ಮಕ್ಕಳಿಗೆ ಪೌಷ್ಠಿಕಾಂಶಕ್ಕಾಗಿ ಮೊಟ್ಟೆ, ಬಾಳೆಹಣ್ಣು ವಿತರಣೆ

Must Read

ಸಿಂದಗಿ; ಸರಕಾರಿ ಮತ್ತು ಅನುದಾನಿತ 1 ರಿಂದ 8  ತರಗತಿಯ  ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ರಕ್ತಹೀನತೆ ಹಾಗೂ ಪೋಷಕಾಂಶಗಳ ನ್ಯೂನತೆಯನ್ನು ಹೋಗಲಾಡಿಸಲು  ಸರಕಾರ  ಅಧ್ಯಯನಮಾಡಿ   2021-22  ನೇ ಸಾಲಿನಲ್ಲಿ  ಮಧ್ಯಾಹ್ನ ಉಪಾಹಾರ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಯನ್ನು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.

ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಆರೋಗ್ಯ ವೃದ್ಧಿಯಾಗಿ ಕಲಿಕೆಯಲ್ಲಿ ಕ್ರಿಯಾಶೀಲರಾಗಿ ಆಸಕ್ತಿಯಿಂದ  ಭಾಗವಹಿಸಲು ಅನುಕೂಲವಾದ ಕಾರಣ ಶಿಕ್ಷಕರು ಎಸ್ ಡಿಎಂಸಿ ಯವರು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಕ್ಕಳ ದೈಹಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಕಾರ್ಯೋನ್ಮುಖವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ   ಪಿ.ಆರ್ .  ಓಲೇಕರ್, ಬಿ.ಎಸ್.ಟಕ್ಕಳಕಿ, ಸದರಿ ಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಆಲಮೇಲ, ಎಸ್ ಡಿಎಂಸಿ ಸದಸ್ಯರಾದ ಬೀರಪ್ಪ ಪೂಜಾರಿ, ಮಲ್ಲಪ್ಪ ಪ್ಯಾರಸಾಬಾದಿ,  ಶಿಕ್ಷಕರಾದ ಎಫ್.ಆರ್.ಕಾಚೂರ, ಟಿ.ಡಿ. ಬೋಸ್ಲೆ, ಎ.ಎಸ್.ಅತ್ತಾರ, ಡಿ.ಎಂ.ಜೇವರ್ಗಿ  ಹಾಗೂ ಅಡುಗೆ ಸಿಬ್ಬಂದಿ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group