರಮಾವಧಿ. ವಚನ ದರ್ಶನ ಎಂಬ ಅರ್ಥವಿಲ್ಲದ ಪೂರ್ವಗ್ರಹಪೀಡಿತ ಕೃತಿಯಾಗಿದೆ.

- Advertisement -

ಈ ಕೃತಿಯಲ್ಲಿ ಪೂರ್ವ ನಿಯೋಜಿತ ಮತ್ತು ಕೃತ್ರಿಮ ಸಾಹಿತ್ಯವನ್ನು ಆಕರ ಮಾಡಿಕೊಂಡು
ಸದಾಶಿವ ಸ್ವಾಮಿಗಳು ಸಂಘ ಪರಿವಾರದ ಆಶ್ರಯದಲ್ಲಿ ಆಯ್ದ ವೈದಿಕ ಮನಸ್ಸುಗಳ ಬರಹಗಾರರನ್ನು ಕೂಡಿಸಿಕೊಂಡು ಶರಣರ ವಚನ ಆಂದೋಲನವು ವೇದ ಆಗಮ ಉಪನಿಷತ್ ಗಳ ಮೂಲ ದಲ್ಲಿ ಕಾಣಿಸುವ ವ್ಯರ್ಥ ಪ್ರಯತ್ನವಾಗಿದೆ. ವಚನ ಸಾಹಿತ್ಯದ ಸಂಪೂರ್ಣ ಜ್ಞಾನ ಅಧ್ಯಯನವಿರದ ತರಾತುರಿಯಲ್ಲಿ ವಚನ ದರ್ಶನ ಎಂಬ ಕಪೋಲಕಲ್ಪಿತ ಮತ್ತು ಖೋಟಾ ಪ್ರಕ್ಷಿಪ್ತ ವಚನಗಳ ಸಹಾಯದಿಂದ .ವಚನ ಚಳವಳಿಯು ವೇದ ಆಗಮ ಶಸ್ತ್ರ ಉಪನಿಷತ್ ಇವುಗಳ ಮುಂದುವರೆದ ಭಾಗ ಎಂದು ಹಸಿ ಹುಸಿಯನ್ನು ಜನರ ಮನಸ್ಸಿನಲ್ಲಿ ಬಿಟ್ಟು ಹೊರಟಿದ್ದಾರೆ.

ವಚನ ಚಳವಳಿ ಇದು ಚಳವಳಿ ಅಲ್ಲ ಮತ್ತು ಶರಣರು ಮಾಡಿದ್ದು ಕ್ರಾಂತಿಯೇ ಅಲ್ಲ ಎಂದು ಸಂಘ ಪರಿವಾರದ ಶಂಕರಾನಂದ ಎಂಬವರು ತನ್ನ ಬಾಯಿಗೆ ಬಂದ ಹಾಗೆ ಮಾತಾಡಿದ್ದಾನೆ. ಅದರಲ್ಲಿ ವಿಜಯಪುರದ ಪ್ರಮುಖ ಲಿಂಗಾಯತ ನಾಯಕರು ಹಾಜರಿದ್ದರು. ಇನ್ನು ವಿಜಯಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಡಾ ಎಂ ಬಿ ಪಾಟೀಲರು ಆದೇಕೋ ಕುರುಡು ಜಾಣತನ ಪ್ರದರ್ಶಿಸುತ್ತಿದ್ದಾರೆ. ಎಲ್ಲಾ ಲಿಂಗಾಯತ ರಾಜಕಾರಣಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವ ಮೌನಕ್ಕೆ ಜಾರಿದ್ದಾರೆ.

ವಚನ ದರ್ಶನ ಎಂಬ ಕೃತಿಯಲ್ಲಿ ಶೂನ್ಯನಾಥ ಎಂಬ ಶರಣನಲ್ಲದ ವ್ಯಕ್ತಿಯನ್ನು ಪರಿಚಯಿಸಿ ಅವರ ವಚನವನ್ನು ಉಲ್ಲೇಖ ಮಾಡಿದ್ದಾರೆ. ಶರಣರನ್ನು ಬಸವಣ್ಣನವರನ್ನು ಪಾಶ್ಚಿಮಾತ್ಯ ದಾರ್ಶನಿಕರಿಗೆ ಹೋಲಿಸಬಾರದು ಎನ್ನುತ್ತಾ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಶರಣ ಸಿದ್ಧಾಂತವನ್ನು ಹೋಲಿಸಲೇ ಬರಡು ಅದು ಭಕ್ತಿ ಚಳವಳಿಗೆ ಅಪಮಾನವೆನ್ನುತ್ತಾರೆ ಲೇಖಕರು .

- Advertisement -

ಡಾ ಫ ಗು ಹಳಕಟ್ಟಿ ಅವರಿಗೆ ಕ್ರಿಶ್ಚಿಯನ್ ಸಮುದಾಯದವರು ಮುಂಬೈ ಲಾ ಕಾಲೇಜಿನಲ್ಲಿ ಅತ್ಯಂತ ಕಿರುಕಳ ನೀಡಿದರು ಅಲ್ಲದೆ ಅವರ ವಚನ ಶಾಸ್ತ್ರ ಸಾರ ಎಂಬ ಕೃತಿಯನ್ನು ಪ್ರಕಟಿಸಲು ಹಿಂದೇಟು ಹಾಕಿ ಡಾ ಹಳಕಟ್ಟಿ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಅತ್ಯಂತ ಕೀಳು ಮಟ್ಟದ ಮತ್ತು ಡಾ ಹಳಕಟ್ಟಿಯವರು ಕ್ರಿಶ್ಚಿಯನ್ ಧರ್ಮಿಯರ ವಿರೋಧಿಗಳಾಗಿದ್ದರು ಎನ್ನುವ ವಿವಾದಾಸ್ಪದ ವಿಚಾರವನ್ನು ಓದುಗರ ಮುಂದೆ ಇಟ್ಟಿದ್ದಾರೆ.

ಒಂದು ಒಳ್ಳೆಯ ವಿಚಾರವು ಜಗತ್ತಿನಲ್ಲಿ ಎಲ್ಲ ದಾರ್ಶನಿಕರ ಆಲೋಚನೆ ಉಪದೇಶದಲ್ಲಿ ಕಂಡು ಬಂದಿರುವುದು ಸರಳ ಸಹಜ ಆದರೆ ವಚನ ಚಳವಳಿಯು ಸಂಪೂರ್ಣ ವೇದ ಆಗಮ ಶಾಸ್ತ್ರ ಪುರಾಣಗಳ ಆಧಾರದ ಮೇಲೆ ರಚಿತಗೊಂಡಿರುವವು ಎಂಬುದು ಶುದ್ಧ ಸುಳ್ಳು. ಇದನ್ನೇ ಬಂಡವಾಳ ಮಾಡಿಕೊಂಡ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಇವರು ಅಮೆರಿಕೆಯ ರವಿ ಹಂಜ ಎನ್ನುವವರ ಕೈಯಲ್ಲಿ ನಿರಂತರವಾಗಿ ಲಿಂಗಾಯತ ವಚನ ಚಳವಳಿಯ ವಿರುದ್ಧವಾಗಿ ಲೇಖನವನ್ನು ಪ್ರಕಟಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

ಅಮೆರಿಕೆಯ ರವಿ ಹಂಜ ಭಾರತಕ್ಕೆ ಬರಲಿ ವಿಶ್ವೇಶ್ವರ ಭಟರು ವಚನ ಅಧ್ಯಯನ ಮಾಡಿದ ಬಸವ ಧರ್ಮಿಯರ ಜೊತೆಗೆ ಚರ್ಚಿಸಲಿ. ಹೀಗೆ ಅವಸರದಲ್ಲಿ ಏನೇನೋ ಬರೆದು ವಿವಾದ ಸಾಮಾಜಿಕ ತಲ್ಲಣ ಉಂಟು ಮಾಡದಿರಲಿ .

ಡಾ ಎಂ ಎಂ ಕಲಬುರ್ಗಿ ಗೌರಿ ಲಂಕೇಶ ಇವರ ಹತ್ಯೆಯನ್ನು ಸಂಭ್ರಮಿಸಿದ ಮನಸ್ಸುಗಳಿಗೆ ವಚನ ದರ್ಶನ ಹೇಗೆ ಆಪ್ತವಾಯಿತು ಎನ್ನುವುದೇ ನಮ್ಮ ಮುಂದಿನ ಯಕ್ಷ ಪ್ರಶ್ನೆ. ಅಂದು ಬಸವಣ್ಣನವರನ್ನು ಕಾದಿದದವರೇ ಇಂದೂ ಕೂಡ ಬಸವಣ್ಣನವರ ಬೆನ್ನು ಬಿದ್ದ ಬೇತಾಳಗಳು. ಎಲ್ಲಾ ಬಸವ ಭಕ್ತರು ಒಕ್ಕೋರಲಿನಿಂದ ವಚನ ದರ್ಶನ ಕೃತಿಯನ್ನು ಧಿಕ್ಕರಿಸಿ. ಇಂತಹ ಕೃತಿ ಬಿಡುಗಡೆ ಸಭೆ ಸಮಾರಂಭಕ್ಕೆ ಹೋಗುವ ಅರಿವಿಲ್ಲದ ಲಿಂಗಾಯತ ಮಠದ ಸ್ವಾಮಿಗಳನ್ನು ರಾಜಕೀಯ ಮುಖಂಡರನ್ನು ಸಾಮಾಜಿಕ ನಾಯಕರನ್ನು ಸಂಪೂರ್ಣ ಬಹಿಸ್ಕರಿಸಲು ಕೋರಿಕೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group