ಹುನಗುಂದ: ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ.
ಡಾ. ಎಂ ಮಲ್ಲಿಕಾರ್ಜುನ ಗೌಡ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಥಾಸಾಹಿತ್ಯ ಕುರಿತ ವಿಮರ್ಶೆಗಳ ತಾತ್ವಿಕ ಅಧ್ಯಯನ’ ಮಹಾಪ್ರಬಂಧವನ್ನು ಮಂಡಿಸಿರುವ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ದಿನಾಂಕ 29-01-2026ರಂದು ಮೌಖಿಕ ಪರೀಕ್ಷೆ ನಡೆಸಿ ಪಿಎಚ್.ಡಿ. ಪದವಿ ನೀಡಲಾಯಿತು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು ಡಾ. ವೆಂಕಟಗಿರಿ ದಳವಾಯಿ, ಭಾಷಾ ನಿಖಾಯ ಡೀನ್ ಆದ ಡಾ. ಮಾಧವ ಪೆರಾಜೆ, ಮೌಲ್ಯಮಾಪಕರಾದ ಧನಂಜಯ ಕುಂಬ್ಳೆ, ಆಂತರಿಕ ವಿಷಯ ತಜ್ಞರಾದ ಸಿ. ವೆಂಕಟೇಶ್ ಅವರ ಸಮ್ಮುಖದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗಿಡ್ಡನಾಯಕನಾಳ ಗ್ರಾಮದ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪಿಎಚ್. ಡಿ ಪದವಿ ಘೋಷಣೆ ಮಾಡಿದ್ದಕ್ಕೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ವೆಂಕಟಗಿರಿ ದಳವಾಯಿ, ಮಾರ್ಗದರ್ಶಕರು ವಿಶ್ವವಿದ್ಯಾಲಯದ ಸಂಶೋಧರು, ಹಿತೈಷಿಗಳು, ಸ್ನೇಹಿತರು ಹಾಗೂ ಕುಟುಂಬ ವರ್ಗ, ಸಂಬಂಧಿಗಳು ಅಭಿನಂದಿಸಿದ್ದಾರೆ.

