ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು .
ಇಲ್ಲಿನ ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಜರುಗಿದ ಕಾಯ೯ಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರರಾದ ಶಿವಾನಂದ ಬಬಲಿ ವಹಿಸಿದ್ದರು ಹಾಗೂ ಗ್ರಾಮ ವಾಸ್ತವ್ಯ ಕಾಯ೯ಕ್ರಮದ ಸದುಪಯೋಗ ಪಡೆದುಕೊಳ್ಳಲು ಸಾವ೯ಜನಿಕರಿಗೆ ಕರೆ ನೀಡಿದರು.
ಕಾಯ೯ಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಲಕ್ಕವ್ವ ದೊಡ್ಡಶಿವಪ್ಪಗೋಳ ಹಾಗೂ ಉಪಾಧ್ಯಕ್ಷೆ ಶ್ರೀಮತಿ ಮಲ್ಲವ್ವ ಮಾದರ ಅವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿ, ತಾಪಂ ಕಾನಿ ಅಧಿಕಾರಿ ಎಫ್ ಜಿ ಚಿನ್ನನ್ನವರ, ಸಿಡಿಪಿಓ ಯಲ್ಲಪ್ಪ ಗದಾಡಿ, ಹೆಸ್ಕಾಂ ಇಲಾಖೆಯ ಪಿಡಾಯಿ, ಕೃಷಿ ಇಲಾಖೆಯವರು ಅರೋಗ್ಯ ಇಲಾಖೆಯವರು ತಮ್ಮ ತಮ್ಮ ಇಲಾಖೆಯ ಸರಕಾರಿ ಸೌಲಭ್ಯಗಳನ್ನು ವಿವರಿಸಿದರು.
ಈ ಕಾಯ೯ಕ್ರಮದಲ್ಲಿ ಹಲವಾರು ವಿಷಯಗಳ ಕುರಿತು ಚಚಿ೯ಸಲಾಯಿತು. ಹಾಗೂ ಸ್ಥಳದಲ್ಲಿಯೇ ವಿಷಯಗಳನ್ನು ಇತ್ಯಥ೯ ಪಡಿಸಲಾಯಿತು.
ಆರೋಗ್ಯ ಇಲಾಖೆಯ ಜಾಗೃತಿ ಮೂಡಿಸುವ ರೂಪಕ ವಿಶೇಷವಾಗಿತ್ತು. 150 ಕ್ಕೂ ಹೆಚ್ಚು ಜನರಿಗೆ ಬಿಪಿ ಶುಗರ ತಪಾಸಣೆಯನ್ನು ಮಾಡಲಾಯಿತು. ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಊರಿನ ಗಣ್ಯರಾದ ಬಬ್ರುವಾಹನ ಬಂಡ್ರೋಳಿ, ಗುರುನಾಥ ಗಂಗನ್ನವರ, ಬಾಬು ಬಂಡ್ರೋಳಿ, ರಾಮಪ್ಪ ಅರಭಾವಿ, ಲಕ್ಷ್ಮಣ ಬಂಡ್ರೋಳಿ, ಜಗದೀಶ, ಸಿದ್ಧಲಿಂಗಪ್ಪ ಕಂಬಳಿ, ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ತಾಲೂಕಿನ ಇತರೇ ಇಲಾಖೆಗಳ ಅಧಿಕಾರಿಗಳು ಹಾಜರಿದ್ದ ಕಾಯ೯ಕ್ರಮವು ವಿಧ್ಯಾರ್ಥಿಗಳ ಪ್ರಾಥ೯ನೆಯೊಂದಿಗೆ ಪ್ರಾರಂಭವಾಯಿತು. ತಾಲೂಕು ಕಛೇರಿಯ ಶಿರಸ್ತೇದಾರ ಪರಸಪ್ಪಾ ನಾಯಿಕ ಅವರು ಪ್ರಾಸಾವಿಕವಾಗಿ ಮಾತನಾಡಿದರು. ಮಹೇಶ ಗುರುಗಳು ನಿರೂಪಿಸಿದರು.