ಸೆಪ್ಟೆಂಬರ್ ಒಂದರ ರವಿವಾರ ತೀರ್ಥಹಳ್ಳಿಯಲ್ಲಿ ಕಾವ್ಯ ಸಿಂಧು ಕವಿ ಸಮ್ಮೇಳನವು ಅಖಿಲಭಾರತೀಯ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಸಮಿತಿಯ ಆಶ್ರಯದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸ್ಥಳೀಯ ಅಧ್ಯಕ್ಷರುಗಳಾದ ರಾಮಚಂದ್ರ ಹಾಗೂ ಅಣ್ಣಪ್ಪ ಅರಬರಕಟ್ಟೆಯಯವರ ಸಾರಥ್ಯದಲ್ಲಿ ಹಿರಿಯ ಪದಾಧಿಕಾರಿಗಳ ಸಹಿತ ನಡೆದ ಈ ಸಮ್ಮೇಳನದಲ್ಲಿ ಪ್ರಮುಖ ಉಪನ್ಯಾಸಗಳ ಸಹಿತ ನಡೆದ ಪೂರ್ವ ಸಂಪಾದಿತ ಕವನಗಳನ್ನು ವಾಚಿಸಿ ಅರ್ಹರನ್ನು ಗೌರವಿಸಲಾಯಿತು.
ಮೊದಲೇ ವಿಷಯ ಕೊಟ್ಟು ಆಹ್ವಾನಿಸಿದ್ದ ಈ ಸ್ಪರ್ಧೆಗೆ ಇನ್ನೂರೈವತ್ತು ಮೀರಿದ ಕವನಗಳು ಬಂದಿದ್ದು ಅದರಲ್ಲಿ ಎಪ್ಪತ್ತೇಳು ಕವನಗಳನ್ನು ಆರಿಸಿ ಸೂಕ್ತ ತೀರ್ಪುಗಾರರನ್ನಿರಿಸಿ ನಡೆಸಿದ ಸ್ಪರ್ಧೆಗೆ ಅರುವತ್ತ ಮೂರು ಮಂದಿ ಭಾಗವಹಿಸಿದ್ದು ಅವುಗಳಲ್ಲಿ ಉತ್ತಮವಾದ ಹದಿಮೂರು ಮಂದಿಯನ್ನು ಆರಿಸಲಾಯಿತು.
ಹತ್ತು ,ಐದು,ಮೂರು,ಮತ್ತು ತಲಾ ಒಂದು ಸಾವಿರ ರೂಗಳ ಬಹುಮಾನಗಳನ್ನು ಕ್ರಮವಾಗಿ ಘೋಷಿಸಲಾಗಿದ್ದು ಅವುಗಳನ್ನು ಅರ್ಚನಾ ಹೆಬ್ಬಾರ, ಅನ್ನಪೂರ್ಣ ಬೆಜಪೆ, ಪದ್ಯಾಣ ಗೋವಿಂದ ಭಟ್,ಪೂರ್ಣಿಮಾ ಟಿ.ಕೆ,ರಾಧಿಕಾ ವಿಶ್ವನಾಥ್,ಸೌಮ್ಯ ಗುರು ಕಾರ್ಲೆ,ಉಮಾಶಂಕರಿ ಎ.ಪಿ.,ಮಹೇಶ್ ರಾವ್,ಡಾ ಸುರೇಶ ನೆಗಳಗುಳಿ,ಚಿನ್ಮಯ ಕಶ್ಯಪ ಕಳವೆ, ದೀಪಕ್ ಎನ್ ಸಿ,ಗಣಪತಿ ರಾ ಹಾಗೂ ಮಂಜುನಾಥ ಮರವಂತೆಯವರು ಕ್ರಮವಾಗಿ ಈ ಮೊದಲ ಹದಿಮೂರು ಸ್ಥಾನಗಳನ್ನು ಪಡೆದರು.
ಇದರಲ್ಲಿ ದ್ವಿತೀಯ, ತೃತೀಯ, ಒಂಭತ್ತು ಮತ್ತು ಹದಿಮೂರನೇಯ ಸ್ಥಾನಗಳು ಮೂಲದಕ್ಷಿಣ ಕನ್ನಡದವರ ಪಾಲಾಗಿರುವುದು ಇಲ್ಲಿ ಗಮನಾರ್ಹ.
ದಕ್ಷಿಣ ಕನ್ನಡದಿಂದ ಅಭಾಸಾಪ ಸಮಿತಿಯ ಪ್ರಮುಖರಾದ ಸುಂದರ ಶೆಟ್ಟಿ, ಡಾ ಮೀನಾಕ್ಷಿ ರಾಮಚಂದ್ರ ಸಹಿತ ರಾಜ್ಯದ ಸುಮಾರು ಐದುನೂರು ಮಂದಿ ಈ ಸಮ್ಮೇಳನದಲ್ಲಿ ಸಕ್ರಿಯರಾಗಿದ್ದರು
ವರದಿ : ಡಾ ಸುರೇಶ ನೆಗಳಗುಳಿ
ಮಂಗಳೂರು