ಮುಸ್ಲಿಮರನ್ನು ಬಲಿ ಕಾ ಬಕ್ರಾ ಮಾಡಬೇಡಿ – ಅಕ್ಬರ ಮುಲ್ಲಾ

Must Read

ಸಿಂದಗಿ: ಬೈ ಇಲೇಕ್ಷನ್‍ದಲ್ಲಿ ಮುಸ್ಲೀಮರನ್ನು ಬಲಿ ಕಾ ಬಕ್ರಾ ಮಾಡದೇ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲೀಮರಿಗೆ ಟಿಕೇಟ್ ನೀಡಲಿ ಎನ್ನುವ ಕೂಗು ಇಡೀ ರಾಜ್ಯದೆಲ್ಲೆಡೆ ಗುಲ್ಲೆದ್ದಿದ್ದು ಅದನ್ನು ಸಾಬೀತುಪಡಿಸಲು ಸಿಂದಗಿ ಕ್ಷೇತ್ರದ ಮೂಲ ಜೆಡಿಎಸ್ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳದೇ ಟಿಕೇಟ್ ಘೋಷಣೆ ಮಾಡುವಲ್ಲಿ ರಾಜ್ಯಾಧ್ಯಕ್ಷರು ಎಡವಿದ್ದಾರೆ. ಇದನ್ನು ಹಿಂಪಡೆಯಬೇಕು ಎಂದು ಮಾಜಿ ತಾಪಂ ಸದಸ್ಯ ಅಕ್ಬರ ಮುಲ್ಲಾ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೂಲ ಜೆಡಿಎಸ್ ಕಾರ್ಯಕರ್ತರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 20 ವರ್ಷಗಳಿಂದ ಪಕ್ಷ ಕಟ್ಟುವಲ್ಲಿ ಶ್ರಮ ಪಟ್ಟಿದ್ದರಿಂದಲೇ ದಿ. ಎಂ.ಸಿ.ಮನಗೂಳಿ ಅವರು ಆಯ್ಕೆಯಾಗಿದ್ದು  ಇಲ್ಲಿ ಭೂತ್ ಮಟ್ಟದಲ್ಲಿ ಸುಮಾರು 70 ಸಾವಿರ ಕಾರ್ಯಕರ್ತರ ಪಡೆಯನ್ನು ಪರಿಗಣಿಸದೇ ದೇವಾನಂದ ಚವ್ಹಾಣ ಅವರ ಮಾತಿಗೆ ಕಟ್ಟು ಬಿದ್ದು  ನಿನ್ನೆ ಮೊನ್ನೆ ಪಕ್ಷಕ್ಕೆ ನಾಟಕ ಕಂಪನಿ ರೂಪದಲ್ಲಿ ದಿಢೀರನೆ ಬಂದ ಶಿವಾನಂದ ಪಾಟೀಲರಿಗೆ ಟಿಕೇಟ್ ಘೋಷಣೆ ಮಾಡಿದ್ದು ಮೂಲ ಕಾರ್ಯಕರ್ತರ ಕಗ್ಗೊಲೆ ಮಾಡಿದಂತಾಗಿದೆ ಜ.17 ರಂದು ಈ ಕ್ಷೇತ್ರಕ್ಕೆ ಆಗಮಿಸುತ್ತಿರುವ ಪಂಚತಂತ್ರ ರಥದಲ್ಲಿ ಶಕ್ತಿ ಪ್ರದರ್ಶನ ನೋಡಿಕೊಂಡು ಟಿಕೇಟ್ ಘೋಷಣೆ ಮಾಡಬೇಕು ಇಲ್ಲದಿದ್ದರೆ ಕುಮಾರಸ್ವಾಮಿ ಅವರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ ಕರ್ನಾಳ, ಪ್ರಕಾಶ ಹಿರೇಕುರಬರ, ಅಬ್ದುಲಗಫಾರ ಗಣಿಹಾರ, ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ, ಶರಣಗೌಡ ಪಾಟೀಲ, ಶರಣಪ್ಪ ಸುಲ್ಫಿ  ಮಾತನಾಡಿ, ಜಿಲ್ಲೆಯಲ್ಲಿ ಮೂಲ ಕಾರ್ಯಕರ್ತರ ಪಡೆಯೇ ಈ ಕ್ಷೇತ್ರದಲ್ಲಿದೆ. ಆರ್.ಎಸ್‍ಎಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡ ಶಿವಾನಂದ ಪಾಟೀಲರಿಗೆ ಟಿಕೇಟ್ ಘೋಷಣೆ ಮಾಡಿದ್ದು ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಕಾರಣ  ವರಿಷ್ಠರು ಸೂಕ್ತವಾಗಿ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group