- Advertisement -
ಮೂಡಲಗಿ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಮಹಾಸಭಾದ 14ನೇ ವರ್ಷಾಚರಣೆಯ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಮೂಡಲಗಿ ತಾಲೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯಿಂದ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿ ಸಂಸ್ಥಾಪನಾ ದಿನ ಆಚರಿಸಿದರು.
ಈ ಸಮಯದಲ್ಲಿ ಮೂಡಲಗಿ ತಾಲೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಮತ್ತು ಸಮಿತಿ ಸದಸ್ಯರಾದ ಅಜ್ಜಪ್ಪ ಬಳಿಗಾರ, ಸಂಗಮೇಶ ಕೌಜಲಗಿ, ಸದಾಶಿವ ನಿಡಗುಂದಿ, ಮಲ್ಲು ಗೋಡಿಗೌಡರ, ಸುಭಾಸ ಕಡಾಡಿ ಮತ್ತು ಆರೋಗ್ಯ ಕೇಂದ್ರ ಹಿರಿಯ ವೈದ್ಯಾಧಿಕಾರಿ ಡಾ: ಭಾರತಿ ಕೋಣಿ, ಚೇತನ ನಿಶಾನಿಮಠ, ಇರಶಾದ ಪಿರಜಾದೆ ಇದ್ದರು.