ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

Must Read

ಸಂಘದ ವಾರ್ಷಿಕೋತ್ಸವ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಬೆಳಗಾವಿ – ಶುಕ್ರವಾರ ದಿನಾಂಕ ಒಂದರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಜ್ಯೋತಿ ಬದಾಮಿ, ದಿ. ರಾಚಮ್ಮ ಪಾಟೀಲ, ದಿ. ಮಲ್ಲಪ್ಪ ತಿರ್ಲಾಪುರ , ದಿ. ಶಿವನಾಗಪ್ಪ ಅಬ್ಬಿಗೇರಿ, ದಿ. ಸೂರ್ಯಕಾಂತ ಅಬ್ಬಿಗೇರಿ, ದಿ. ಮಹಾದೇವಪ್ಪ ನಿಡುವಣಿ, ದಿ. ರಾಮನಗೌಡ ಪಾಟೀಲ ಮತ್ತು ಮಾತೋಶ್ರೀ ಪಾರ್ವತಿದೇವಿ ಮೊಗಲಿ ರವರ ಹೆಸರಿನಲ್ಲಿ ವಿವಿಧ ದಾನಿಗಳು ಇಟ್ಟಿರುವ ದತ್ತಿನಿಧಿ ಯಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ.

ಅಲ್ಲದೆ ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ರಂಜನಾ ನಾಯಿಕ, ಡಾ. ಶೋಭಾ ನಾಯಕ, ಡಾ. ಸರಜೂ ಕಾಟಕರ, ರೇಣುಕಾ ಜಾಧವ, ರಾಜನಂದಾ ಘಾರ್ಗಿ, ಪಾರ್ವತಿ ಪಿಟಗಿ ರವರಿಗೆ ‘ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ’ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಆಶಾ ಕಡಪಟ್ಟಿ ವಹಿಸಲಿದ್ದು ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ನೀಲಗಂಗಾ ಚರಂತಿಮಠ, ಡಾ. ಗುರುದೇವಿ ಹುಲೆಪ್ಪನವರ ಮಠ, ದೀಪಿಕಾ ಚಾಟೆ ಆಗಮಿಸಲಿದ್ದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೊಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಲೇಖಕಿಯರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ನೂತನ ಅಧ್ಯಕ್ಷರಾಗಿ ಜಯಶೀಲಾ ಬ್ಯಾಕೋಡ ರವರ ಪದಗ್ರಹಣ ಸಮಾರಂಭ ಮತ್ತು ಪುಷ್ಕಲಾ ನೃತ್ಯ ತಂಡ ದವರಿಂದ ನೃತ್ಯ ಕಾರ್ಯಕ್ರಮ ನಡೆಯಲಿವೆ. ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕಿಯರು ಮತ್ತು ಕನ್ನಡ ಅಭಿಮಾನಿಗಳು ಪಾಲ್ಗೊಳ್ಳುವರು ಎಂದು ಸಂಘದ ಕಾರ್ಯದರ್ಶಿ ರಾಜನಂದಾ ಗಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group