ಅಧಿಕಾರದಲ್ಲಿ ಇದ್ದವರು ಜನರಿಗೆ ಸ್ಪಂದಿಸಬೇಕು, ನುಣುಚಿಕೊಳ್ಳಬಾರದು – ರಮೇಶ ಭೂಸನೂರ

Must Read

ಸಿಂದಗಿ: ಸೋಂಪುರ ರಸ್ತೆಯಲ್ಲಿನ ಸರ್ವೇ ನಂ.೮೪೨/೨ ಜಾಗೆಯಲ್ಲಿ ೮೪ ಕುಟುಂಬಗಳು ಬೀದಿ ಪಾಲಾಗಿವೆ ಇದಕ್ಕೆ ಹಾಲಿ ಶಾಸಕರು ಇದು ನನ್ನ ಅವಧಿಯಲ್ಲಿ ಹಕ್ಕು ಪತ್ರ ಹಂಚಿಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಅಂದು ಕಾಂಗ್ರೆಸ್ ಸರಕಾರವಿತ್ತು ಇಂದು ಕೂಡಾ ಅದೇ ಸರಕಾರವಿದೆ ಬಡಕುಟುಂಬಗಳಿಗೆ ಸೂರು ಕಲ್ಪಿಸಿ ಮನೆಗಳನ್ನು ತೆರವುಗೊಳಿಸಬಹುದಾಗಿತ್ತು. ಅವರಿಗೆ ಸರಿಯಾದ ನ್ಯಾಯ ಸಿಗದಿದ್ದರೆ ಬಿಜೆಪಿಯಿಂದ ಕೋರ್ಟ ಮೆಟ್ಟಿಲೇರಬೇಕಾಗುತ್ತದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ನೀಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾರ ಅವಧಿಯಲ್ಲಿ ಹಕ್ಕುಪತ್ರ ಹಂಚಿಕೆಯಾಗಲಿ ಅಧಿಕಾರದಲ್ಲಿದ್ದವರು ನಿಭಾಯಿಸಬೇಕು ಅದನ್ನು ಬಿಟ್ಟು ರಾಜಕೀಯದಲ್ಲಿ ನುಣುಚಿಕೊಳ್ಳುವುದು ಸರಿಯಲ್ಲ. ಸೋಂಪುರ ರಸ್ತೆಯಲ್ಲಿನ ಸರ್ವೇ ನಂ.೮೪೨/೨ ಜಾಗೆಯ ವಿವಾದಕ್ಕೆ ಸಂಬಂಧಿಸಿದಂತೆ ಒಟ್ಟು ೧೭ ಎಕರೆ ೩೦ ಜಮೀನು ಇತ್ತು ೪-೫-೭೨ರಲ್ಲಿ ಚಂದ್ರಾಮಪ್ಪ ಶರಣಪ್ಪ ಮಲ್ಲಪ್ಪ ಅಗಸರ ೮ಎ ೩೫ ಗು, ಇದರಲ್ಲಿ ೧೦ ಗು ಅ ಕರಾಬ, ೧೯೭೨ರಲ್ಲಿ ಮರಬಿ ಕರ್ಜಗಿ ಅವರಿಗೆ ಖರೀದಿಯಾಗಿದೆ ನಂತರ ೮೪೨/೧ ರ ೩-೪-೮೪ ರಲ್ಲಿ ಸಿದ್ರಾಮಪ್ಪ ಕುರಡಿ ಹಾಗೂ ೪ ಎಕರೆ ೩೫ಗು ಮಲ್ಲಪ್ಪ ಮನಗೂಳಿ ಅವರಿಗೆ ಖರೀದಿಯಾಗುತ್ತದೆ. ೨ಎ ೧೦ ಗು ಸೈಪನ್ ಕರ್ಜಗಿ ಅವರಹೆಸರಿಗೆ ಖರೀದಿಯಾಗುತ್ತದೆ ೧೯೯೫ರಲ್ಲಿ ೯ಎ ೩೫ ಗು, ೩ಎ ೩೯ಗು ಹೀಗೆ ಒಟ್ಟು ೧೫ ಎ ೨೦ ಕಂದಾಯ ನಿರೀಕ್ಷಕರಿಗೆ ಭು ಸ್ವಾದೀನವಾಗಿದೆೆ ಎನ್ನುವುದು ಇತಿಹಾಸ ಹೇಳುತ್ತದೆ

ಪಟ್ಟಣದಲ್ಲಿ ಜಾಗೆಗಳ ಎಲ್ಲಿ ಸಮಸ್ಯೆಗಳು ಎದ್ದಿವೆ ಎಂದರೆ ಅಲ್ಲಿ ಮನಗೂಳಿ ಅವರ ವಾಸನೆ ಎದ್ದು ಕಾಣುತ್ತದೆ. ಎಲ್ಲಿ ಖುಲ್ಲಾ ಜಾಗೆಗಳಿಗೆ ಅಲ್ಲಿ ಇವರ ಹೆಸರು ಕೇಳಿ ಬರುತ್ತಿದೆ ಎನ್ನುವುದು ಸುಳ್ಳಲ್ಲ ನನ್ನ ಅವಧಿಯಲ್ಲಿ ಇಂತಹ ಹಗರಣಗಳಿವೆ ಎನ್ನುವ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲೆಸೆದರು.

ಸುಪ್ರೀಂಕೋರ್ಟ ಆದೇಶದ ಹಿನ್ನೆಲೆಯಲ್ಲಿ ೮೪ ಬಡಕುಟುಂಬಗಳ ಮನೆಗಳನ್ನು ತಹಶೀಲ್ದಾರ ಹಾಗೂ ಪುರಸಭೆ ಸಿಬ್ಬಂದಿ ತೆರವುಗೊಳಿಸಿದ್ದಾರೆ ಅದು ಅವರ ಕೆಲಸ ಆಡಳಿತದಲ್ಲಿರುವವರು ಜನತೆ ಒಳ್ಳೆಯ ಸಂದೇಶ ನೀಡುವ ಕೆಲಸ ನಡೆಯಬೇಕು. ಎಲ್ಲದರಲ್ಲಿ ರಾಜಕೀಯ ಮಾಡಬಾರದು ಎಂದು ಇಲ್ಲಿಯವರೆಗೆ ನಾನು ಸುಮ್ಮನೆ ಕುಳಿತಿದ್ದೆ ಬಡವರ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎನ್ನುವ ಕಾರಣಕ್ಕೆ ಬೀದಿಗೆ ಇಳಿಯುವ ಪ್ರಸಂಗ ಬಂದಿದೆ. ನನ್ನ ೧೨ ವರ್ಷದ ಅವಧಿಯಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಬೇಕಾದರೆ ೧೩೬ ಜನರಿಗೆ ಅವರಿಗೆ ಸೂರು ಕಲ್ಪಿಸಿ ತೆರವುಗೊಳಿಸಲಾಗಿದೆ. ಬಡವರಿಗೆ ಅನ್ಯಾಯವಾಗದ ಹಾಗೆ ನಡೆದುಕೊಂಡಿದ್ದೇನೆ. ಅಲ್ಲದೆ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸುಣಗಾರ ಹೊಲದ ಹತ್ತಿರ, ೧೩ ಎಕರೆ, ಅಂತರಗಂಗಿ ರಸ್ತೆಯಲ್ಲಿ ೧೦ ಎಕರೆ ಹೀಗೆ ೨೩ ಎಕರೆ ಜಮೀನು ಖರೀದಿ ಮಾಡಿದ್ದೇನೆ ಕಾಲಾವಕಾಶ ಸಿಗದ ಕಾರಣ ಹಂಚಿಕೆ ಮಾಡಲಾಗಲಿಲ್ಲ. ಇವರು ಎಲ್ಲದರಲ್ಲಿ ಇವರ ಅಧಿಕಾರ ದರ್ಪ ತೋರಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ರಾಜ್ಯದಲ್ಲಿ ವಿಪರಿತ ಮಳೆಯಿಂದ ಬೆಳೆಗಳು ಹಾಳಾಗಿವೆ ಸಮೀಕ್ಷೆ ಕಾರ್ಯ ನಡೆಯುತ್ತಿಲ್ಲ ಎನ್ನುವ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಮಲಗಿಬಿಟ್ಟಿದೆ ಅದನ್ನು ಎಚ್ಚರಿಸಲು ಅ. ೨ ರವರೆಗೆ ಸಾಮಾಜಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಎಂದರು.

ಈ ವೇಳೆ ಜಿಲ್ಲಾ ಪ್ರಕೋಷ್ಠಕ ಮಲ್ಲಿಕಾರ್ಜುನ ಜೋಗುರ, ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಮಂಡಲ ಅದ್ಯಕ್ಷ ಸಂತೋಷ ಪಾಟೀಲ ಡಂಬಳ, ಎಂ.ಎಸ್.ಮಠ, ಬಿ.ಎಚ್.ಬಿರಾದಾರ, ಗುರು ತಳವಾರ, ಸಿದ್ದರಾಮ ಆನಗೊಂಡ, ಸಿದ್ದಲಿಂಗಯ್ಯ ಹಿರೇಮಠ, ಪೀರು ಕೆರೂರ ಸೇರಿದಂತೆ ಅನೇಕರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group