spot_img
spot_img

ಮತ ಯಾರಿಗಾದರೂ ಹಾಕಿ ಆದರೆ NOTA ಕ್ಕೆ ಹಾಕಬೇಡಿ !

Must Read

- Advertisement -

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ನೀವು ಯಾವುದೋ ಒಂದು ಗೊಂದಲದಲ್ಲಿ ಇರುತ್ತೀರಿ. ವಿವಿಧ ಪಕ್ಷಗಳು ತಮ್ಮ ಪ್ರಚಾರದ ವೈಖರಿಯಿಂದ ನಿಮ್ಮನ್ನು ಹಿಡಿದಿಟ್ಟುಕೊಂಡಿವೆ. ಒಂದು ಪಕ್ಷದ ಪ್ರಚಾರ ಸಭೆಯಲ್ಲಿ ನಾಯಕರು ಮಾತನಾಡುವುದನ್ನು ಕೇಳಿದಾಗ ಅವರಿಗೇ ಮತ ಹಾಕಬೇಕೆಂದು ನಿರ್ಧಾರ ಮಾಡುತ್ತೀರಿ. ಮರುದಿನ ಬೇರೆ ಪಕ್ಷದ ಪ್ರಚಾರ ಸಭೆಯಲ್ಲಿ ಆ ನಾಯಕರು ಮಾತನಾಡುವುದನ್ನು ಕೇಳಿ, ಅರೆ ! ಹೌದಲ್ಲ, ಇನ್ನು ಇದೇ ಪಕ್ಷಕ್ಕೆ ಮತ ಹಾಕಬೇಕು ಎನಿಸುತ್ತದೆ ! ಇದರಿಂದ ಗೊಂದಲ ಹೆಚ್ಚಾಗುತ್ತದೆ ಮತದಾನ ಸಮೀಪ ಬಂದಂತೆ ಈ ಗೊಂದಲ ಇನ್ನೂ ಪರಿಹಾರವಾಗಿರುವುದಿಲ್ಲ. ಆಗ ನಿಮಗೆ ಕಂಡು ಬರುವುದೇ ಈ NoTA ( non of the above ) ಎಂಬ ಪರಿಹಾರ! ತಕ್ಷಣವೇ ನೋಟಾ ಎಂಬ ಬಟನ್ ಗೆ ಮತ ಒತ್ತಿ ಬರುತ್ತೀರಿ.

NOTA ಎಂಬುದು None of the Above ಎಂಬುದರ ಸಂಕ್ಷಿಪ್ತ ರೂಪ. ಅಂದರೆ ಚುನಾವಣೆಗೆ ಸ್ಪರ್ಧೆ ಮಾಡಿರುವವರಲ್ಲಿ ಯಾರಿಗೂ ಮತ ಹಾಕಲು ನಿಮಗೆ ಮನಸ್ಸಿಲ್ಲದಿದ್ದರೆ ಈ ನೋಟಾಕ್ಕೆ ನೀವು ಮತ ಹಾಕಬಹುದು ಎಂದು ಚುನಾವಣಾ ಆಯೋಗ ಈ ಆಯ್ಕೆಯನ್ನು ಇಟ್ಟಿದೆ.

ಚುನಾವಣಾ ಆಯೋಗದ ಕ್ರಮವೇನೋ ಒಂದು ರೀತಿಯಲ್ಲಿ ಸರಿಯಾಗಿದೆ ಆದರೆ ನೋಟಾಕ್ಕೆ ಮತ ಹಾಕುವುದರಿಂದ ಸಿಗುವ ಪರಿಹಾರವೇನು ಎಂಬುದಕ್ಕೆ ಆಯೋಗ ಉತ್ತರ ಕೊಡುವುದಿಲ್ಲ. ಒಂದರ್ಥದಲ್ಲಿ ನೋಟಾಕ್ಕೆ ಬೀಳುವ ಪ್ರತಿಯೊಂದು ಮತವೂ ವ್ಯರ್ಥವೆಂದೇ ಹೇಳಬೇಕು !
ಯಾಕೆಂದರೆ, ಈ ಮೇಲಿನ ಯಾರಿಗೂ ನಾನು ಮತ ನೀಡುವುದಿಲ್ಲ ಎಂದಾಗ ಅವರು ಯಾರೂ ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅರ್ಹರಲ್ಲ ಎಂದಾಯಿತು. ಅವರು ಅರ್ಹರಲ್ಲ ಎಂದರೆ ಅವರನ್ನು ಯಾಕೆ ಮನೆಗೆ ಕಳಿಸಬಾರದು ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಚುನಾವಣಾ ಆಯೋಗ ಪರಿಹಾರ ಹೇಳಬೇಕಾಗಿತ್ತು ಆದರೆ ಅದು ಸುಮ್ಮನೆ ಕಾಟಾಚಾರಕ್ಕೆ ಈ ನೋಟಾ ಎಂಬ ಕಾಲಂ ಮಾಡಿ ಕೈ ತೊಳೆದುಕೊಂಡಿದೆ.

- Advertisement -

ಹಾಗೆ ನೋಡಿದರೆ ಈ ನೋಟಾ ಬಟನ್ ಗೆ ತುಂಬ ತುಂಬ ಮಹತ್ವವಿದೆ. ಅದನ್ನು ಚುನಾವಣಾ ಆಯೋಗ ಸಾರಿ ಹೇಳಬೇಕಾಗಿತ್ತು. ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಹೆಚ್ಚಿನ ಪ್ರಾಮುಖ್ಯವಿದೆ. ಮತದಾರರು ಹೆಚ್ಚಿನ ಪ್ರಮಾಣದಲ್ಲಿ ನೋಟಾಕ್ಕೆ ಮತ ಚಲಾಯಿಸಿದಾಗ ಆ ಕ್ಷೇತ್ರಕ್ಕೆ ಅದೇ ಆಯ್ಕೆಯಾಗುತ್ತದೆ ಅದರ ಅರ್ಥ ಸದ್ಯಕ್ಕೆ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿ ಆ ಕ್ಷೇತ್ರಕ್ಕೆ ಯೋಗ್ಯನಲ್ಲ ಅಂತಾಯಿತು. ಹಾಗಾದಾಗ ಚುನಾವಣಾ ಆಯೋಗ ಆ ಎಲ್ಲಾ ಸ್ಪರ್ಧಿಗಳನ್ನು ಹಿಂದಕ್ಕೆ ಕರೆಸಿ ಬೇರೆ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವದಲ್ಲಿ ನೋಟಾ ಎಂಬ ಮತಕ್ಕೆ ಬೆಲೆ ಬರುತ್ತದೆ.
ಆದರೆ ಈಗಂತೂ ಈ ಅವಕಾಶ ಇಲ್ಲ. ಮುಂದಿನ ಚುನಾವಣೆಗಳಲ್ಲಿ ಈ ಕಾಯ್ದೆಯನ್ನು ಆಯೋಗ ಜಾರಿಗೆ ತರಬಹುದು. ಅಲ್ಲಿಯತನಕ ಈ NOTA ಬಟನ್ ಗೆ ಮತದಾರರು ಮತ ಹಾಕದಿರುವುದೇ ಒಳ್ಳೆಯದು. ಅಂದರೆ ತಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳಬಾರದು.

ಕಳೆದ ಸಲದ ಚುನಾವಣೆಯಲ್ಲಿ ನೋಟಾಕ್ಕೆ ಶೇ. ೧.೦೪ ರಷ್ಟು ಭಾರತೀಯರು ಮತ ಚಲಾಯಿಸಿದ್ದರಂತೆ. ಅಂದರೆ ಅಷ್ಟು ಮತಗಳು ಮತಗಟ್ಟೆಯವರೆಗೂ ಬಂದು ಅಭ್ಯರ್ಥಿಗಳಿಗೆ ದಕ್ಕಲಿಲ್ಲ. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ !
ಆದ್ದರಿಂದ ಪ್ರಜ್ಞಾವಂತ ಮತದಾರರು ಏನೇ ಆಗಲಿ ನೋಟಾಕ್ಕೆ ಮತ ಹಾಕಬೇಡಿ. ಅದರಿಂದ ಯಾವುದೇ ಪ್ರಯೋಜನವಿಲ್ಲ. ಮತವನ್ನಂತೂ ಹಾಕಲೇಬೇಕು. ಮನೆಯಲ್ಲಿ ಕುಳಿತು ಮತ ಹಾಕದೆ ನಮಗೆ ಅದು ಸಿಗಲಿಲ್ಲ, ಇದು ಸಿಗಲಿಲ್ಲ, ಅವನು ಸರಿಯಿಲ್ಲ, ಇವನು ಸರಿಯಿಲ್ಲ ಎಂದು ಬರೀ ವಿಷಾದಪಡುತ್ತ ನಿಟ್ಟುಸಿರು ಬಿಡುವುದಕ್ಕಿಂತ ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿಗೆ ಮತ ಹಾಕಿ ಸಮಾಧಾನ ಪಟ್ಟುಕೊಳ್ಳುವುದು ಲೇಸು.
So no NOTA, only Vote !

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group