ಹೆದರಬೇಡಿ; ಪೊಲೀಸರು ನಿಮ್ಮೊಂದಿಗಿದ್ದಾರೆ. ಭಯಬಿಟ್ಟು ಮತ ಚಲಾಯಿಸಿ

Must Read

ಫೋಟೋ; ಸಿಂದಗಿಯಲ್ಲಿ ಡಿವೈಎಸ್‌ಪಿ ಶ್ರೀಧರ ದಡ್ಡಿ ಪತ್ರಿಕಾಗೋಷ್ಠಿ ನಡೆಸಿದರು.

ಸಿಂದಗಿ: ಉಪ ಚುನಾವಣೆಯಲ್ಲಿ ೧೦೧ ಗ್ರಾಮಗಳಲ್ಲಿ ಮತದಾರರು ಯಾವುದೇ ಭಯವಿಲ್ಲದೇ ಮತದಾನ ಮಾಡಬೇಕು ಮತ್ತು ಯಾವದೇ ಪಕ್ಷದ ಕಾರ್ಯಕರ್ತನಿಂದ ಹೆದರಿಕೆ ಕರೆಗಳಿದ್ದರೆ ಅಥವಾ ನೇರವಾಗಿ ಹೆದರಿಸುತ್ತಿದ್ದರೆ ೧೧೨ ಕ್ಕೆ ಕರೆ ಮಾಡಿ ರಕ್ಷಣೆ ಪಡೆಯಬಹುದಾಗಿದೆ ಯಾವುದೇ ಆಸೆ ಅಮಿಷಗಳಿಗಾಗಿ ಯಾರಾದರು ಪೀಡಿಸುತ್ತಿದ್ದರೆ ನೇರವಾಗಿ ಠಾಣೆಗೆ ಕರೆ ಮಾಡಬಹುದು ಒಟ್ಟು ೨೯೭ ಭೂತ್ ಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಪೊಲೀಸ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದೆ. ಬಿಗಿ ಬಂದೋಬಸ್ತನೊಂದಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಇಂಡಿ ಡಿವೈಎಸ್‌ಪಿ ಶ್ರೀಧರ ದಡ್ಡಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದನ್ವಯ ಚುನಾವಣೆ ಶಾಂತಿಯುತವಾಗಿ ನಡೆಸಲು ಈ ಕ್ಷೇತ್ರದಲ್ಲಿ ೧ ಡಿಎಸ್‌ಪಿ, ೬ ಸಿಪಿಐ, ೧೨ ಪಿಎಸೈ ೩೫ ಎ.ಎಸ್‌ಐ, ಕೆ.ಎಸ್‌ಆರ್‌ಪಿ ೬ ವ್ಯಾನ, ಡಿಆರ್ ೬ ವ್ಯಾನ್ ಸಿಬ್ಬಂದಿಗಳು ಕ್ಷೇತ್ರದಾದ್ಯಂತ ಕಾರ್ಯಪ್ರವೃತ್ತರಾಗಿದ್ದಾರೆ ಅಲ್ಲದೆ ಪ್ಯಾರಾ ಮಿಲಿಟರಿ ತಂಡ ನಿಯೋಜನೆ ಮಾಡುವ ಸಾಧ್ಯತೆಗಳು ಇವೆ ಒಟ್ಟಾರೆ ಶಾಂತಿಯುತ ಮತದಾನ ನಡೆಯಬೇಕು ಎನ್ನುವ ಉದ್ದೇಶದಿಂದ ಬಿಗಿ ಬಂದೊಬಸ್ತ ಏರ್ಪಡಿಸಲಾಗಿದೆ. ಸಾರ್ವಜನಿಕರು ಭಯ ರಹಿತ ಮತದಾನ ಮಾಡಿ ಎನ್ನುವ ಸಂದೇಶ ರವಾನಿಸಲು ಪೊಲೀಸ ಜಾಗೃತಿ ಮೂಡಿಸಲಾಗಿದೆ ಅಲ್ಲದೆ ಪತ್ರಕರ್ತರು ಕೂಡಾ ಪೊಲೀಸ ಸಿಬ್ಬಂದಿಯವರ ಜೊತೆ ಕ್ಷೇತ್ರದಲ್ಲಿ ಕಾರ್ಯನಿರ್ವಸುತ್ತಿದ್ದೀರಿ ಯಾರಿಂದಲಾದರೂ ಬೆದರಿಕೆ ಕರೆ ಬಂದರೆ ನೇರವಾಗಿ ಕರೆ ಮಾಡಿ ಸೂಕ್ತ ರಕ್ಷಣೆ ನೀಡುವುದಾಗಿ ತಿಳಿಸಿದರು.

ಶಾಂತಿ ಸುವ್ಯವಸ್ಥೆ ಕಾಪಾಡಲು ಅಲ್ಲದೆ ಬೇರೆ ಬೇರೆ ಸ್ಥಳಗಳಿಂದ ಬರುವಂಥ ಅನಧಿಕೃತ ವ್ಯವಹಾರಗಳನ್ನು ತಡೆಗಟ್ಟಲು ಮೋರಟಗಿ, ಕನ್ನೋಳ್ಳಿ, ತಾಂಬಾ, ವಿಭೂತಿ ಹಳ್ಳಿ, ದೇವಣಗಾಂವ ಗೋಲಗೇರಿ, ಹಂದಿಗನೂರ ಸೇರಿದಂತೆ ೭ ಚೆಕ್ ಪೋಸ್ಟಗಳಲ್ಲಿ ಬಿಗಿ ಬಂದೋಬಸ್ತ ನಿರ್ಮಿಸಲಾಗಿದೆ ಎಂದು ಡಿವೈಎಸ್ಪಿ ಹೇಳಿದರು.

ಗೋಷ್ಠಿಗೂ ಮುನ್ನ ಪೊಲೀಸರು ನಿಮ್ಮ ರಕ್ಷಕರು ಎಂಬ ಸಂದೇಶ ನೀಡುವ ಘೋಷ ವಾಕ್ಯದೊಂದಿಗೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೊಲೀಸ ಜಾಗೃತಿ ಜಾಥಾ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ ಎಚ್.ಎಂ.ಪಟೇಲ, ರಾಜಶೇಖರ ಬಡದೇಸಾರ ಇದ್ದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group