spot_img
spot_img

ಆರೋಗ್ಯದ ನಿರ್ಲಕ್ಷ ಬೇಡ – ಶಾಸಕ ರಮೇಶ ಭೂಸನೂರ

Must Read

spot_img
- Advertisement -

ಸಿಂದಗಿ: ಇಂದಿನ ಕಲುಷಿತ ವಾತಾವರಣದಲ್ಲಿ ರೋಗಗಳು ನೈಸರ್ಗಿಕವಾಗಿ ಹರಡುತ್ತಿದ್ದು ಕಾರಣ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಮನುಷ್ಯ ಆರೋಗ್ಯದಿಂದ ಇದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಪ್ರಗತಿ ಪರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ, ಶಾಸಕ ರಮೇಶ ಭೂಸನೂರ ಅವರ ನೇತೃತ್ವದಲ್ಲಿ, ವಿಜಯಪುರದ ಉಟಗಿ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಉಪಯೋಗಕ್ಕೆಂದು ಇಂಥ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಬಡ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ತಜ್ಞ ವೈದ್ಯರ ಸಲಹೆ ಚಿಕಿತ್ಸೆ ಪಡೆಯಬೇಕು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಬಡ ಜನರಲ್ಲಿ ಬಿಪಿ, ಶುಗರ್, ಹೃದಯರೋಗ, ಕಿಡ್ನಿ ಸಮಸ್ಯೆಗಳು ಕಾಡಲಾರಂಭಿಸಿವೆ ಇಂಥ ಉಚಿತ ಶಿಬಿರದ ಮೂಲಕ ಚಿಕಿತ್ಸೆ ಕೊಡಿಸಿದರೆ ಅಂಥವರನ್ನು ರೋಗದಿಂದ ಪಾರು ಮಾಡಬಹುದಾಗಿದೆ ಎಂದರು.

ವಿಜಯಪುರದ ಉಟಗಿ ಆಸ್ಪತ್ರೆಯ ವೈದ್ಯ ಡಾ.ಮಲ್ಲಿಕಾರ್ಜುನ ಉಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಬಾಳಪ್ಪ ಭೂಸನೂರ ಔಷಧಾಲಯವನ್ನು ಉದ್ಘಾಟಿಸಿದರು.

- Advertisement -

ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ತಳವಾರ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ, ಶ್ರೀಮಂತಗೌಡ ನಾಗೂರ, ತಾಪಂ ಸದಸ್ಯ ಶಂಕರಲಿಂಗ ಕಡ್ಲೇವಾಡ, ಕೇಶವ ಜೋಶಿ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪುರ, ಉಪಾಧ್ಯಕ್ಷೆ ರೂಪಾ ನಂದಿ, ಪಿಡಿಓ ಶರಣಗೌಡ ಕಡ್ಲೇವಾಡ, ಶರಣಪ್ಪ ಗುಬ್ಬೇವಾಡ, ವಿರುಪಾಕ್ಷಿ ಗಂಗನಳ್ಳಿ, ಸಿದ್ದಾರಾಮ ಹಂಗರಗಿ, ಪಂಚಾಕ್ಷರಿ ಖೇಳಗಿ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಸೊನ್ನ, ಎಸ್.ಎಸ್.ಚಂಡಕಿ, ಡಾ.ಶೃತಿ ಉಟಗಿ, ಡಾ.ಮಂಜುನಾಥ ಭೂಸನೂರ, ಡಾ.ಪ್ರೇಮಸಾಗರ ದೇಸಾಯಿ, ಡಾ.ಬಿಡಿ.ಕಟಗೇರಿ, ಡಾ.ರಾಘವೇಂದ್ರ ಇಜೇರಿ, ಡಾ.ಶಕುಂತಲಾ ಹಳ್ಳಿ ಇದ್ದರು.

ಎ.ಎಂ.ಮರಾಠೆ ಸ್ವಾಗತಿಸಿದರು, ಜಿ.ಎಲ್.ಪತ್ತಾರ ನಿರೂಪಿಸಿದರು, ಎಸ.ಐ.ಹೂಗಾರ ವಂದಿಸಿದರು.

- Advertisement -
- Advertisement -

Latest News

ಸೊಲ್ಲಾಪುರದಲ್ಲಿ ಯಶ ಕಂಡ ಕಡಾಡಿ ತಂತ್ರ

ಮೂಡಲಗಿ - ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಉಸ್ತುವಾರಿ ಕೊಟ್ಟಿದ್ದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಸೊಲ್ಲಾಪುರ ಮತ್ತು ಧಾರಾಶಿವ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಕಳೆದ ಒಂದುವರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group