ಸಿಂದಗಿ: ಸರ್ವೇ ನಂ, ೮೪೨/೨ರಲ್ಲಿ ೮೪ ಮನೆಗಳು ನೆಲಸಮವಾಗಿವೆ ಇದರಿಂದ ನೊಂದ ಜನರಿಗೆ ಕಣ್ಣೀರು ಒರೆಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮನೆಯ ಯಜಮಾನ ಶಾಸಕ ಅಶೋಕ ಮನಗೂಳಿ ಅವರು ನೋಡಿಕೊಳ್ಳಬೇಕು ಎಂದು ಹೇಳುತ್ತಿರುವ ಮಾಜಿ ಶಾಸಕರು ಅದೇ ಮನೆಗೆ ೧೨ ವರ್ಷ ಶಾಸಕರಿದ್ದಿರಿ ಆವಾಗ್ಗೆ ಈ ಪ್ರಕರಣ ಜೀವಂತ ವಿದ್ದರು ಕೂಡಾ ಈ ಜನರಿಗೆ ನ್ಯಾಯ ಕೊಡಿಸುವಲ್ಲಿ ಚರ್ಚಿಸದೇ ಇಂದು ರಾಜಕೀಯ ಮಾಡುವುದು ಸರಿಯಲ್ಲ ಸುಳ್ಳು ಭರವಸೆ ನೀಡಿ ಜನರನ್ನು ದಾರಿ ತಪ್ಪಿಸದೇ ೮೪ ಕುಟುಂಬಗಳಿಗೆ ಸೂಕ್ತವಾದ ಸೂರು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನವಿರಲಿ ಎಂದು ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ವೇ ನಂ ೮೪೨/೨ ರ ಪೈಕಿ ೨ಎ.೧೦ ಗುಂಟೆ ಜಮೀನಿನ ಮಾಲೀಕನ ಸಂಧಾನ ಮಾಡುವ ನಿಟ್ಟಿನಲ್ಲಿ ವಕೀಲರ ತಂಡವನ್ನು ದೆಹಲಿ ಸುಪ್ರೀಂ ಕೋರ್ಟಿಗೆ ಕಳಿಸಲಾಗಿತ್ತು ಯಾವುದೇ ಪ್ರಯೋಜನ ಕಂಡಿಲ್ಲ. ೨೦೦೫ರಲ್ಲಿ ಕೋರ್ಟು ಮೇಟ್ಟಿಲೇರಿದ್ದರು ಆವಾಗ್ಗೆ ಬಿಜೆಪಿ ಶಾಸಕರಿದ್ದರು ನಂತರ ೨೦೦೮ರಿಂದ ೨೦೧೮ರವರೆಗೆ ಬಿಜೆಪಿ ಶಾಸಕರಿದ್ದರು ಅಲ್ಲದೆ ೨೦೨೧ರ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ೮೪ ನಿರಾಶ್ರಿತರು ಮನವಿ ಮಾಡಿಕೊಂಡಿದ್ದರು ಆಯ್ಕೆಯಾದ ೧೪ ತಿಂಗಳ ಅವಧಿಯಲ್ಲಿ ಈ ವಿಷಯ ಚರ್ಚಿಸಿಲ್ಲವೇಕೆ ಎಂದು ಪ್ರಶ್ನಿಸಿದ ಅವರು ಈ ಪ್ರಕರಣ ನನ್ನ ಗಮನಕ್ಕಿಲ್ಲ ಎಂದು ಜನರಿಗೆ ಮಂಕು ಬೂದಿ ಎರಚುವದನ್ನು ಕೈಬಿಡಿ ಎಂದು ಚಾಟಿ ಬಿಸಿದರು.
ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ಭಾರತದ ಕಟ್ಟಕಡೆಯ ವ್ಯಕ್ತಿಯು ಕೂಡಾ ಸುಪ್ರೀಂಕೋರ್ಟ ಆದೇಶಕ್ಕಿಂತ ದೊಡ್ಡ ವ್ಯಕ್ತಿ ಇನ್ನೊಬ್ಬರಿಲ್ಲ. ಖಾಸಗಿ ವ್ಯಕ್ತಿ ೨೫ ವರ್ಷಗಳಿಂದ ಕೊರ್ಟ ಮೇಟ್ಟಿಲೇರಿ ನ್ಯಾಯ ಪಡೆದುಕೊಳ್ಳಲು ಹರಸಹಾಸ ಪಟ್ಟಿದ್ದಾನೆ ಅದಕ್ಕೆ ನ್ಯಾಯ ಆತನ ಪರವಾಗಿ ತೀರ್ಪು ಸಿಕ್ಕಿದೆ ಅದರ ಆದೇಶ ಅನುಸಾರ ೮೪ ಮನೆಗಳನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ಬಿಜೆಪಿ ಪಕ್ಷದ ಮುಖಂಡರು ಬಡಜನರಿಗೆ ದಾರಿ ತಪ್ಪಿಸಿ ಅವರ ಜೊತೆ ಚಲ್ಲಾಟವಾಡುತ್ತಿದ್ದಾರೆ ಅಂತರಗಂಗಿ ರಸ್ತೆಯಲ್ಲಿರುವ ಸರ್ವೆ ನಂ ೨೪ ರಲ್ಲಿ ೨೨೫ ನಿವೇಶನಗಳಲ್ಲಿ ೮೪ ನಿವೇಶನ ನೀಡುವುದಲ್ಲದೆ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಸರಕಾರದ ವಿಶೇಷ ಅನುದಾನ ತಂದು ಅಭಿವೃದ್ಧಿ ಪಡಿಸಿ ಎಲ್ಲರಿಗೂ ಕಟ್ಟಡಗಳನ್ನು ಕಟ್ಟಿಕೊಡುತ್ತೇವೆ. ತಾತ್ಕಾಲಿಕ ಶೆಡ್ಡ ನಿರ್ಮಾಣಕ್ಕೆ ದಿ.ಎಂ.ಸಿ.ಮನಗೂಳಿ ಪೌಂಡೆಷನ್‌ದಿಂದ ತಲಾ ೨೫ ಸಾವಿರ ನೀಡುತ್ತೇನೆ ಇದಕ್ಕೆ ಸಮ್ಮತಿಯಿಲ್ಲದಿದ್ದರೆ ಬೇರೆಡೆ ೧ ಎಕರೆ ಜಮೀನು ಖರೀದಿಸಿದರೆ ೨೫ರಿಂದ ೩೦ ಲಕ್ಷ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದು ನಿರಾಶ್ರಿತ ಫಲಾನುಭವಿಗಳು ಪ್ರತಿಭಟನೆಯಿಂದ ಹಿಂದೆ ಸರಿದು ಶಾಸಕರ ಮಾತಿಗೆ ಮನ್ನಣೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಶಿವನಗೌಡ ಬಿರಾದಾರ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಎ.ಖತೀಬ, ನಗರ ಯೋಜನಾ ಪ್ರಾದಿಕಾರದ ಸದಸ್ಯ ಅಂಬ್ರೀಶ ಚೌಗಲೆ ಇದ್ದರು.

