spot_img
spot_img

ಹಣೆ ಬರಹ ಎಂದರೇನು? ನಮ್ಮ ನಮ್ಮ ಹಣೆ ಬರಹಕ್ಕೆ ಹೊಣೆ ಯಾರು…?

Must Read

spot_img
- Advertisement -

🌷ವಿಧಿ ಬರಹದ ಮುಂದೆ “ಹರಿ ಹರ ಬ್ರಹ್ಮರೂ” ಏನೂ ಮಾಡಲಾರರು !! ಬ್ರಹ್ಮನನ್ನೇ ಬಿಡದ ಹಣೆಬರಹ ನಮ್ಮನ್ನು ಬಿಟ್ಟೀತೆ ಎಂಬ ಮಾತೊಂದನ್ನು ನಮ್ಮ ಹಿರಿಯರು ಹೇಳುವುದನ್ನು ಕೇಳಿರುವಿರಿ.

🌷ಅಂದರೆ ಬ್ರಹ್ಮ “ಸೃಷ್ಟಿ” ಕಾರ್ಯಕ್ಕೂ ಮೊದಲು “ವಿಧಿ” ದೇವತೆಯನ್ನು ಸೃಷ್ಟಿ ಮಾಡುತ್ತಾನೆ. ಕಾರಣ ಎಲ್ಲಾ ಕಾರ್ಯಗಳಿಗೆ ಒಂದು ನಿಯಮವಿರಬೇಕಲ್ಲವೆ, “ವಿಧಿ ದೇವತೆಯ” ಸೃಷ್ಟಿ ಆದ ತಕ್ಷಣವೇ ಕಂಡದ್ದು “ಬ್ರಹ್ಮ”. ಆ ದೇವತೆಯ ಕೆಲಸವೇ ವಿಧಿ (ನಿಯಮ) ಬರೆಯುವುದು ಅದರಂತೆ ಸೃಷ್ಟಿಕರ್ತನಿಗೂ ಹಣೆ ಬರೆಹ ಬರೆದಳು. ನೀನು ಸೃಷ್ಟಿ ಮಾಡಿದವಳನ್ನೇ ವಿವಾಹವಾಗು ಎಂದು.

🌷”ಬ್ರಹ್ಮನನ್ನ ಬಿಡದ ಹಣೆಬರಹ ನಮ್ಮನ್ನ ಬಿಡುತ್ತದೆಯೇ”, ನಮ್ಮ ಜನ್ಮ ಜನ್ಮದ ಕರ್ಮ ಫಲಗಳೇ ಈ ಜನ್ಮದ ದುಃಖಕ್ಕೆ ಕಾರಣ . ಕಷ್ಟ ಬಂದಾಗ “ಓ ದೇವರೇ ನನಗೇಕೆ ಇಷ್ಟು ಕಷ್ಟ” ಎಂದು ಹೇಳುತ್ತೇವೆ . “ಅಯ್ಯಾ ನೀ ಮಾಡಿದಾ ಕರ್ಮ ಬಲವಂತವಾದೊಡೆ ನಾ ಏನ ಮಾಡಲಿ” ಎಂದು ಭಗವಂತ ಹೇಳುತ್ತಾನೆ . ಕಾರಣ ಇಲ್ಲದೆ ಯಾವ ಕಷ್ಟಗಳೂ ಮನುಷ್ಯನಿಗೆ ಆಗಲಿ ಜೀವಿಗಳಿಗೆ ಆಗಲಿ ಬರುವುದಿಲ್ಲ.

- Advertisement -

🌷ಜನ್ಮ ಜನ್ಮಾಂತರಗಳಲ್ಲಿ ಹಲವಾರು ಪಾಪಗಳನ್ನು ಮಾಡಿ ಈ ಜನ್ಮದಲ್ಲಿ ಹುಟ್ಟಿದಾಕ್ಷಣ ಹೊಸ ಹುಟ್ಟು ಬಂದಾಕ್ಷಣ ಎಲ್ಲಾ ಪಾಪ ಕರ್ಮಗಳೂ ಹೋಗಿ ಬಿಡುತ್ತದೆಯಾ. ಅಯ್ಯಾ ನೀ ಇಂದು ಈ ಜನ್ಮದಲ್ಲಿ ಬಹು ವಿಧದ ಕಷ್ಟ ಅನುಭವಿಸುತ್ತಿದ್ದೀಯ ಎಂದರೆ ಅದು ಪೂರ್ವ ಜನ್ಮದ ಪಾಪದ ಕರ್ಮ ಫಲವಷ್ಟೇ ಅದಕ್ಕೆ ದೇವರನ್ನು ದೂರುವುದು ಎಷ್ಟು ಸರಿ.

🌷ಮಾಡಬಾರದ ಪಾಪ ಕೃತ್ಯಗಳನ್ನು ಮಾಡಿ ಸತ್ತು ಹೊಸ ಜನ್ಮ ಎತ್ತಿದೊಡೆ “ಕರ್ಮ” ಬೆನ್ನತ್ತಿ ಬರದೆ ಇರುತ್ತದೆಯಾ. ದಾರಿಯಲಿ ಭಿಕ್ಷುಕ, ಅನಾಥ, ಅಂಗವಿಕಲರ ಕಂಡಾಗ ಅಯ್ಯೋ ನಿಷ್ಕರುಣಿ ದೇವರೇ ನಿನಗೇ ದಯೆ ಎಂಬುದೇ ಇಲ್ಲವೇ ಇವರೆಲ್ಲಾ ಏನು ಮಾಡಿದ್ದರು ಇವರಿಗೆ ಇಷ್ಟು ಕಷ್ಟ ಯಾಕೆ ಎಂದು ದೇವರನ್ನು ದೂರುವವರೇ ಬಹಳ.

🌼ಆದರೆ ಎಂದಾದರೂ ಒಮ್ಮೆ ಯೋಚಿಸಿದ್ದೀರಾ ಯಾಕೆ ಇವರಿಗೆಲ್ಲಾ ಇಂತಹ ಜೀವನ ಎಂದು . ಕರ್ಮ ಫಲ. ಅವರ ಹಿಂದಿನ ಜನ್ಮದಲ್ಲಿ ನಾನಾ ಪಾಪ ಕೃತ್ಯಗಳನ್ನು ಮಾಡಿರುತ್ತಾರೆ ಕೊಲೆ, ದರೋಡೆ ಅತ್ಯಾಚಾರ, ಅನಾಚಾರ ಮಾಡಿ ಈಗ ಈ ಜನ್ಮದಲ್ಲಿ ಇಂತಹ ರೂಪದಲ್ಲಿ ಜನಿಸಿ ತಮ್ಮ ಜನ್ಮಾಂತರಗಳ ಪಾಪಗಳನ್ನು ಕಳೆದುಕೊಳ್ಳುತ್ತಾರೆ .

- Advertisement -

🌷ಅಯ್ಯಾ ದೇವರು ಸುಮ್ಮನೆ ಯಾರಿಗೂ ಕಷ್ಟ ಕೊಡುವುದಿಲ್ಲ ಅಯ್ಯಾ ಅವರು ಮಾಡಿದ ಕರ್ಮಗಳ ಅನುಸಾರ ಅವರು ನಾನಾ ಕಷ್ಟಗಳನ್ನು ಅನುಭವಿಸುತ್ತಾರೆ . ಇದರಲ್ಲಿ ದೇವರು ನಿಷ್ಕರುಣಿ ಎಂದರೆ ಹೇಗೆ …?

🌷ಅಯ್ಯಾ ದೇವರು ಸುಮ್ಮನೆ ಯಾರಿಗೂ ಕಷ್ಟ ಕೊಡುವುದಿಲ್ಲ. ಅವರು ಮಾಡಿದ ಕರ್ಮಗಳ ಅನುಸಾರ ಅವರು ನಾನಾ ಕಷ್ಟಗಳನ್ನು ಅನುಭವಿಸುತ್ತಾರೆ . ಇದರಲ್ಲಿ ದೇವರು ನಿಷ್ಕರುಣಿ ಎಂದರೆ ಹೇಗೆ …?

🌷ದೇವರುಗಳು ಸಹ ಭೂಲೋಕದಲ್ಲಿ ಜನ್ಮ ವೆತ್ತಿ ಕರ್ಮ ಕಳೆದು ಕೊಂಡವರೇ . “ರಾಮ-ಸೀತೆ” ಜನ್ಮ ತಾಳಿ ಅವರೇ ದೇವರಾಗಿದ್ದರೂ ಇಲ್ಲಿ ಬಂದು ನಾನಾ ನೋವು ಕಷ್ಟ ಎದುರಿಸಲಿಲ್ಲವೇ . ಪುಣ್ಯ ಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ. ಒಬ್ಬರಿಗೆ ಸಹಾಯ ಏನೂ ಮಾಡದೆ ಸ್ವಾರ್ಥಿಯಾಗಿ ಬದುಕಿ ಈಗ ಸುಖ ಬೇಕು ಎಂದರೆ ಸಿಗುವುದಾ ?

🌷ಮಾನವ ಬುದ್ದಿ ಜೀವಿ, ಮಾತು ಬರುವ ಏಕೈಕ ಜೀವಿ ಈ ಭೂಮಿ ಮೇಲೆ . ಭಾವನೆಗಳನ್ನು ಮಾತಿನಲ್ಲಿ ವ್ಯಕ್ತ ಪಡಿಸುವ ಜೀವಿ ಮಾನವ ಆಗಿದ್ದಾಗ ಒಬ್ಬರ ಕಷ್ಟ ಸುಖಗಳಲ್ಲಿ ಬೆರೆತು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಪುಣ್ಯ ತಾನಾಗಿಯೇ ಲಭಿಸಿ ಜನ್ಮ ಜನ್ಮಗಳಲ್ಲಿ ಸುಖ ಸಂತೋಷ ನೆಮ್ಮದಿಯಿಂದ ಇರುತ್ತಾರೆ .

🌷ನಮ್ಮ ಒಳ್ಳೆಯದು ಕೆಟ್ಟದ್ದು ನಮ್ಮಲ್ಲಿಯೇ ಇದೆ ಎಂದಾಗ ದೇವರು ಹೇಗೆ ಕಾರಣವಾಗುತ್ತಾರೆ. ಕಾರಣವಿಲ್ಲದೆ ಯಾವ ಅವಘಡವೂ ನಡೆಯುವುದಿಲ್ಲ. ಅದು “ವಿಧಿ” ನಿಯಮ ತನ್ನ ಕಾರ್ಯ ತಾನೂ ಮಾಡಿಯೇ ಮಾಡುತ್ತದೆ.

🌷ಸಾವು ಪ್ರತಿ ಜೀವಿಗೂ ಒಂದಲ್ಲಾ ಒಂದು ದಿನ ಬರುತ್ತದೆ. ಇರುವ ಮೂರುದಿವಸಗಳಲ್ಲಿ ನಾವೆಲ್ಲರೂ ಸತ್ಕಾರ್ಯಗಳನ್ನು ಮಾಡಿ ಆ ಭಗವಂತನ ಸಾಮಿಪ್ಯವನ್ನು ಪಡೆಯೋಣ.

🍁”ಕೃಷ್ಣಾರ್ಪಣಮಸ್ತು“🍁


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group