ಕಾಸರಗೋಡು : ವಿಶ್ವ ರಾಮಕ್ಷತ್ರಿಯ ಮಹಾಸಂಘದ ವತಿಯಿಂದ ದಿನಾಂಕ 14.09.2025 ರಂದು ಶ್ರೀ ಸೀತಾ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ದ್ವೈವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಇತ್ತೀಚೆಗೆ ಸಾಮಾಜಿಕ ಕ್ಷೇತ್ರದಲ್ಲಿನ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಲಭಿಸಿದ ಡಾಕ್ಟರೇಟ್ ಪದವಿಯನ್ನು ಹಾಗೂ ಕಾಸರಗೋಡು ಕನ್ನಡ ಭವನ ಮುಖಾಂತರ ನಡೆಸುತ್ತಿರುವ ಕನ್ನಡ ಪರ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಉಚಿತ ಸಾರ್ವಜನಿಕ ವಾಚನಾಲಯ ಸೇವೆ, ಕನ್ನಡ ಭವನ ಪ್ರಕಾಶನ ಮೂಲಕ ರಾಮಕ್ಷತ್ರಿಯ ಸಮಾಜದ 9ಮಂದಿಯ ಪುಸ್ತಕ ರಚಿಸಿ, ಬಿಡುಗಡೆ ಇತ್ಯಾದಿ ಜನಪರ ಕಾಳಜಿಯನ್ನು ಗಮನಿಸಿ ಸಮಾಜದ ಪರವಾಗಿ ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ದಂಪತಿಗಳನ್ನು ಸನ್ಮಾನಿಸಿದರು.
ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷರಾದ ಎಚ್ ಆರ್ ಶಶಿಧರ್ ನಾಯ್ಕ್, ಕಾರ್ಯಾಧ್ಯಕ್ಷ ನಾಗರಾಜ್ ಕಲ್ಪತರು, ಪ್ರದಾನ ಕಾರ್ಯದರ್ಶಿ ಶ್ರೀಧರ್ ಪಿ. ಎಸ್. ಕೋಶಾಧಿಕಾರಿ ಶಂಕರ್ ಕುಂದಾಪುರ, ಬಿ. ಎಂ ನಾಥ್, ರೇಖಾ ಸುದೇಶ್ ರಾವ್. ಮಂಜುನಾಥ್, ಗಣಪತಿ ಹೋಬಳಿದಾರ್,ಸತೀಶ್ ದೊಡ್ಡ ನಾಯ್ಕ್, ಲಕ್ಷ್ಮೀಶ್ ಹವಾಲ್ದಾರ್, ಶ್ರೀನಿವಾಸ್ ಹೆಬ್ರಿ ಮುಂತಾದವರಿದ್ದರು.

