spot_img
spot_img

ಪಕ್ಷ ತಾಯಿಯಿದ್ದಂತೆ, ಪಕ್ಷಕ್ಕೆ ದ್ರೋಹ ಮಾಡಬಾರದು – ಯಶವಂತರಾಯಗೌಡ

Must Read

spot_img
- Advertisement -

ಸಿಂದಗಿ: ಪಕ್ಷ ಮಾತೃಹೃದಯಿ ತಾಯಿದಂತೆ. ಪಕ್ಷದಲ್ಲಿ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಬಗೆಯುವುದು ತಾಯಿಗೆ ಮೋಸ ಮಾಡಿದಂತೆ. ಪಕ್ಷದಲ್ಲಿದ್ದುಕೊಂಡು ಪಕ್ಷದ ಪರವಾಗಿ ಕಾರ್ಯ ಮಾಡದ ವ್ಯಕ್ತಿಗಳಿಗೆ ಜನ ಮುಂದೊಂದು ದಿನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು,

ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಆಡಳಿತಾರೂಢ ಸರಕಾರ ಇರುವುದರಿಂದ ಜನರು ಆ ಪಕ್ಷಕ್ಕೆ ಮಣೆ ಹಾಕಿರಬಹುದು ಆದರೆ ನಿಷ್ಠಾವಂತ ಕಾರ್ಯಕರ್ತರು ಯಾವತ್ತು ದಾರಿ ತಪ್ಪುವವರಲ್ಲ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಾಯಣ, ಈಶ್ವರ ಖಂಡ್ರೆ ಮಾತನಾಡಿ, ರಾಜಕಾರಣ ನಿಂತ ನೀರಲ್ಲ, ಇಲ್ಲಿ ಸೋಲು-ಗೆಲುವು ಒಂದೆಯಾಗಿ ಸ್ವೀಕರಿಸಬೇಕು. ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಹತಾಶರಾಗುವುದು ಬೇಡ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗೆಲುವಿಗಾಗಿ ಶ್ರಮಪಡಬೇಕು. ಸಿಎಂ ಬೊಮ್ಮಾಯಿ ಅವರು ಉಪ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಹಣದ ಹೊಳೆ ಹರಿಸಿದ್ದಾರೆ ಈಗ ಅವರ ಸ್ಥಾನಕ್ಕೂ ಈ ಕುತ್ತು ಬರುತ್ತಿರುವ ಮುನ್ಸೂಚನೆಗಳು ಕಂಡು ಬರುತ್ತಿವೆ. ಕಾದು ನೋಡಬೇಕು ಅಷ್ಟೇ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ದ ಎಂದ ಅವರು, ಉಪ ಚುನಾವಣೆಯಲ್ಲಿ ಪಕ್ಷ ದ್ರೋಹ ಮಾಡಿದವರ ವಿರುದ್ಧ ತಕ್ಕ ಉತ್ತರ ಸಿಗಲಿದೆ. ಮತ ನೀಡಿದ ಎಲ್ಲ ಮತ ಬಾಂಧವರಿಗೆ ಕೃತಜ್ಞತೆ ಎಂದರು.

- Advertisement -

ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್‍ದಲ್ಲಿ ನಾನೊಬ್ಬ ಹೊಸ ಅಭ್ಯರ್ಥಿ ನನನ್ನು ಗೆಲ್ಲಿಸಿ ವಿಧಾನಸೌಧಾಕ್ಕೆ ಕಳಿಸಬೇಕು ಎಂದು ರಾಜ್ಯ, ಕೇಂದ್ರ, ಜಿಲ್ಲೆಯ ನಾಯಕರು, ಈ ಕ್ಷೇತ್ರದ ಮುಖಂಡರು ಕಾರ್ಯಕರ್ತರ ಅಭಿಲಾಷೆಯಾಗಿತ್ತು ಆದರೆ ಆಡಳಿತ ಬಿಜೆಪಿ ಸರಕಾರ ಹಣದ ಹೊಳೆ ಹರಿಸಿ ಮತದಾರರಲ್ಲಿ ಗೊಂದಲ ಸೃಷ್ಠಿಸಿ ಕುತಂತ್ರದಿಂದ ಗೆದ್ದಿದೆ ವಿನಃ ಮತದಾರರಿಂದ ಗೆದ್ದಿಲ್ಲ. ನನ್ನ ಗೆಲುವಿನಲ್ಲಿ ಪಾಲ್ಗೊಳಬೇಕು ಎನ್ನುವ ಕನಸ್ಸು ಕಂಡ ಮತದಾರರು ನನಗೆ ಆಶಿರ್ವಾದ ನೀಡಿದ್ದಾರೆ ಆ ಋಣ ಎಂದು ಮರೆಯುವುದಿಲ್ಲ ನಾನು ಚುನಾವಣೆಯಲ್ಲಿ ಸೋತಿರಬಹುದು ಆದರೆ ನಿಮ್ಮ ಮನದಿಂದ ದೂರ ಇರುವುದಿಲ್ಲ ನಿಮ್ಮ ಸೇವಕನಾಗಿ ಕಾರ್ಯನಿರ್ವಹಿಸುತ್ತೇನೆ ನನ್ನ ಶ್ರಮಕ್ಕೆ ಕೂಲಿ ನೀಡಿದ ಎಲ್ಲ ಮತದಾರ ಪ್ರಭುಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಮಲ್ಲಣ್ಣ ಸಾಲಿ ಮಾತನಾಡಿ, ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಿಜೆಪಿ ಸೋಲಿಸಿಲ್ಲ. ಸೋಲಿಗೆ ಕಾಂಗ್ರೆಸ್‍ನ ಕೆಲವು ನಾಯಕರೇ ಕಾರಣ. ಕಾಂಗ್ರೆಸ್‍ದಿಂದಲೇ ಕಾಂಗ್ರೆಸ್‍ಗೆ ಸೋಲಾಗಿದೆ ಎಂದು ನೋವು ತೊಡಿಕೊಂಡರು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ರವಿಂದ್ರಸಿಂಗ್, ಶಿವಾನಂದ ಪಾಟೀಲ, ಜೆವರ್ಗಿ ಶಾಸಕ ಅಜಯಸಿಂಗ್, ಸುನೀಲಗೌಡ ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ, ಎಸ್.ಎಂ.ಪಾಟೀಲ ಗಣಿಹಾರ, ಯಾಕೂಬ ನಾಟಿಕಾರ ಸೇರಿದಂತೆ ಇತರರು ಮಾತನಾಡಿ ಮತದಾರರಿಗೆ ಆಭಿನಂದನೆ ಸಲ್ಲಿಸಿದರು.

- Advertisement -

ಬೀದರ ಶಾಸಕ ರಹೀಮ ಖಾನ, ಜಿಲ್ಲಾಧ್ಯಕ್ಷ ರಾಜು ಆಲಗೂರ, ಶಾಕೀರ ಸನದಿ, ಬ್ಲಾಕ್ ಅದ್ಯಕ್ಷ ವಿಠ್ಠಲ ಕೋಳೂರ, ಅಯೂಬ ದೇವರಮನಿ, ಎಮ್.ಆರ್,ತಾಂಬೋಳಿ, ಮುಸ್ತಾಕ ಮುಲ್ಲಾ, ಮಹಾಂತಗೌಡ ಪಾಟೀಲ, ನರಸಿಂಗಪ್ರಸಾದ ತಿವಾರಿ, ಚಂದ್ರಕಾಂತ ಸಿಂಗೆ, ಪರುಶುರಾಮ ಕಾಂಬಳೆ, ವಾಯ್.ಸಿ.ಮಯೂರ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು ನೀನೆಂದು ಮಾಡದಿರು ಕೆಟ್ಟದೆಂದು ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು ಧರ್ಮಗಳ‌ ತಿರುಳೊಂದೆ - ಎಮ್ಮೆತಮ್ಮ  ಶಬ್ಧಾರ್ಥ ತಿರುಳು = ಸಾರ ತಾತ್ಪರ್ಯ ಧರ್ಮದ ಹತ್ತು‌ ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ. "ಧೃತಿ ಕ್ಷಮಾ...
- Advertisement -

More Articles Like This

- Advertisement -
close
error: Content is protected !!
Join WhatsApp Group