ಸಿಂದಗಿ– ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಸುಧಾ ಸುಣಗಾರ ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಅವರು ಡಾ. ಬಸವರಾಜ ಲಕ್ಕಣ್ಣವರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಎ ಸ್ಟಡಿ ಆಫ್ ರಿಜನಿಂಗ್ ಎಬಿಲಿಟಿ ಯ್ಯಂಡ್ ಲಾಜಿಕಲ್ ಥಿಂಕಿಂಗ್ ಟು ವರ್ಡ ಮೆಥಮೇಟಿಕ್ಸ್ ಆಫ್ ಅಕ್ಯಾಡಮಿ ಫರಫಾರನ್ಸ್ ಆಫ್ ಸೆಕೆಂಡರಿ ಸ್ಕೂಲ್ ಸ್ಟುಡೆಂಟ್ ಎಂಬ ಮಹಾಪ್ರಭಂದಕ್ಕೆ ಪದವಿ ಲಭಿಸಿದೆ.
ಅವರಿಗೆ ಸಂಸ್ಥೆಯ ಅಧ್ಯಕ್ಷ ಅಶೋಕ ಮನಗೂಳಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂಧನೆ ಸಲ್ಲಿಸಿದ್ದಾರೆ.