ಮೂಡಲಗಿ: ಚಿಲ್ಡ್ರನ್ ಆಫ್ ಇಂಡಿಯಾ ಮತ್ತು ಅಮ್ಮಾ ಫೌಂಡೇಶನ್ ರಾಯಬಾಗ ಹಾಗೂ ಸೇವಕ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಲಸಿಕಾ ಆಂದೋಲನ ಯೋಜನೆಯ ಗುಡ್ ಯೋಜನೆ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕಿನ ಕಲ್ಲೋಳಿ, ತುಕ್ಕಾನಟ್ಟಿ, ಖಾನಟ್ಟಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ, 18 ವರ್ಷ ಮೇಲ್ಪಟ್ಟವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ, ಕೊರೋನಾ ಓಡಿಸಿ ಎಂಬ ಕೊರೋನಾ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.
ಇದರ ಜೊತೆಗೇ ಎರಡು ಸಾವಿರ ಎನ್ 95 ಮಾಸ್ಕ್ ಹಾಗೂ ಸ್ಯಾನಿಟೈಜರ, 10 ಬಿಪಿ ಮಶಿನ್, 10 ಥರ್ಮಲ್ ಗನ್, 10 ಅಕ್ಸಿ ಮೀಟರ್, 10 ವ್ಯಾಕ್ಸಿನ್ ಕಂಟೇನರ ಜೊತೆಗೆ ಫೇಸ್ ಶೀಲ್ಡ್ ಕೈಗವಸಗಳನ್ನು ಆಯಾ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಫೌಂಡೇಶನದ ಗುಡ್ ಕಾರ್ಯಕ್ರಮ ಅಧಿಕಾರಿ ಬಸವರಾಜ ಹುಲಗನ್ನವರ, ಅಮ್ಮಾ ಫೌಂಡೇಶನ್ ಕಾರ್ಯದರ್ಶಿ ಶೋಭಾ ಗಸ್ತಿ, ಸಿಬ್ಬಂದಿಗಳಾದ ಯಲ್ಲಪ್ಪ ಮಾದರ, ಕಾಂಚನ ಮೇತ್ರಿ, ರವಿಕುಮಾರ ಹರಿಜನ ಹಾಗೂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.