ಕನ್ನೋಳ್ಳಿ ಸರಕಾರಿ ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

Must Read

ಸಿಂದಗಿ: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಾಲೂಕಿನ ಕನ್ನೋಳ್ಳಿ ಗ್ರಾಮದ ಸರಕಾರಿ ಹಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ನೀಡದೆ ಇರುವುದಕ್ಕೆ ಬದಲಾಗಿ ವಿದ್ಯಾರ್ಥಿಗಳ ಪಾಲಕರಿಗೆ ಬಿಸಿ ಊಟದ

ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ದೇವಣಗಾಂವಿ ಮಾತನಾಡಿ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರು ಅವರಿಗೆ ಕರೆ ಮಾಡಿ ನಿಗದಿತ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಿಸಬೇಕು. ಆಹಾರ ಧಾನ್ಯ ಪಡೆಯಲು ಬಂದಿರುವ ಪಾಲಕರ ಕೈಗೆ ಸೈನೆಟಜರ್ ಮಾಡಿ ಪಾಲಕರಿಗೆ ಮುಖಕ್ಕೆ ಮಾಸ್ಕ ಧರಿಸುವಂತೆ ಶಿಕ್ಷಕರು ವಿನಂತಿ ಮಾಡಿ ಅವರು ಆಹಾರ ಧಾನ್ಯ ಪಡೆಯುವಾಗ ಸಾಮಾಜಿಕ ಅಂತರ ಕಾಪಾಡಿ ಪಾಲಕರು ಸರತಿ ಸಾಲಿನಲ್ಲಿ ನಿಂತು ಕೊಂಡು ತಮ್ಮ ಮಕ್ಕಳ ಆಹಾರ ಧಾನ್ಯ ಸ್ವಿಕರಿಸಬೇಕು ಎಂದು ಸಲಹೆ ನೀಡಿ ಅವರು ಪಾಲಕರಿಗೆ ಬಿಸಿ ಊಟದ ಆಹಾರ ಧಾನ್ಯ ವಿತರಿಸಿದರು.

ಶಾಲೆಯ ಗುರುಮಾತೆ ಶ್ರೀಮತಿ ಎಸ್ ಎಚ್ ನಾಯಕ್ , ಶಿಕ್ಷಕಿ ಶ್ರೀಮತಿ ಸವಿತಾ ಬಸವರಾಜ ಕೆಂಭಾವಿ ( ಶಿರವಳಕರ್ ) ಶಿಕ್ಷಕಿ ಶ್ರೀಮತಿ ಎಸ್ ಎಂ ತಾಳಿಕೋಟಿ . ಶ್ರೀ ಜಿ ಬಿ ಲಮಾಣಿ. ಶ್ರೀ ಎಸ್ ಎಂ ಐಗಳಿ . ಎ.ಎಂ. ಮುಲ್ಲಾ ಹಾಗೂ ಬಿಸಿ ಊಟದ ಸಿಬ್ಬಂದಿ ಮತ್ತು
ಪಾಲಕರು ಭಾಗವಹಿಸಿದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group