ಸಾಮಾಜಿಕ ಸಮಾನತೆಯ ಹರಿಕಾರ ಡಾ. ಅಂಬೇಡ್ಕರ- ಮರ್ದಿ

0
358

ಮೂಡಲಗಿ – ಸಾಮಾಜಿಕ ಸಮಾನತೆಯ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರಲ್ಲಿ ಅಂಬೇಡ್ಕರ್ ಕೂಡಾ ಒಬ್ಬರು. ಅವರು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಮತ್ತು ದಲಿತರು ಇತರೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದರು ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.

ಅವರು ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 131 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಡಾ. ಅಂಬೇಡ್ಕರರವರು ಎಲ್ಲ ವರ್ಗದವರಿಗೂ ಶಿಕ್ಷಣ ಸಿಗಬೇಕೆಂದು ಪ್ರತಿಪಾದಿಸಿದರು. ಅಲ್ಲದೆ ವಿಶ್ವದ ಬೇರೆ ಬೇರೆ ದೇಶಗಳ ಸಂವಿಧಾನಗಳ ಬಗ್ಗೆ ತಿಳಿದುಕೊಂಡು ಬೇರೆ ದೇಶಗಳಿಗಿಂತ ವಿಭಿನ್ನವಾಗಿ ಸಂವಿಧಾನವನ್ನು ರಚಿಸಿದ್ದಾರೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಗ್ರಾಮ ಪಂಚಾಯತ ಸದಸ್ಯರಾದ ಸುನಂದಾ ಭಜಂತ್ರಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರರವರು ಒಂದೇ ಜಾತಿ ಜನಾಂಗದವರಿಗೆ ಮಾತ್ರ ಮೀಸಲಾಗದಂತೆ ಎಲ್ಲ ಧರ್ಮ ಜಾತಿ ಜನಾಂಗದವರಿಗೆ ಉದ್ಯೋಗ ಮತ್ತು ಹಕ್ಕುಗಳು ಸಮಾನವಾಗಿರುವಂತೆ ಕಾನೂನು ರಚಿಸಿದ್ದಾರೆ. ಕಾರಣ ಅವರನ್ನು ಒಂದೇ ಜಾತಿ ಮತಕ್ಕೆ ಸೀಮಿತಪಡಿಸದೆ ಅವರು ಭಾರತ ದೇಶದ ಸರ್ವ ಜನಾಂಗದ ರಾಷ್ಟ್ರ ನಾಯಕರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಕುಮಾರ ಮರ್ದಿ ಉಪಾದ್ಯಕ್ಷರಾದ ಮಹಾದೇವಿ ಗದಾಡಿ, ಸದಸ್ಯರಾದ ಸುನಂದಾ ಭಜಂತ್ರಿ, ಯಲ್ಲವ್ವ ಬಿಳಿಗೌಡ್ರ. ಗಂಗಾರಾಮ ಹಮ್ಮನವರ, ಗೋವಿಂಧ ನಾಂವಿ, ಆನಂದ ಉಪ್ಪಾರ, ಪ್ರಧಾನ ಗುರುಗಳಾದ ಎ.ವ್ಹಿ. ಗಿರೆಣ್ಣವರ, ಹಾಗೂ ಶಿಕ್ಷಕರಾದ ವಿಮಲಾಕ್ಷಿ ತೋರಗಲ್ಲ, ಕುಸುಮಾ ಚಿಗರಿ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಸಂಗೀತಾ ತಳವಾರ, ಶೀಲಾ ಕುಲಕರ್ಣಿ, ಖಾತೂನ ನದಾಫ, ಹೊಳೆಪ್ಪಾ ಗದಾಡಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ಮಂಜುನಾಥ ಕಮ್ಮಾರ ಉಪಸ್ಥಿತರಿದ್ದರು.