spot_img
spot_img

ಶಾಸ್ತ್ರಿಗಳ ಸಾಹಿತ್ಯ ಕಾಲ

Must Read

- Advertisement -

ಕವಿ ಕಾವ್ಯ ಲಕ್ಷಣ
( ಸರಳ ಕಾವ್ಯ ಮೀಮಾಂಸೆ)

ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಬಲ್ಲಿದರು ಇದ್ದು ಬಲವಿಲ್ಲ,
ಸಾಹಿತ್ಯವೆಲ್ಲರಿಗಿಲ್ಲ
ಸರ್ವಜ್ಞ.

‌ ‌ ಎಲ್ಲರೂ ಸಾಹಿತಿಗಳಾಗಲು , ಕವಿಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ವಿಶಿಷ್ಟ ಪ್ರತಿಭೆ ಅಗತ್ಯ. ಆ ಪ್ರತಿಭೆ ಎಲ್ಲರಿಗಿರುವದಿಲ್ಲ. ಅಷ್ಟೇ ಅಲ್ಲ, ಕೇವಲ ಪ್ರತಿಭೆ ಇದ್ದರೆ ಸಾಲದು. ಆ ಪ್ರತಿಭೆಯನ್ನು ನಾವು ಸರಿಯಾದ ರೀತಿಯಲ್ಲಿ ದುಡಿಸಿಕೊಳ್ಳಬೇಕಾಗುತ್ತದೆ.

- Advertisement -

ಪ್ರತಿಭೆ ಮೂಲ ವಸ್ತು ಮಾತ್ರ. ಸರಳವಾಗಿ ಹೇಳುವದಿದ್ದರೆ ಸಾಹಿತ್ಯ/ಕಾವ್ಯ ಎನ್ನುವದೊಂದು ಸಾಂಬಾರು ಇದ್ದ ಹಾಗೆ. ಒಲೆ, ಬೆಂಕಿ, ಪಾತ್ರೆ , ನೀರು ಇವು ಅದಕ್ಕೆ ಬೆಕಾದ ಮುಖ್ಯ ಪರಿಕರಗಳು. ಅಷ್ಟೂ ಸಾಲದು. ರುಚಿಕರವಾದ ಸಾಂಬಾರು ತಯಾರಾಗಬೇಕಾದರೆ ಮೆಣಸು, ಜೀರಿಗೆ, ಕೋತಂಬರಿ , ಮೆಂತೆ, ಉಪ್ಪು ಎಲ್ಲ ಹಾಕಿ ಒಗ್ಗರಣೆ ಕೊಟ್ಟು ಕುದಿಸಬೇಕು.
ಹಾಗೆ ಪ್ರತಿಭೆಗೆ ಪೂರಕವಾದ ಹಲವು ಪರಿಕರಗಳ ಅಗತ್ಯವಿದೆ. ಓದು, ಆ ಮೂಲಕ ಬರುವ ಶಬ್ದಶಕ್ತಿ, ಕಲ್ಪನಾಶಕ್ತಿ, ಭಾಷಾಶುದ್ಧಿ ವಿಷಯ ಜ್ಞಾನ, ರಸಗ್ರಹಣ ಶಕ್ತಿ, ಛಂದಸ್ಸು, ಮಾತ್ರೆ, ಗಣ ಇತ್ಯಾದಿಗಳ ಕಲ್ಪನೆ ಏನೆಲ್ಲ ಸೇರಿ ನಮ್ಮ ಮನಸಿನಲ್ಲಿ ಕುದಿಕುದಿದು ಕಾವ್ಯ ಹೊರಬರಬೇಕಾಗುತ್ತದೆ. ನಾವು ಬರೆದದ್ದೆಲ್ಲ, ಅಥವಾ ನಾವು ಕವನ ಎಂದುಕೊಂಡಿದ್ದೆಲ್ಲ ಕಾವ್ಯವಾಗುವದಿಲ್ಲ. ಕಾವ್ಯದ ಗುಣ ಲಕ್ಷಣಗಳನ್ನೆಲ್ಲ ಸರಿಯಾಗಿ ತಿಳಿದುಕೊಂಡು ಬರೆದರೆ ಒಳ್ಳೆಯ ಕಾವ್ಯ ಹೊರಬರಬಲ್ಲದು. ಮುಖ್ಯವಾಗಿ ಕಾವ್ಯಕ್ಕೆ ಒಂದು ಲಯಬದ್ಧತೆ( ರಿದಮ್) ಬೇಕು.

ಕವಿಯನ್ನು ಕಮ್ಮಟದಲ್ಲಿ ತಯಾರಿಸಲು ಬರುವದಿಲ್ಲ. ಸ್ವಯಂ ಪ್ರತಿಭೆಯಿಂದಲೇ ಕಾವ್ಯ ಹೊರಬರಬೇಕು.
ಕಾವ್ಯರಚನೆಗೆ ಬೇಕಾದ ಇನ್ನೊಂದು ಅಂಶ ಅಭ್ಯಾಸ. ಈ ಮಾತನ್ನು ಇಂದು ಎಲ್ಲರೂ ಹೇಳುತ್ತಾರೆ. ಆದರೆ ಯಾರೂ ಅಥವಾ ಹೆಚ್ಚಿನವರು ಅದನ್ನು ಅನುಸರಿಸುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಲು ಸಾಧ್ಯ. ಆದರೆ‌ ಕಡಿಮೆ ಆಗಿರುವದಂತೂ ನಿಜ. ಒಂದೆಡೆ ಹೊರಬರುವ ಪುಸ್ತಕಗಳ ಸಂಖ್ಯೆ ಹೆಚ್ಚಿದೆ. ಇನ್ನೊಂದು ಕಡೆ ಓದುವವರ ಸಂಖ್ಯೆ ಕುಸಿದಿದೆ. ಪ್ರತಿಭೆ ಇರಲಿ, ಬೇರೇನೇ ಇರಲಿ, ಅಭ್ಯಾಸವಿಲ್ಲದೇ ಇದ್ದರೆ ಏನೂ ಪ್ರಯೋಜನವಾಗದು. ಏಕೆಂದರೆ ಓದಿನಿಂದ ತಾನೆ ನಮ್ಮ ಜ್ಞಾನ ವೃದ್ಧಿಯಾಗುವದು? ಜ್ಞಾನ ವೃದ್ಧಿಸದೇ ನಮ್ಮ ತಿಳಿವಳಿಕೆ ಹೆಚ್ಚಲಾರದು. ಭಾಷೆ ಗಟ್ಟಿಯಾಗಲಾರದು. ಶಬ್ದ ಸಂಪತ್ತು ಬೆಳೆಯಲಾರದು. ಕಾವ್ಯವೆಂದರೆ ಬರೀ ಒಂದಿಷ್ಟು ಅಕ್ಷರ- ಶಬ್ದಗಳ ಬರಡು ಭೂಮಿಯಲ್ಲ. ನಮ್ಮ ಕಾವ್ಯ ಹೊಸದೇನನ್ನಾದರೂ ಹೇಳಬೇಕಲ್ಲವೆ. ನಮ್ಮ ಕಲ್ಪನಾಶಕ್ತಿ ಬೆಳೆಯಬೇಡವೆ. ಹೇಳುತ್ತಾರಲ್ಲ ನಾವು ಎಷ್ಟು ಹೆಚ್ಚು ಹೆಚ್ಚು ಓದುತ್ತ ಹೋಗುತ್ತೇವೆಯೋ ಅಷ್ಟು ನಮ್ಮ ಅಜ್ಞಾನ ನಮಗೆ ಹೆಚ್ಚು ಗೊತ್ತಾಗುತ್ತ‌ಹೋಗುತ್ತದೆ. ಆದರೆ ನಾವು ಎಂತಹ ಪುಸ್ತಕಗಳನ್ನು ಓದಬೇಕು ಎನ್ನುವದೂ ಅಷ್ಟೇ ಮಹತ್ವದ್ದು.

ಎಲ್ಲಕ್ಕಿಂತ ಮುಖ್ಯವಾದದ್ದು ” ವ್ಯುತ್ಪತ್ತಿ ” ಅಂದರೆ ಅನೇಕ ವಿಷಯಗಳ ಪರಿಜ್ಞಾನ. ಅಭ್ಯಾಸವಿಲ್ಲದೆ ಅದುಹೇಗೆ ವಿಷಯ ಜ್ಞಾನ ಹೆಚ್ಚಲು ಸಾಧ್ಯ? ಕವಿಗೆ ಲೋಕಜ್ಞಾನವೇ ಕಾವ್ಯದ ಮೂಲಸಾಮಗ್ರಿ.

- Advertisement -

” ಪ್ರಜ್ಞಾ ನವನವೋಲ್ಲೇಖಶಾಲಿನೀ” ಪ್ರತಿಕ್ಷಣದಲ್ಲೂ ಕವಿ ಹೊಸತನ ಪಡೆಯುತ್ತಿರಬೇಕು. ಕಾವ್ಯದಲ್ಲಿರುವ ಬದಲಾವಣೆಗಳನ್ನು ಗುರುತಿಸಿ ತನ್ನ ಕಾವ್ಯದಲ್ಲೂ ಆ ಹೊಸತನವನ್ನು ಅಳವಡಿಸಿಕೊಳ್ಳುವವನು ಮಾತ್ರ ಕಾವ್ಯಲೋಕದಲ್ಲಿ ಪ್ರಸ್ತುತನಾಗಿರುತ್ತಾನೆ. ಆ ಬದಲಾವಣೆಗಳನ್ನು ಗಮನಿಸದೇ‌ ೫೦ ವರ್ಷಗಳ ಹಿಂದಿನಂತೆಯೇ ಬರೆಯುತ್ತ ಕುಳಿತರೆ ಇತಿಹಾಸದ ಕಾಲಕೋಶದಲ್ಲಿ ಸೇರಿಹೋಗುತ್ತೇವೆ.

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group