ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ – ಈರಣ್ಣ ಕಡಾಡಿ ಭವಿಷ್ಯ

Must Read

ಮೂಡಲಗಿ: ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು ನಡೆಯುತ್ತಿದ್ದು ಅಕ್ಟೋಬರ್-ನವ್ಹೆಂಬರ ತಿಂಗಳಿನಲ್ಲಿ ಬಾರಿ ಬದಲಾವಣೆ ಆಗಲಿದೆ ಎಂದು ರಾಜ್ಯ ಸರ್ಕಾರದ ಸಹಕಾರ ಸಚಿವ ಕೆ. ಎನ್. ರಾಜಣ್ಣ ಹೇಳಿಕೆ ಗಮನಿಸಿದರೆ ಮತ್ತು ಕಾಂಗ್ರೆಸ್‌ನಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದರೇ ಮುಂದಿನ ದಿನಗಳಲ್ಲಿ ಡಂಬಲ್ ಇಂಜಿನ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.

ಶನಿವಾರ ಜೂ-28 ರಂದು ಹಳ್ಳೂರ ಗ್ರಾಮದ ಹಳ್ಳದರಂಗ ದೇವಸ್ಥಾನ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 50 ಲಕ್ಷ ರೂ,ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ದಿನನಿತ್ಯ ಹಗರಣಗಳು, ಮಂತ್ರಿಗಳ ಕಚ್ಚಾಟ, ರಾಜ್ಯದಲ್ಲಿ ಅರಾಜಕತೆ, ಆರ್ಥಿಕ ಸಂಕಷ್ಟಗಳು ಈ ರೀತಿ ಸಮಸ್ಯೆಗಳ ಸರಮಾಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ರಾಜ್ಯದ ಜನರಿಗೆ ಅಭಿವೃದ್ದಿ ಎಂಬುವುದು ಮರಿಚಿಕೆಯಾಗಿದೆ. ಕಾಂಗ್ರೇಸ್ ಶಾಸಕರೆ ಸರ್ಕಾರದ ಕಾರ್ಯ ವೈಖರಿಗಳ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿರುವುದು ಎದ್ದು ಕಾಣುತ್ತಿದೆ. ರಾಜ್ಯದ ಜನ ಅಭಿವೃದ್ದಿ ಪರವಾದ ಸರ್ಕಾರವನ್ನು ಬಯಸುತ್ತಿದ್ದಾರೆ ಎಂದರು.

ಈಗಾಗಲೇ ಹಳ್ಳೂರ ಗ್ರಾಮಕ್ಕೆ ರಾಜ್ಯಸಭಾ ಸಂಸದರ ನಿಧಿಯಿಂದ ಹಳ್ಳದರಂಗ ಸಮುದಾಯ ಭವನಕ್ಕೆ 50 ಲಕ್ಷ ರೂ.ಗಳು, ಚಂದ್ರವ್ವದೇವಿ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಮಲ್ಲಿಕಾರ್ಜುನ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಗಾಂಧಿ ನಗರದ ಬಸವೇಶ್ವರ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಆಧಿನಾಥ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಬಸ್ ಪ್ರಯಾಣಿಕರ ತಂಗುದಾಣಕ್ಕೆ 5 ಲಕ್ಷ ರೂ.ಗಳು ಹೀಗೆ ಎಲ್ಲ ಸಮುದಾಯದವರಿಗೂ ಕೂಡಾ ದೊಡ್ಡ ಪ್ರಮಾಣದಲ್ಲಿ ಅನುದಾನವನ್ನು ವಿತರಿಸುವ ಮೂಲಕ ಹಳ್ಳೂರ ಗ್ರಾಮದ ಅಭಿವೃದ್ದಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಒಂದು ಓಪನ್ ಜಿಮ್ ಸೌಲಭ್ಯ ಒದಗಿಸಿ ಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ, ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಚನ್ನಮ್ಮ ವೃತ್ತದ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಪೂಜೆ ನೆರವೇರಿಸಿದರು. ತದನಂತರ ಚಂದ್ರವ್ವದೇವಿ ದೇವಸ್ಥಾನದ ಹತ್ತಿರ ನಿರ್ಮಾಣಗೊಂಡ ಸಮುದಾಯ ಭವನ ಕಟ್ಟಡವನ್ನು ಉದ್ಘಾಟಿಸಿದರು,

ಈ ಸಂದರ್ಭದಲ್ಲಿ, ಗ್ರಾ.ಪಂ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ಸದಸ್ಯರಾದ ಸದಾಶಿವ ಮಾವರಕರ, ಪ್ರಮುಖರಾದ ಬಸವಣೆಪ್ಪ ಡಬ್ಬನ್ನವರ, ಶಂಕರ ಲೋಕನ್ನವರ, ಕುಮಾರ ಲೋಕನ್ನವರ, ಶಿವಪ್ಪ ಕೌಜಲಗಿ, ಶ್ರೀಕಾಂತ ಕೌಜಲಗಿ, ಸುರೇಶ ಮಗದುಮ್ಮ, ತುಕಾರಾಮ ಸನದಿ, ಮುತ್ತೆಪ್ಪ ಬೋಳನ್ನವರ, ಬಾಳಗೌಡ ಪಾಟೀಲ, ಗೂಳಪ್ಪ ನೇಸೂರ, ಯಲ್ಲಪ್ಪ ಕುಲಗೋಡ, ಆನಂದ ಸಂತಿ ಗಿರಿಮಲ್ಲಪ್ಪ ಕಲ್ಲೋಳಿ, ಗಿರಮಲ್ಲಪ್ಪ ಸಂತಿ, ಲಕ್ಷ್ಮಣ ಹೊಸಟ್ಟಿ, ಈರಪ್ಪ ಢವಳೇಶ್ವರ, ಶ್ರೀಶೈಲ ಪೂಜೇರಿ, ಬಸವರಾಜ ಗಾಡವಿ, ಚಂದ್ರಶೇಖರ ಸಪ್ತಸಾಗರ, ಪ್ರವೀಣ ಮಾವರಕರ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group