ಪ್ರಗತಿ ಸಂಸ್ಥೆ ಬಳಗದಿಂದ ವಿದ್ಯಾರ್ಥಿಗಳಿಗೆ ಕಾಣಿಕೆ ವಿತರಣೆ

Must Read

ಸಿಂದಗಿ: ಜೀವನದಲ್ಲಿ ಹೊಸತನವನ್ನು ರೂಡಿಸಿಕೊಂಡು ಶಾಲೆಯ ತರಗತಿ ಕೋಣೆಯಲ್ಲಿ ಗುರು ಬೋಧಿಸಿರುವ ವಿಷಯಗಳೊಂದಿಗೆ ಹೊರಗಿನ ಜ್ಞಾನವು ಓದುವ ಅಭಿರುಚಿ ಬೆಳೆಸಿ ಕೊಳ್ಳಬೇಕು ಎಂದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ಸಾಲಿಮಠ ಹೇಳಿದರು.

ಶನಿವಾರದಂದು ಹೊಸ ವರ್ಷ ಆಚರಣೆಯ ಪ್ರಯುಕ್ತ ಓತಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ರಸ ಪ್ರಶ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶಾಲೆಯಲ್ಲಿ ನಡೆಯುವ 1 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯ ತರಗತಿ ಕೋಣೆಯಲ್ಲಿ ಕಲಿತ ವಿಷಯವಾರಗಳ ಮೇಲೆ ಪ್ರಶ್ನೋತ್ತರ ತಯಾರಿಸಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಕೇಳುವದಕ್ಕಿಂತ ರಸ ಪ್ರಶ್ನೆ ತಯಾರಿಸಿ ವಿದ್ಯಾರ್ಥಿಗಳಿಗೆ ಕೇಳುವದರಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆಯಾಗುತ್ತದೆ ಎಂದರು.

ರಸ ಪ್ರಶ್ನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು “ಪ್ರಗತಿ ” ಸಂಸ್ಥೆಯಿಂದ ನೀಡಿ ವಿದ್ಯಾರ್ಥಿಗಳಿಗೆ ಗೌರವಿಸುವದು ಉತ್ತಮ ಕೆಲಸ ಎಂದರು.

ಸುಂದರ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಮಠದ ಪೀಠದ ಒಡೆಯ ಪೂಜ್ಯ ಶ್ರೀ ಬಸವ ಮಹಾಂತಸ್ವಾಮಿಗಳು ವಹಿಸಿದರು.

ಗ್ರಾಮದ ಸರಕಾರಿ ಫ್ರೌಡಶಾಲೆಯ ಮುಖ್ಯಗುರು ದೊಡ್ಡಮನಿ ಸರ್ ಹಾಗೂ ಶಿಕ್ಷಕರಾದ ಗೊಂದಳಿ ಗುರುಗಳು ಮತ್ತು ಗ್ರಾಮದ ಶಿಕ್ಷಣ ಪ್ರೇಮಿಗಳಾದ ಬಾಬು ನಾಟೀಕಾರ ಬಲರಾಮ ಮಣೂರು ಭಾಗಿವಹಿಸಿದರು.

ಮುದ್ದು ವಿದ್ಯಾರ್ಥಿಗಳ ಕುರಿತು ಗಣ್ಯರು ಮಾತನಾಡಿ ಈ ಸುಂದರ ಕಾರ್ಯಕ್ರಮ ನಡೆಸಿಕೊಟ್ಟ ಶಾಲೆಯ ಎಲ್ಲ ಶಿಕ್ಷಕರಿಗೂ ಎಲ್ಲ ಗ್ರಾಮಸ್ಥರ ಪರವಾಗಿ ಪ್ರೀತಿಯಿಂದ ಅಭಿನಂದಿಸಿದರು.

ಶಾಲಾ ಮುಖ್ಯ ಶಿಕ್ಷಕ ಯಲ್ಲಪ್ಪ ಸಿ ಬೂದಿಹಾಳ.ಶಿಕ್ಷಕ ಜಿ ಎನ್ ನಡಕೂರ.ದೈಹಿಕ ಶಿಕ್ಷಕ ಎಸ್ ಎಸ್ ಡಂಬಳ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group