ದಲಿತ ಸಂಘಟನೆಗಳ ಗ್ರಾಮ ಘಟಕಗಳ ಉದ್ಘಾಟನೆ ದಿ. 13 ರಂದು

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಸಿಂದಗಿ: ಸಂವಿಧಾನದಲ್ಲಿ ಮೀಸಲಾತಿ ಇರದ ವಿವಿಧ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡುತ್ತಿರುವುದರಿಂದ ಮೂಲ ದಲಿತರಿಗೆ ಹಾಗೂ ಅಲ್ಪಸಂಖ್ಯಾತರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಆ ನಿಟ್ಟಿನಲ್ಲಿ ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯು ಗ್ರಾಮ ಘಟಕಗಳನ್ನು ಉದ್ಘಾಟನೆ ಮಾಡುವ ಮೂಲಕ ಅರಿವು ಮೂಡಿಸಲು ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸೆ. 13 ರಂದು ಗ್ರಾಮ ಘಟಕ ಉದ್ಘಾಟನೆ ಗೊಳ್ಳಲಿದೆ ಎಂದು ಜಿಲ್ಲಾ ಸಂ.ಸಂಚಾಲಕರು ವಾಯ್.ಸಿ.ಮಯೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ರಾಜ್ಯದಲ್ಲಿ ಸುಮಾರು 4 ದಶಕಗಳಿಂದ, ಸಮಾಜದಲ್ಲಿ ನೊಂದವರ, ದೌರ್ಜನ್ಯಕ್ಕೆ ಒಳಗಾದವರ, ಬಡವರ, ಮಹಿಳೆಯರ, ಮತ್ತು ಮಕ್ಕಳ ಮೇಲೆ ಆದ ದೌರ್ಜನ್ಯಗಳನ್ನು ಖಂಡಿಸುತ್ತಾ, ನೊಂದವರಿಗೆ ನ್ಯಾಯ ಕೊಡಿಸುತ್ತಾ ಹೋರಾಟ, ಚಳವಳಿ, ಧರಣಿ, ಸತ್ಯಾಗ್ರಹ ಮುಂತಾದ ಹೋರಾಟದ ಮಜುಲುಗಳನ್ನು ಮೈಗೂಡಿಸಿಕೊಂಡು ನೊಂದವರಿಗೆ ನೆರಳಾಗಿ , ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಹಸಿದವರಿಗೆ ಉಸಿರಾಗಿ, ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ರಾಜ್ಯದಲ್ಲಿ-ಜಿಲ್ಲೆಯಲ್ಲಿ ತಾಲೂಕು ಹಾಗೂ ಗ್ರಾಮ ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

- Advertisement -

ಈ ಸಂದರ್ಭದಲ್ಲಿ ತಳವಾರ ಪರಿವಾರ ಸಮಿತಿ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಮಾತನಾಡಿ, ಈ ಸಮಾಜದಲ್ಲಿ ಉಳ್ಳವರ ಸೇವೆ ಸಲ್ಲಿಸಿ ತಮ್ಮ ಇಡೀ ಜೀವನವನ್ನೇ ದಾಸ್ಯತ್ವದಲ್ಲಿ ದೂಡಿರುವ ಭಾರತೀಯ ಸಮಾಜದ ಅನೇಕ ತಳ ಸಮುದಾಯಗಳಿವೆ, ಆ ಎಲ್ಲ ಸಮುದಾಯಗಳಿಗೆ ಸಮರ್ಪಕ ಮೀಸಲಾತಿ ದೊರಕಿಸಿಕೊಡಬೇಕಾಗಿದೆ ಹಾಗಾಗಿ ನಮ್ಮ ಕರ್ನಾಟಕದಲ್ಲಿ ಎಸ್.ಸಿ ಮೀಸಲಾತಿ ಹಂಚಿಕೆಯಲ್ಲಿ ಎ.ಜಿ.ಸದಾಶಿವ ಆಯೋಗ ಜಾರಿಗೆ ಬರಬೇಕಾಗಿದೆ. ಮತ್ತು ಧಾರ್ಮಿಕ ಅಲ್ಪ ಸಂಖ್ಯಾತರಾದ ಮುಸ್ಲಿಂ ಸಮುದಾಯಕ್ಕೆ ರಂಗನಾಥ ಮಿಶ್ರಾ ಹಾಗೂ ಸಾಚಾರ್ ವರದಿ ಶೀಘ್ರಗತಿಯಲ್ಲಿ ಜಾರಿಗೆ ಬರಬೇಕಾಗಿದೆ ಮತ್ತು ತಳವಾರ, ಕೂಲಿಕಬ್ಬಲಿಗ, ಪರಿವಾರ ಮತ್ತು ಉಪ್ಪಾರ ಮತ್ತು ಹಾಲುಮತ (ಕುರುಬ) ಸಮುದಾಯಗಳಿಗೆ ಎಸ.ಟಿ ಪ್ರಮಾಣ ಪತ್ರ ನೀಡಬೇಕಾಗಿದೆ. ಅಲ್ಲದೆ ಸಮುದಾಯಗಳ ಮೀಸಲಾತಿಗಾಗಿ ರಾಜ್ಯವ್ಯಾಪಿ ಹೋರಾಟಗಳು ಕೂಡಾ ನಡೆದಿವೆ, ಈ ಮಹತ್ವದ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿಯು ಸಂಪೂರ್ಣವಾಗಿ ಬೆಂಬಲಿಸುತ್ತದೆ ಅಲ್ಲದೆ ಈ ಒಂದು ಮಹತ್ವದ ಸಮಾವೇಷದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ-ಐಕ್ಯತಾ ಕುರಿತು ಜಿಲ್ಲೆಯ ಹಿರಿಯ ಹೋರಾಟಗಾರರಿಂದ ಜಾಗೃತಿ ಮೂಡಿಸುವ ಈ ಒಂದು ಮಹತ್ವದ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದ್ದರು,

ಈ ವೇಳೆ ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಮಾತನಾಡಿ, ಮೊದಲು ಮನೆಗೆದ್ದು ಮಾರು ಗೆದಿಬೇಕು ಅನ್ನೋ ರೀತಿಯಲ್ಲಿ ಮೊದಲು ಗ್ರಾಮ ಮಟ್ಟದಲ್ಲಿ ಹಿಂದುಳಿದ ದಲಿತ ಅಲ್ಪಸಂಖ್ಯಾತ ಸಮುದಾಯಗಳನ್ನು ಜಾಗೃತ ಗೊಳಿಸಿ ಸಾಮರಸ್ಯ ಮೂಡಿದಾಗ ಮಾತ್ರ ಐಕ್ಯತೆ ಆಗುತ್ತದೆ ,ಎಲ್ಲ ಸಮಾಜದವರಿಗೂ ಸಂವಿಧಾನಾತ್ಮಕ ಹಕ್ಕು ಸಿಗಬೇಕು ಎನ್ನುವ ಸದಾಸೆಯೇ ಕಾರ್ಯಕ್ರಮದ ಮುಖ್ಯ ಉದ್ಯೇಶ. ಡಾ; ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನ ಒಂದೇ ಸಮಾಜಕ್ಕೆ ಸಮುದಾಯಕ್ಕೆ ರಚಿಸಲಿಲ್ಲಾ ಎಲ್ಲಾ ನಿರ್ಜಿವ ಹಾಗೂ ಸಜೀವ ಜೀವಿಗಳಿಗೆ ನ್ಯಾಯ ಒದಗಿಸಿದ್ದಾರೆ ಅದೇ ನಿಟ್ಟಿನಲ್ಲಿ ಕೊಕಟನೂರ ಗ್ರಾಮದಲ್ಲಿ ಗ್ರಾಮಘಟಕ ಉದ್ಘಾಟನೆಯಲ್ಲಿ ಜಾಗೃತಿ ಐಕ್ಯತಾ  ಸಮಾವೇಶ ರೂಪಿಸಲಾಗಿದೆ ಎಂದರು

ಈ ಸಂದರ್ಭದಲ್ಲಿ ಅಖಿಲ ಮನಿಯಾರ, ಮಂಜುನಾಥ ಯಂಟಮಾನ, ಪ್ರಕಾಶ ಗುಡಿಮನಿ,ಲಕ್ಕಪ್ಪ ಬಡಿಗೇರ, ನೀಲಕಂಠ ಹೊಸಮನಿ, ಶರಣು ಚಲುವಾದಿ, ಶಿವಪುತ್ರ ಮೇಲಿನಮನಿ, ಬಸು ಇಂಗಳಗಿ, ರಾಜಕುಮಾರ ಸಿಂದಗೇರಿ,ಜೈ ಭೀಮ್ ತಳಕೇರಿ, ಜೈ ಭೀಮ್ ಕೂಚಬಾಳ, ಶರಣು ಚಲವಾದಿ, ನೀಲಕಂಠ ಹೊಸಮನಿ, ಪ್ರಮೋದ್ ಬರಗಲ, ಪ್ರದೀಪ್ ಹಜ್ಜನವರ, ಹಾಗೂ ಅನೇಕರು ಭಾಗವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!